Home> Health
Advertisement

Z+ ರೀತಿಯ ಸುರಕ್ಷತೆಯಲ್ಲಿ ದೆಹಲಿ ತಲುಪಿದ ವ್ಯಾಕ್ಸಿನ್, ಪೂಜೆ ಸಲ್ಲಿಸಿದ ಅಧಿಕಾರಿಗಳು

Corona Vaccine India - ಜನವರಿ 16 ರಂದು ದೇಶದಲ್ಲಿ ವ್ಯಾಕ್ಸಿನೇಷನ್ ಅಭಿಯಾನ ಪ್ರಾರಂಭವಾಗುವ ಹಿನ್ನೆಲೆಯಲ್ಲಿ, ಕಟ್ಟುನಿಟ್ಟಿನ ಭದ್ರತೆಯ ಮಧ್ಯೆ ಕರೋನಾ ಲಸಿಕೆಯನ್ನು ದೇಶದ ವಿವಿಧ ಭಾಗಗಳಿಗೆ ಕಳುಹಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ.

Z+ ರೀತಿಯ ಸುರಕ್ಷತೆಯಲ್ಲಿ ದೆಹಲಿ ತಲುಪಿದ ವ್ಯಾಕ್ಸಿನ್, ಪೂಜೆ ಸಲ್ಲಿಸಿದ ಅಧಿಕಾರಿಗಳು

Corona Vaccine India - ನವದೆಹಲಿ: ಬರುವ ಜನವರಿ 16ರಿಂದ ದೇಶಾದ್ಯಂತ ಕೊರೊನಾ ಲಸಿಕಾಕರಣ ಅಭಿಯಾನ ಆರಂಭವಾಗುತ್ತಿದೆ.  3 ಕೋಟಿ ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿಯಲ್ಲಿರುವವರಿಗೆ ಲಸಿಕೆ ಹಾಕುವ ವೆಚ್ಚವನ್ನು ಭರಿಸಲಾಗುವುದು ಎಂದು ಕೇಂದ್ರ ಸರ್ಕಾರ ಇತ್ತೀಚೆಗೆ ಸ್ಪಷ್ಟಪಡಿಸಿದೆ. ದೇಶದಲ್ಲಿ, ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ನಿರ್ಮಿಸಿದ ಅಸ್ಟ್ರಾಜೆನೆಕಾ-ಆಕ್ಸ್‌ಫರ್ಡ್‌ನ ಕೋವಿಶೀಲ್ಡ್ ಮತ್ತು ಭಾರತ್ ಬಯೋಟೆಕ್, ಐಸಿಎಂಆರ್ ಮತ್ತು ಎನ್‌ಐವಿ ಪುಣೆ ತಯಾರಿಸಿದ ಕೊವಾಕ್ಸಿನ್ ತುರ್ತು ಬಳಕೆಗೆ ಅನುಮೋದನೆ ನೀಡಲಾಗಿದೆ. ಮಹಾರಾಷ್ಟ್ರದ ಪುಣೆ ವಿಮಾನ ನಿಲ್ದಾಣದಿಂದ ರವಾನೆಯಾದ ಮೊದಲ ಬ್ಯಾಚ್ ಲಸಿಕೆ ದೆಹಲಿಗೆ ತಲುಪಿದೆ .

'ಕೋವಿಶೀಲ್ಡ್' (Covishield) ಲಸಿಕೆಯ ಮೊದಲ ಬ್ಯಾಚ್ ಮಂಗಳವಾರ ಮುಂಜಾನೆ 'ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ'ದಿಂದ ಪುಣೆ ವಿಮಾನ ನಿಲ್ದಾಣಕ್ಕೆ ತೆರಳಿದ್ದು, ಅಲ್ಲಿಂದ ಲಸಿಕೆಗಳನ್ನು ಹೊತ್ತ ಮೊದಲ ವಿಮಾನ ದೆಹಲಿಗೆ ಹಾರಿದೆ. ಲಸಿಕೆಗಳನ್ನು ಕೊಂಡೊಯ್ಯುವ ಕೆಲಸದಲ್ಲಿ ತೊಡಗಿರುವ ಮೂಲಗಳ ಪ್ರಕಾರ ಈ ಲಸಿಕೆಗಳನ್ನು ಹೊತ್ತುಕೊಂಡು ಮೂರು ತಾಪಮಾನ ನಿಯಂತ್ರಿತ ಟ್ರಕ್‌ಗಳು ಬೆಳಗ್ಗೆ 5 ಗಂಟೆಗೆ ಪುಣೆ ವಿಮಾನ ನಿಲ್ದಾಣಕ್ಕೆ 'ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ'ದಿಂದ ರವಾನೆಯಾದವು ಎನ್ನಲಾಗಿದೆ.

