Home> Health
Advertisement

Diabetes ಕಾಯಿಲೆ ಇರುವವರು ಗೋಡಂಬಿ ಸೇವಿಸಬಹುದಾ? ಇಲ್ಲಿದೆ ಅದಕ್ಕೆ ಉತ್ತರ

Can Diabetes Patients Eat Cashew Nuts - ಮಧುಮೇಹಿಗಳು (Diabetes) ಗೋಡಂಬಿಯನ್ನು ತಿನ್ನಬಹುದು. ವಾಸ್ತವದಲ್ಲಿ, ಮಧುಮೇಹ ರೋಗಿಗಳು ಗೋಡಂಬಿಯನ್ನು ತಿನ್ನಬಾರದು ಎಂದು ಹೇಳಲಾಗುತ್ತದೆ. ಏಕೆಂದರೆ, ಇದು ದೇಹದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತದೆ. ಆದರೆ, ನೀವು ಇದನ್ನು ಸೀಮಿತ ಪ್ರಮಾಣದಲ್ಲಿ ಮಾತ್ರ ಸೇವಿಸಬಹುದು.
 

Diabetes ಕಾಯಿಲೆ ಇರುವವರು ಗೋಡಂಬಿ ಸೇವಿಸಬಹುದಾ? ಇಲ್ಲಿದೆ ಅದಕ್ಕೆ ಉತ್ತರ

ನವದೆಹಲಿ: Diabetes Patients - ಗೋಡಂಬಿಯು ಹಲವು ರೀತಿಯ ಪ್ರಯೋಜನಗಳನ್ನು ಹೊಂದಿದೆ. ಆದರೆ, ಡ್ರೈಫ್ರೂಟ್ ಗಳಲ್ಲಿ ಶಾಮೀಲಾಗಿರುವ ಈ ಗೋಡಂಬಿಯನ್ನು ಮಧುಮೆಹಿಗಳು ಕೂಡ ಸೇವಿಸಬಹುದು ಎಂಬುದನ್ನು ನೀವು ಎಂದಾದರು ಯೋಚಿಸಿದ್ದೀರಾ? ಹೌದು, ವಾಸ್ತವದಲ್ಲಿ ಗೋಡಂಬಿ ಹಲವು ಆರೋಗ್ಯಕರ ಲಾಭಗಳನ್ನು ಹೊಂದಿರುವ ಡ್ರೈಫ್ರೂಟ್ ಆಗಿದೆ. ಅನೇಕ ಪಾಕವಿಧಾನಗಳಲ್ಲಿ ರುಚಿಯನ್ನು ಹೆಚ್ಚಿಸಲು ಗೋಡಂಬಿ ಬಳಸಲಾಗುತ್ತದೆ. ಮಧುಮೇಹದ ಹೊರತಾಗಿ, ಹೃದ್ರೋಗಿಗಳು ಗೋಡಂಬಿಯನ್ನು ತಿನ್ನುವುದರಿಂದ ಹಲವು ಲಾಭಗಳನ್ನು ಪಡೆಯಬಹುದು.

ಈ ರೋಗಿಗಳಿಗೆ ಗೋಡಂಬಿ ಸೇವನೆ ಹಲವು ಲಾಭಗಳನ್ನು ನೀಡಲಿದೆ

ಗೋಡಂಬಿ ಪ್ರೋಟೀನ್, ಖನಿಜಗಳು, ಕಬ್ಬಿಣ, ಫೈಬರ್, ಫೋಲೇಟ್, ಮೆಗ್ನೀಸಿಯಮ್, ರಂಜಕ, ಸೆಲೆನಿಯಮ್, ಆಂಟಿ-ಆಕ್ಸಿಡೆಂಟ್‌, ಖನಿಜಗಳು ಮತ್ತು ವಿಟಮಿನ್‌ ಗಳಿಂದ ಸಮೃದ್ಧವಾಗಿದೆ. ಗೋಡಂಬಿಯಲ್ಲಿ ಕಂಡುಬರುವ ಪೋಷಕಾಂಶಗಳು ದೇಹಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತವೆ. ಗೋಡಂಬಿ ಸೇವನೆಯಿಂದ ಮಧುಮೇಹದ ಹೊರತಾಗಿ ಹೃದಯದ ಆರೋಗ್ಯವನ್ನು ಕೂಡ ಕಾಪಾಡಬಹುದು.

