Home> Health
Advertisement

Side Effects Of Jeera: ತೂಕ ಇಳಿಸಿಕೊಳ್ಳಲು ನೀವೂ ಜೀರಿಗೆ ಸೇವಿಸುತ್ತೀರಾ..?

ಜೀರಿಗೆಯ ಅಡ್ಡಪರಿಣಾಮಗಳು: ಆಹಾರದ ರುಚಿ ಹೆಚ್ಚಿಸಲು ಅಥವಾ ತೂಕ  ಕಡಿಮೆ ಮಾಡಲು ಜನರು ಜೀರಿಗೆಯನ್ನು ಸೇವಿಸುತ್ತಾರೆ. ಆದರೆ ಹೆಚ್ಚಿನ ಪ್ರಮಾಣದಲ್ಲಿ ಜೀರಿಗೆ ಸೇವನೆಯಿಂದ ದೇಹಕ್ಕೆ ಏನೆಲ್ಲಾ ಹಾನಿಯುಂಟಾಗುತ್ತದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

Side Effects Of Jeera: ತೂಕ ಇಳಿಸಿಕೊಳ್ಳಲು ನೀವೂ ಜೀರಿಗೆ ಸೇವಿಸುತ್ತೀರಾ..?

ನವದೆಹಲಿ: ಆಹಾರದ ರುಚಿ ಹೆಚ್ಚಿಸಲು ಅಥವಾ ತೂಕ ಕಡಿಮೆ ಮಾಡಲು ಜನರು ಜೀರಿಗೆಯನ್ನು ಸೇವಿಸುತ್ತಾರೆ. ಏಕೆಂದರೆ ಜೀರಿಗೆ ಪ್ರತಿಯೊಂದು ರೋಗಕ್ಕೂ ಮದ್ದು. ವಿಟಮಿನ್ ಇ, ಎ, ಕಬ್ಬಿಣ, ತಾಮ್ರದಂತಹ ಖನಿಜಗಳು ಜೀರಿಗೆಯಲ್ಲಿ ಕಂಡುಬರುತ್ತವೆ. ಇದು ದೇಹವನ್ನು ಆರೋಗ್ಯಕರವಾಗಿಡಲು ಕೆಲಸ ಮಾಡುತ್ತದೆ. ಇದು ಹಲವಾರು ರೀತಿ ಪ್ರಯೋಜನಕಾರಿಯಾಗಿದ್ದರೂ, ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತದೆ. ಹೌದು, ಅನೇಕ ಜನರು ತೂಕ ಇಳಿಸಿಕೊಳ್ಳಲು ಜೀರಿಗೆ ನೀರನ್ನು ಕುಡಿಯುತ್ತಾರೆ ಅಥವಾ ಜೀರಿಗೆ ಸೇವಿಸುತ್ತಾರೆ. ಇದು ನಿಮಗೆ ಹಾನಿಯುಂಟುಮಾಡಬಹುದು. ಇದನ್ನು ಕೇಳಿ ನಿಮಗೆ ಆಶ್ಚರ್ಯವಾಗಬಹುದು, ಆದರೆ ಇದು ಸತ್ಯ. ಜೀರಿಗೆ ಸೇವನೆಯಿಂದ ದೇಹಕ್ಕೆ ಆಗುವ ಹಾನಿ ಏನು ಎಂಬುದರ ಬಗ್ಗೆ ತಿಳಿಯಿರಿ.

ಇದನ್ನೂ ಓದಿ: ಶುಗರ್ ಸಮಸ್ಯೆ ಇರುವವರು ಈ ಪಾನೀಯಗಳನ್ನು ಸೇವಿಸಿ ನಿಶ್ಚಿಂತೆಯಾಗಿರಬಹುದು !

