Home> Health
Advertisement

Diabetes: ಮಧುಮೇಹ ರೋಗಿಗಳಿಗೆ ತುಂಬಾ ಪರಿಣಾಮಕಾರಿಯಾಗಿದೆ ಜಾಮೂನ್ ವಿನೆಗಾರ್

Jamun Vinegar Benefits: ವಿಟಮಿನ್ ಸಿ, ಉತ್ಕರ್ಷಣ ನಿರೋಧಕಗಳು, ಕಬ್ಬಿಣ, ಕ್ಯಾಲ್ಸಿಯಂನಂತಹ ಸಮೃದ್ಧ ಪೋಷಕಾಂಶಗಳು ಜಾಮೂನಿನಲ್ಲಿ ಕಂಡುಬರುತ್ತವೆ. ಮಧುಮೇಹ ರೋಗಿಗಳಿಗೂ ಜಾಮೂನ್ ವಿನೆಗರ್ ತುಂಬಾ ಪ್ರಯೋಜನಕಾರಿಯಾಗಿದೆ.

Diabetes: ಮಧುಮೇಹ ರೋಗಿಗಳಿಗೆ ತುಂಬಾ ಪರಿಣಾಮಕಾರಿಯಾಗಿದೆ ಜಾಮೂನ್ ವಿನೆಗಾರ್

Jamun Vinegar Benefits: ಜಾಮೂನ್ ತಿನ್ನಲು ಎಷ್ಟು ರುಚಿಕರವಾಗಿದೆಯೋ ಅಷ್ಟೇ ನಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಜಾಮೂನ್ ವಿನೆಗರ್ ನಮ್ಮನ್ನು  ಹಲವು ರೋಗಗಳಿಂದ ದೂರವಿರಿಸುತ್ತದೆ. ಇದಲ್ಲದೆ, ನೀವು ಜಾಮೂನ್ ವಿನೆಗರ್ ಅನ್ನು ಸೇವಿಸಲು ಪ್ರಾರಂಭಿಸಿದರೆ, ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಸಹ ಗುನಮುಖವಗುತ್ತವೆ. ವಿಟಮಿನ್ ಸಿ, ಉತ್ಕರ್ಷಣ ನಿರೋಧಕಗಳು, ಕಬ್ಬಿಣ, ಕ್ಯಾಲ್ಸಿಯಂನಂತಹ ಸಮೃದ್ಧ ಪೋಷಕಾಂಶಗಳು ಜಾಮೂನಿನಲ್ಲಿ ಕಂಡುಬರುತ್ತವೆ. ಮಧುಮೇಹ ರೋಗಿಗಳಿಗೂ ಜಾಮೂನ್ ವಿನೆಗರ್ ತುಂಬಾ ಪ್ರಯೋಜನಕಾರಿಯಾಗಿದೆ. ಹಾಗಾದರೆ ಬನ್ನಿ ಜಾಮೂನ್ ವಿನೆಗಾರ್ ನಮ್ಮ ಆರೋಗ್ಯಕ್ಕೆ ಹೇಗೆ ಪ್ರಯೋಜನಕಾರಿಯಾಗಿದೆ ತಿಳಿದುಕೊಳ್ಳೋಣ,

ಜಾಮೂನ್ ವಿನೆಗರ್ ಮಧುಮೇಹ ರೋಗಿಗಳ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ

ಮಧುಮೇಹ ಇರುವ ರೋಗಿಗಳಲ್ಲಿ ಆಗಾಗ್ಗೆ ಸಕ್ಕರೆ ಮಟ್ಟವು ಹೆಚ್ಚಾಗುತ್ತದೆ, ಹೀಗಾಗಿ ಈ ಜನರು ತಮ್ಮ ಆಹಾರದ ಬಗ್ಗೆ ವಿಶೇಷ ಗಮನ ಹರಿಸಬೇಕು. ನಿಮ್ಮ ಆರೋಗ್ಯದ ಬಗ್ಗೆ ಗಮನ ಹರಿಸುವುದರ ಜೊತೆಗೆ, ಸಕ್ಕರೆಯ ಮಟ್ಟವನ್ನು ಹೆಚ್ಚಿಸದಂತಹ ಆಹಾರವನ್ನು ಸೇವಿಸಲು ಪ್ರಯತ್ನಿಸಬೇಕು. ಮಧುಮೇಹ ರೋಗಿಗಳಿಗೆ ಜಾಮೂನ್ ವಿನೆಗರ್ ತುಂಬಾ ಪ್ರಯೋಜನಕಾರಿಯಾಗಿದೆ. ನೀವು ದಿನಕ್ಕೆ ಒಮ್ಮೆ ಇದನ್ನು ಸೇವಿಸಿದರೆ, ನಿಮ್ಮ ಸಕ್ಕರೆ ಮಟ್ಟವು ಸಾಮಾನ್ಯವಾಗಿರುತ್ತದೆ. ಈ ವಿನೆಗರ್ ಅನ್ನು ಒಂದು ಚಮಚದಲ್ಲಿ ತೆಗೆದುಕೊಂಡು ಅದನ್ನು ಒಂದು ಲೋಟ ನೀರಿನಲ್ಲಿ ಮಿಶ್ರಣ ಮಾಡಿ, ನಂತರ ಈ ಮಿಶ್ರಣ ಮಾಡಿದ ನೀರನ್ನು ಕುಡಿಯಬೇಕು.  ಬೆಳಗಿನ ಉಪಾಹಾರದ ಸಮಯದಲ್ಲಿ ನೀವು ಜಾಮೂನ್ ವಿನೆಗರ್ ಅನ್ನು ಸೇವಿಸಿದರೆ ಉತ್ತಮವಾಗಿರುತ್ತದೆ.

