Home> Health
Advertisement

ರುಚಿ ಎಂದು ಬಾಯಿ ಚಪ್ಪರಿಸಿಕೊಂಡು ಮೊಮೊಸ್ ತಿನ್ನುವ ಮೊದಲು ಈ ಸುದ್ದಿ ಓದಿ

ಮೊಮೊಸ್ ರುಚಿಗೆ ಮನಸೋತ ಯುವ ಜನತೆ ಬಾಯಿ ಚಪ್ಪರಿಸಿಕೊಂಡು ಅದನ್ನು ತಿನ್ನುತ್ತಾರೆ. ಆದರೆ   ಮೊಮೊಸ್ ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುವುದು ನಿಮಗೆ ಗೊತ್ತೇ?   

ರುಚಿ ಎಂದು ಬಾಯಿ ಚಪ್ಪರಿಸಿಕೊಂಡು ಮೊಮೊಸ್ ತಿನ್ನುವ ಮೊದಲು ಈ ಸುದ್ದಿ ಓದಿ

ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ವಿಶೇಷವಾಗಿ ಯುವಜನರಲ್ಲಿ ಮೊಮೊಸ್ ಕ್ರೇಜ್ ಹೆಚ್ಚುತ್ತಿದೆ. ಈ ಕಾರಣದಿಂದಾಗಿ ಮೊಮೊಸ್  ಮಾರುವವರ ಸಂಖ್ಯೆ ಕೂಡಾ ಹೆಚ್ಚುತ್ತಿದೆ. ಮೊಮೊಸ್ ರುಚಿಗೆ ಮನಸೋತ ಯುವ ಜನತೆ ಬಾಯಿ ಚಪ್ಪರಿಸಿಕೊಂಡು ಅದನ್ನು ತಿನ್ನುತ್ತಾರೆ. ಆದರೆ   ಮೊಮೊಸ್ ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುವುದು ಬಹುತೇಕ ಜನರಿಗೆ ಗೊತ್ತಿಲ್ಲ. ಮೊಮೊಸ್ ಸೇವನೆಯು ನಮ್ಮ ಆರೋಗ್ಯಕ್ಕೆ ಹಾನಿ ಉಂಟು ಮಾಡುತ್ತದೆ. 

ಮೊಮೊಸ್ ಆರೋಗ್ಯಕ್ಕೆ ಹಾನಿಕಾರಕ : 

ಮೊಮೊಸ್ ಅನ್ನು  ಮೈದಾ ಹಿಟ್ಟು ಬಳಸಿ ತಯಾರಿಸಲಾಗುತ್ತದೆ. ಮಾತ್ರವಲ್ಲ ಮೊಮೊಸ್ ಗಾಗಿ  ಹಿಟ್ಟು ತಯಾರಿಸುವಾಗ ಅದಕ್ಕೆ  ಅಜೋಡಿಕಾರ್ಬೊನಮೈಡ್, ಬೆನ್ಝಾಯ್ಲ್ ಪೆರಾಕ್ಸೈಡ್ ನಂಥಹ  ಪದಾರ್ಥಗಳನ್ನು ಸೇರಿಸಲಾಗುತ್ತದೆ. 

ಇದನ್ನೂ ಓದಿ :  ಅಡುಗೆಯಲ್ಲಿ ಬಳಸುವ ಚಿಟಿಕಿ ಇಂಗು ಈ ಮೂರು ಕಾಯಿಲೆಗಳನ್ನು ಹೊಡೆದೋಡಿಸುತ್ತದೆ

 ಮಧುಮೇಹದ ಅಪಾಯ ಹೆಚ್ಚಿಸುತ್ತದೆ : 
ಮೊಮೊಸ್ ಅನ್ನು ಮೃದುವಾಗಿಡಲು ಅಲೋಕ್ಸಾನ್ ಎಂಬ ಅಂಶವನ್ನು ಸಹ ಸೇರಿಸಲಾಗುತ್ತದೆ. ಇದು ನಮ್ಮ ಆರೋಗ್ಯಕ್ಕೆ ಹಾನಿಕಾರಕವಾಗಿದೆ.  ಮೊಮೊಸ್ ಮಾಡಲು ತಯಾರಿಸುವ ಹಿಟ್ಟಿಗೆ ಸೇರಿಸುವ  ವಸ್ತುಗಳು ಆರೋಗ್ಯಕ್ಕೆ ಒಳ್ಳೆಯದಲ್ಲ. ಈ ವಸ್ತುಗಳು ದೇಹದ ಮೇದೋಜ್ಜೀರಕ ಗ್ರಂಥಿಯನ್ನು ಹಾನಿಗೊಳಿಸುತ್ತವೆ. ಇದಲ್ಲದೆ, ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ.

ನಾನ್ ವೆಜ್ ಮೊಮೊಸ್ ನಿಂದ ಅಪಾಯ :
ವೆಜ್ ಮತ್ತು ನಾನ್ ವೆಜ್ ಮೊಮೊಗಳನ್ನು ತಯಾರಿಸಲಾಗುತ್ತದೆ. ಎರಡೂ ರೀತಿಯ ಮೊಮೊಸ್ ಗಳನ್ನೂ ಜನ ಇಷ್ಟ ಪಟ್ಟು ತಿನ್ನುತ್ತಾರೆ. ನಾನ್-ವೆಜ್ ಮೊಮೊಸ್ ತಯಾರಿಸಲು ಕೋಳಿ ಮಾಂಸವನ್ನು ಬಳಸಲಾಗುತ್ತದೆ. ಆದರೆ ಇಲ್ಲಿ ಬಳಸುವ ಕೋಳಿ ಮಾಂಸದ ಗುಣಮಟ್ಟ ಉತ್ತಮವಾಗಿರುವುದಿಲ್ಲ.   ಇದು ನಮ್ಮನ್ನು ಅನಾರೋಗ್ಯಕ್ಕೆ  ದೂಡಬಹುದು. 

ಇದನ್ನೂ ಓದಿ :  ಪಾನ್ ಸೇವನೆ ಬಳಿಕ ಈ ಆಹಾರಗಳ ಸೇವನೆ ಆರೋಗ್ಯಕ್ಕೆ ಹಾನಿಕಾರಕ

ಮೊಮೊಸ್‌ನ ಕೆಂಪು ಚಟ್ನಿ ಕೂಡಾ ಹಾನಿಕಾರಕ :
ಮೊಮೊಸ್ ಜೊತೆಸಿಗುವ ಚಟ್ನಿಗೂ ಭಾರೀ ಡಿಮ್ಯಾಂಡ್ ಇದೆ. ಇದು ತುಂಬಾ ಮಸಾಲೆಯುಕ್ತವಾಗಿರುತ್ತದೆ. ತುಂಬಾ ಮಸಾಲೆಯುಕ್ತ ಆಹಾರವನ್ನು ಸೇವಿಸುವುದರಿಂದ ಪೈಲ್ಸ್ ಅಥವಾ ಉದರದ ಸಮಸ್ಯೆಗಳಿಗೆ ತುತ್ತಾಗಬಹುದು. 

 
( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More