ಈ ಕುರಿತು ಟ್ವೀಟ್ ಮಾಡಿರುವ ಪುಣೆ ವಿಮಾನ ನಿಲ್ದಾಣ " ರವಾನೆಯಾಗಲು ಸಿದ್ಧ...ಭಾರತದೊಂದಿಗೆ ನಾವು ನಿಂತಿದ್ದೇವೆ...ಕೊರೊನಾ ವೈರಸ್ ಗೆ ಅಂತ್ಯ ಹಾಡಲು ಲಸಿಕೆಗಳನ್ನು ವಿಮಾನದಲ್ಲಿ ಇರಿಸಲಾಗುತ್ತಿದೆ" ಎಂದು ಬರೆದುಕೊಂಡಿದೆ.

ಇದನ್ನು ಓದಿ- CoronaVaccine : ಶೀಘ್ರ ಬರಲಿದೆ ಗೇಮ್ ಚೇಂಜರ್ ಸಿಂಗಲ್ ಡೋಸ್ ಕರೋನಾ ವ್ಯಾಕ್ಸಿನ್..! ಏನಿದರ ಸ್ಪೆಷ್ಯಾಲಿಟಿ..?

ಪ್ರತಿ ಬಾಕ್ಸ್ ತೂಕ 32 ಕಿ.ಗ್ರಾಂ
ಪುಣೆ ವಿಮಾನ ನಿಲ್ದಾಣದಿಂದ ಈ ಲಸಿಕೆಗಳನ್ನು ವಾಯುಮಾರ್ಗವಾಗಿ ದೇಶದ ಇತರೆ ಭಾಗಗಳಿಗೆ ತಲುಪಿಸಲಾಗುವುದು. ಲಸಿಕೆಗಳನ್ನು ಇನ್ಸ್ಟಿಟ್ಯೂಟ್ ನಿಂದ ರವಾನಿಸುವ ಮೊದಲು ಪೂಜೆಯನ್ನು ನೆರವೇರಿಸಲಾಗಿದೆ. ಒಂದು ಟ್ರಕ್ ನಲ್ಲಿ ಸುಮಾರು 478 ಬಾಕ್ಸ್ ಗಳಿದ್ದು, ಪ್ರತಿಯೊಂದು ಬಾಕ್ಸ್ ತೂಕ 32 ಕಿ.ಗ್ರಾಂ ಗಳಷ್ಟಿತ್ತು ಎಂದು ಮೂಲಗಳು ಮಾಹಿತಿ ನೀಡಿವೆ.

ಸಾಂಕ್ರಾಮಿಕ ರೋಗದಿಂದ ಬೇಸತ್ತಿರುವ ದೇಶಕ್ಕೆ ಲಸಿಕೆ ಚಿನ್ನಕ್ಕಿಂತ ಕಡಿಮೆಯಿಲ್ಲ, ಈ ಸಂದರ್ಭದಲ್ಲಿ ಅದರ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದೆ. ಲಸಿಕೆ ಲೋಡ್ ಮಾಡಿದ ಟ್ರಕ್‌ಗಳ ಸುರಕ್ಷತೆಯು ಯಾವುದೇ Z ಡ್ ಪ್ಲಸ್ ಭದ್ರತೆಗಿಂತ ಕಡಿಮೆಯಿರಲಿಲ್ಲ. ಲಾರಿಗಳ ಮುಂಭಾಗ ಮತ್ತು ಹಿಂಭಾಗದಲ್ಲಿ ಪೊಲೀಸ್ ಬೆಂಗಾವಲು ಪಡೆಗಳನ್ನು ನಿಯೋಜಿಸಲಾಗಿತ್ತು.

ಇದನ್ನು ಓದಿ- COVID Vaccine ತೆಗೆದುಕೊಳ್ಳುವ ಬಗ್ಗೆ ಜನ ಏನೇಳುತ್ತಾರೆ ಗೊತ್ತಾ?

ಕಂಪನಿಗಳು, ಲಾಜಿಸ್ಟಿಕ್ಸ್ ಸಂಸ್ಥೆಗಳು, ಸರ್ಕಾರಗಳು ಮತ್ತು ಎಲ್ಲಾ ಆಸ್ಪತ್ರೆ ಆಡಳಿತಗಳು ಲಸಿಕೆಯ ಕಳ್ಳತನವನ್ನು ತಡೆಯಲುಸಂಪೂರ್ಣ ಯೋಜನೆಗಳನ್ನು ಸಿದ್ಧಪಡಿಸುತ್ತಿವೆ. ಅಷ್ಟೇ ಅಲ್ಲ, ಈ ಲಸಿಕೆಗಳ ಹೆಸರಿನಲ್ಲಿ ಬ್ಲಾಕ್ ಮಾರ್ಕೆಟಿಂಗ್ ಹಾಗೂ ವಂಚನೆ  ಪ್ರಾರಂಭವಾಗುವ ಸಾಧ್ಯತೆಯ ಹಿನ್ನೆಲೆ ಸರ್ಕಾರ ಮತ್ತು ಲಸಿಕೆ ತಯಾರಕರು ತೀವ್ರ ನಿಗಾವಹಿಸಿದ್ದಾರೆ.

ಇದನ್ನು ಓದಿ-Corona Vaccine ನಿಮ್ಮ ಬಳಿ ಹೇಗೆ ತಲುಪಲಿದೆ ಗೊತ್ತೇ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More