ಇದನ್ನೂ ಓದಿ-New Year 2023 ರಲ್ಲಿ ಈ ಕೆಲಸ ಮಾಡಿ, ಹಲವು ರೋಗಗಳಿಂದ ದೂರವಿರಿ

ಈ ಸಮಸ್ಯೆಗಳಲ್ಲೂ ಜಾಮೂನ್ ವಿನೆಗರ್ ಬೆಸ್ಟ್
ಜಾಮೂನ್ ವಿನೆಗರ್ ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಸರಿಪಡಿಸಲು ಬಹಳ ಪರಿಣಾಮಕಾರಿ ಎಂದು ಸಾಬೀತಾಗುತ್ತದೆ. ಚಳಿಗಾಲದಲ್ಲಿ ನಿಮಗೆ ಗಂಟಲು ನೋವು ಅಥವಾ ಕೆಮ್ಮು ಇದ್ದರೆ, ಜಾಮೂನ್ ವಿನೆಗರ್ ಕುಡಿಯುವುದರಿಂದ ಸಾಕಷ್ಟು ಪರಿಹಾರ ಸಿಗುತ್ತದೆ. ಕರೋನಾ ಅವಧಿ ಪ್ರಾರಂಭವಾದಾಗಿನಿಂದ, ಜನರು ಕೆಮ್ಮಿನ ಬಗ್ಗೆ ಬಹಳ ಜಾಗೃತರಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ನೀವು ಯಾವುದೇ ದೀರ್ಘಕಾಲದ ಕೆಮ್ಮನ್ನು ಗುಣಪಡಿಸಲು ಬಯಸಿದರೆ, ಜಾಮೂನ್ ವಿನೆಗರ್ ಅನ್ನು ತೆಗೆದುಕೊಳ್ಳಲು ಪ್ರಾರಂಭಿಸಿ. ಇದಲ್ಲದೆ, ಈ ವಿನೆಗಾರ್ ಸೇವನೆಯಿಂದ ಚರ್ಮವೂ ಕೂಡ ಹೊಸ ಹೊಳಪು ಪಡೆದುಕೊಳ್ಳುತ್ತದೆ. ಜಾಮೂನಿನಲ್ಲಿ ಹೆಚ್ಚಿನ ನೀರಿನ ಅಂಶ ಇರುವುದರಿಂದ, ಇದು ತ್ವಚೆಯ ತೇವಾಂಶವನ್ನು ಕಾಪಾಡುತ್ತದೆ, ವಿನೆಗರ್ ಕುಡಿಯುವುದರಿಂದ ರಕ್ತ ಶುದ್ಧವಾಗುತ್ತದೆ. ಹೀಗಾಗಿ ನಿಮಗೂ ಕೂಡ ಚರ್ಮಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರೆ, ಜಾಮೂನ್ ವಿನೆಗರ್ ಕುಡಿಯಲು ಪ್ರಾರಂಭಿಸಿ. ಇದು ಚರ್ಮವನ್ನು ತುಂಬಾ ಹೊಳೆಯುವಂತೆ ಮಾಡುತ್ತದೆ.

ಇದನ್ನೂ ಓದಿ-Beauty Tips: ಯಂಗ್ ಹಾಗೂ ಬ್ಯೂಟಿಫುಲ್ ಕಾಣಿಸಿಕೊಳ್ಳಬೇಕೇ? ನಿತ್ಯ ಈ ಒಂದು ಕೆಲಸ ಮಾಡಿ ಸಾಕು

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More