Home> Health
Advertisement

Health Tips: ಸ್ಟೀಲ್ ಪಾತ್ರೆಯಲ್ಲಿ ಆಹಾರ ಬೇಯಿಸುವುದರಿಂದಾಗುವ ಈ ಅಡ್ಡ ಪರಿಣಾಮಗಳು ನಿಮಗೂ ಗೊತ್ತಿರಲಿ!

Health Care Tips: ಸ್ಟೀಲ್ ಪಾತ್ರೆಯಲ್ಲಿ ಆಹಾರ ಪದಾರ್ಥಗಳನ್ನು ತಯಾರಿಸುವಾಗ ವಹಿಸಬೇಕಾದ ಎಚ್ಚರಿಕೆಗಳ ಕುರಿತು ಇಂದಿನ ಈ ಲೇಖನದಲ್ಲಿ ನಾವು ನಿಮಗೆ ಮಾಹಿತಿಯನ್ನು ಕೊಡುತ್ತಿದ್ದೇವೆ. ಇದರಿಂದ ಆರೋಗ್ಯಕ್ಕೆ ಯಾವುದೇ ರೀತಿಯ ಹಾನಿ ಉಂಟಾಗುವುದಿಲ್ಲ. 
 

Health Tips: ಸ್ಟೀಲ್ ಪಾತ್ರೆಯಲ್ಲಿ ಆಹಾರ ಬೇಯಿಸುವುದರಿಂದಾಗುವ ಈ ಅಡ್ಡ ಪರಿಣಾಮಗಳು ನಿಮಗೂ ಗೊತ್ತಿರಲಿ!

Stainless Steel Cooking Side Effects: ಇತ್ತೀಚಿನ ದಿನಗಳಲ್ಲಿ ಜನರು ಕ್ರಮೇಣ ಅಲ್ಯೂಮಿನಿಯಂ ಪಾತ್ರೆಗಳಿಂದ ಸ್ಟೇನ್ಲೆಸ್ ಸ್ಟೀಲ್ ಪಾತ್ರೆಗಳಿಗೆ ಬದಲಾಗುತ್ತಿದ್ದಾರೆ. ಅಲ್ಯೂಮಿನಿಯಂ ಪಾತ್ರೆಯಲ್ಲಿ ಆಹಾರವನ್ನು ಬೇಯಿಸುವುದು ಅಥವಾ ತಿನ್ನುವುದು ಆರೋಗ್ಯಕ್ಕೆ ಹಲವಾರು ರೀತಿಯ ಹಾನಿಯನ್ನುಂಟು ಮಾಡುತ್ತದೆ ಎಂದು ಜನರು ನಂಬುತ್ತಾರೆ, ಆದರೆ ಸ್ಟೀಲ್ ಪಾತ್ರೆಯಲ್ಲಿಯೂ ನೀವು ಆಹಾರವನ್ನು ಸರಿಯಾದ ಪದ್ಧತಿಯಲ್ಲಿ ಅಥವಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳದಿದ್ದರೆ, ಅದರಿಂದಲೂ ಕೂಡ ಹಲವು ರೀತಿಯ ಆರೋಗ್ಯ ಹಾನಿ ಉಂಟಾಗಬಹುದು ಎಂಬ ಸಂಗತಿ ನಿಮಗೆ ತಿಳಿದಿದೆಯೇ? ಬನ್ನಿ ತಿಳಿದುಕೊಳ್ಳೋಣ,

ಹೌದು, ಇಂದು ನಾವು ಸ್ಟೀಲ್ ಪಾತ್ರೆಗಳಲ್ಲಿ ಅಡುಗೆ ಮಾಡುವಾಗ ತೆಗೆದುಕೊಳ್ಳಬೇಕಾದ ಕೆಲವು ಮುನ್ನೆಚ್ಚರಿಕೆಗಳ ಬಗ್ಗೆ ಇಂದು ನಾವು ನಿಮಗೆ ಮಾಹಿತಿಯನ್ನು ಕೊಡುತ್ತಿದ್ದೇವೆ. ಇದರಿಂದ ನಿಮಗೆ ಯಾವುದೇ ರೀತಿಯ ಹಾನಿಯಾಗುವುದಿಲ್ಲ. ಸ್ಟೀಲ್ ಪಾತ್ರೆಗಳಲ್ಲಿ ಅಡುಗೆ ಮಾಡುವಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು ಮತ್ತು ಸಲಹೆಗಳು ಯಾವುವು ತಿಳಿದುಕೊಳ್ಳೋಣ ಬನ್ನಿ,