ಗೋಡಂಬಿ ತಿನ್ನುವುದರಿಂದ ಸ್ಟ್ರೆಸ್ ಕಡಿಮೆಯಾಗುತ್ತದೆ (Health Tips)
ಗೋಡಂಬಿ ತಿನ್ನುವುದರಿಂದ ಒತ್ತಡ ಕಡಿಮೆಯಾಗುತ್ತದೆ. ಮಧುಮೇಹಿಗಳು ಗೋಡಂಬಿ ತಿನ್ನುವುದನ್ನು ನಿಷೇಧಿಸದಿರಲು ಇದು ಕೂಡ ಒಂದು ಕಾರಣವಾಗಿದೆ. ಗೋಡಂಬಿ ತಿಂದರೆ ದೇಹದಲ್ಲಿ ಇನ್ಸುಲಿನ್ ಮಟ್ಟ ಹೆಚ್ಚುತ್ತದೆ. ಇದಲ್ಲದೇ ಗೋಡಂಬಿಯನ್ನು ಆಹಾರದಲ್ಲಿ ಸೇರಿಸುವುದರಿಂದ ಸ್ಮರಣಶಕ್ತಿ ಹೆಚ್ಚಾಗುತ್ತದೆ.

ಇದನ್ನೂ ಓದಿ-Health Tips: ಈ ಬೀಜವು ಮಲಬದ್ಧತೆ ಸಮಸ್ಯೆಗೆ ತ್ವರಿತ ಪರಿಹಾರ ನೀಡುತ್ತದೆ

ಗೋಡಂಬಿ ಚರ್ಮಕ್ಕೂ ಪ್ರಯೋಜನಕಾರಿ (Cashew Nuts Health Benefits)
ಇದಲ್ಲದೇ ಗೋಡಂಬಿ ತಿಂದರೆ ತ್ವಚೆ ಕೂಡ ಚೆನ್ನಾಗಿರುತ್ತದೆ. ಗೋಡಂಬಿ ವಿಟಮಿನ್-ಇ ಮತ್ತು ಆಂಟಿ-ಆಕ್ಸಿಡೆಂಟ್‌  ಗಳಿಂದ ಸಮೃದ್ಧವಾಗಿದೆ. ಇದು ಚರ್ಮವನ್ನು ಅನೇಕ ಸಮಸ್ಯೆಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಯಾವುದೇ ರೀತಿಯ ಚರ್ಮ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವವರು ಇಂದಿನಿಂದಲೇ ಗೋಡಂಬಿಯನ್ನು ತಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬಹುದು. ಇದರಿಂದ ಅವರಿಗೆ ಲಾಭವಾಗಲಿದೆ.

ಇದನ್ನೂ ಓದಿ-Boiled Potato Health Benefits: ಆಲೂಗಡ್ಡೆಯನ್ನು ಈ ರೀತಿ ಬಳಸಿದರೆ ಕೆಲವೇ ದಿನಗಳಲ್ಲಿ ಕಡಿಮೆಯಾಗುತ್ತೆ ತೂಕ

(Disclaimer:ಇಲ್ಲಿ ನೀಡಲಾಗಿರುವ ಮಾಹಿತಿ ಮನೆಮದ್ದು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ತಜ್ಞ ವೈದ್ಯರ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

ಇದನ್ನೂ ಓದಿ-ಈ ರೀತಿ ಮಾಡಿದರೆ ಹೋಳಿ ಬಣ್ಣದಿಂದ ಕೂದಲಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ

Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More