ಅತಿಯಾಗಿ ಜೀರಿಗೆ ಸೇವಿಸುವುದರಿಂದ ಆರೋಗ್ಯಕ್ಕೆ ಹಾನಿ

ಎದೆಯಲ್ಲಿ ಉರಿ: ಹೊಟ್ಟೆಯಲ್ಲಿನ ಗ್ಯಾಸ್‍ ಸಮಸ್ಯೆಗೆ ಜೀರಿಗೆ ಪ್ರಯೋಜನಕಾರಿ. ಆದರೆ ಇದನ್ನು ಅತಿಯಾಗಿ ಸೇವಿಸಿದರೆ ಎದೆಯುರಿ ಸಮಸ್ಯೆ ಎದುರಾಗಬಹುದು. ಏಕೆಂದರೆ ಜೀರಿಗೆಯು ಜೀರ್ಣಾಂಗವ್ಯೂಹದಿಂದ ಪಿತ್ತದ ಸಮಸ್ಯೆಯನ್ನು ಬಹುಬೇಗ ದೂರ ಮಾಡುತ್ತದೆ. ಇದರಿಂದ ನೀವು ಎದೆಯುರಿ ಸಮಸ್ಯೆ ಎದುರಿಸಬಹುದು. ಇದಕ್ಕಾಗಿಯೇ ಹೆಚ್ಚು ಜೀರಿಗೆ ಸೇವಿಸುವುದನ್ನು ತಪ್ಪಿಸಿ.

ಅಧಿಕ ರಕ್ತಸ್ರಾವ: ಮಹಿಳೆಯರು ಜೀರಿಗೆಯನ್ನು ಹೆಚ್ಚು ಸೇವಿಸಬಾರದು. ಏಕೆಂದರೆ ಜೀರಿಗೆ ತಿನ್ನುವುದರಿಂದ ಮುಟ್ಟಿನ ಸಮಯದಲ್ಲಿ ಸಮಸ್ಯೆ ಎದುರಿಸಬೇಕಾಗುತ್ತದೆ. ಹೌದು, ಮುಟ್ಟಿನ ಸಮಯದಲ್ಲಿ ಜೀರಿಗೆಯನ್ನು ಸೇವಿಸಿದರೆ ಭಾರೀ ರಕ್ತಸ್ರಾವದ ಸಮಸ್ಯೆ ಎದುರಾಗಬಹುದು. ಇದಕ್ಕಾಗಿಯೇ ಮಹಿಳೆಯರು ಮುಟ್ಟಿನ ಸಮಯದಲ್ಲಿ ಇದನ್ನು ಸೇವಿಸಬಾರದು.

ವಾಂತಿ ಸಮಸ್ಯೆ: ಜೀರಿಗೆ ನೀರನ್ನು ಹೆಚ್ಚು ಸೇವಿಸುವುದರಿಂದ ಮೆದುಳಿಗೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗಬಹುದು. ಇದರೊಂದಿಗೆ ವಾಂತಿ ಸಮಸ್ಯೆಯೂ ಕಾಡಬಹುದು. ಇದಕ್ಕಾಗಿಯೇ ಜೀರಿಗೆಯನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಬೇಕು.

ಯಕೃತ್ತಿನ ಹಾನಿ: ಜೀರಿಗೆಯಲ್ಲಿರುವ ತೈಲವು ನಿಮ್ಮ ಯಕೃತ್ತಿಗೆ ಹಾನಿಯುಂಟು ಮಾಡುತ್ತದೆ. ಹೀಗಾಗಿ ನೀವು ಅದನ್ನು ಹೆಚ್ಚು ಸೇವಿಸಿದರೆ, ಮೂತ್ರಪಿಂಡ ಅಥವಾ ಯಕೃತ್ತಿನ ಹಾನಿಯ ಅಪಾಯಹೆಚ್ಚಾಗುತ್ತದೆ. ಅದಕ್ಕಾಗಿಯೇ ಜೀರಿಗೆಯನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಬೇಕು.

ಇದನ್ನೂ ಓದಿ: ಸದಾ ಸಕ್ಕರೆ ಮಟ್ಟ ನಿಯಂತ್ರಣದಲ್ಲಿರಬೇಕಾದರೆ ಈ ಚೂರ್ಣ ಸೇವಿಸಿ ! ಯಾವುದೇ ಅಡ್ಡ ಪರಿಣಾಮವೂ ಇರುವುದಿಲ್ಲ

(ಗಮನಿಸಿರಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇಲ್ಲಿನ ಸಲಹೆ ಪಾಲಿಸುವ ಮೊದಲು ತಜ್ಞರನ್ನು ಸಂಪರ್ಕಿಸಿ. ZEE NEWS ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More