ಹೆಚ್ಚಿನ ಉರಿಯಲ್ಲಿ ಆಹಾರವನ್ನು ಬೇಯಿಸಬೇಡಿ
ನೀವು ಹೊಸ ಸ್ಟೀಲ್ ಪಾತ್ರೆಯಲ್ಲಿ ಗಮನಿಸಿದರೆ, ಹೆಚ್ಚಿನ ಉರಿಯಲ್ಲಿ ಆಹಾರವನ್ನು ಬೇಯಿಸುವಾಗ, ಆಹಾರವು ಆಗಾಗ್ಗೆ ಸುಟ್ಟುಹೋಗುತ್ತದೆ. ಇಲ್ಲಿ ನೀವು ಜಾಗರೂಕರಾಗಿರಬೇಕು. ಹೌದು, ಹೊಸ ಸ್ಟೀಲ್ ಪಾತ್ರೆಯಲ್ಲಿ ಹೆಚ್ಚಿನ ಉರಿಯಲ್ಲಿ ಆಹಾರವನ್ನು ಬೇಯಿಸಬೇಡಿ. ವಾಸ್ತವದಲ್ಲಿ, ಸ್ಟೇನ್‌ಲೆಸ್ ಸ್ಟೀಲ್ ಯಾವುದೇ ರೀತಿಯ ಟೆಫ್ಲಾನ್ ಲೇಪನವನ್ನು ಹೊಂದಿರುವುದಿಲ್ಲ, ಹೀಗಾಗಿ ಆಹಾರ ಅದಕ್ಕೆ ಅಂಟಿಕೊಳ್ಳುತ್ತದೆ. ಆದ್ದರಿಂದ, ನೀವು ಸ್ಟೀಲ್ ನಿಂದ ತಯಾರಿಸಲಾಗಿರುವ ಹೊಸ ಪಾತ್ರೆಯಲ್ಲಿ ಆಹಾರವನ್ನು ಬೇಯಿಸುವಾಗ, ವಿಶೇಷವಾಗಿ ಕಡಿಮೆ ಅಥವಾ ಮಧ್ಯಮ ಉರಿಯಲ್ಲಿ ಆಹಾರವನ್ನು ಬೇಯಿಸಿ.

ಗ್ರಿಲ್ ಮಾಡಬೇಡಿ
ತೆಳುವಾದ ಸ್ಟೀಲ್ ಪ್ಯಾನ್‌ನಲ್ಲಿ ಎಂದಿಗೂ ಗ್ರಿಲ್ ಮಾಡಬಾರದು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ. ಏಕೆಂದರೆ, ಗ್ರಿಲ್ಲಿಂಗ್ಗಾಗಿ, ಯಾವುದೇ ಪಾತ್ರೆಯನ್ನು ದೀರ್ಘಕಾಲದವರೆಗೆ ಜ್ವಾಲೆಯ ಮೇಲೆ ಇರಿಸಬೇಕಾಗುತ್ತದೆ, ಇದರಿಂದಾಗಿ ಲೋಹವು ಹಾನಿಗೊಳಗಾಗುತ್ತದೆ.

ಇದನ್ನೂ ಓದಿ-Insulin Boosters: ಈ ತರಕಾರಿಗಳು ಮತ್ತು ಸಾಂಬಾರ ಪದಾರ್ಥಗಳಿಂದ ದೇಹದ ನೈಸರ್ಗಿಕ ಇನ್ಸುಲಿನ್ ಮಟ್ಟ ಕಾಪಾಡಿ!

ಡೀಪ್ ಫ್ರೈ ಮಾಡಬೇಡಿ
ಸ್ಟೀಲ್ ಪ್ಯಾನ್ ನಲ್ಲಿ ಏನನ್ನಾದರೂ ಡೀಪ್ ಫ್ರೈ ಮಾಡುವ ಬಗ್ಗೆ ನೀವು ಎಂದಾದರೂ ಯೋಚಿಸಿದ್ದರೆ, ಅದನ್ನು ಎಂದಿಗೂ ಮಾಡಬೇಡಿ. ವಾಸ್ತವವಾಗಿ ಸ್ಟೀಲ್ ಪಾತ್ರೆಗಳು ಒಂದು ಸ್ಮೋಕ್ ಪಾಯಿಂಟ್ ಅಥವಾ ಹೊಗೆ ಬಿಂದುವನ್ನು ಹೊಂದಿರುತ್ತವೆ. ನೀವು ಸ್ಟೀಲ್ ಪಾತ್ರೆಯಲ್ಲಿ ಏನನ್ನಾದರೂ ಡೀಪ್ ಫ್ರೈ ಮಾಡಿದಾಗ, ಅದು ಹೊಗೆ ಬಿಂದುವಿನ ಆಚೆಗೆ ತಲುಪುತ್ತದೆ. ಇದರಿಂದಾಗಿ ನಿಮ್ಮ ಉಕ್ಕಿನ ಪಾತ್ರೆಯು ಹಳದಿ ಅಥವಾ ಜಿಗುಟಾದಂತೆ ಕಾಣಲು ಪ್ರಾರಂಭಿಸುತ್ತದೆ. ಆ ಕಲೆ ಹೋಗುವುದು  ತುಂಬಾ ಕಷ್ಟ ಸಾಧ್ಯ.

ಇದನ್ನೂ ಓದಿ-Health Tips: ಎಕ್ಕದ ಎಲೆಗಳನ್ನು ಈ ರೀತಿ ಬಳಸಿದರೆ ಮಧುಮೇಹ ನಿಯಂತ್ರಣಕ್ಕೆ ಬರುತ್ತೆ ಗೊತ್ತಾ?

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆ ಉಪಾಯ ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More