Home> Health
Advertisement

ಅಡುಗೆ ಮನೆಯಲ್ಲಿ ಇರುವ ಈ ನಾಲ್ಕು ವಸ್ತುಗಳು ಮಲಬದ್ಧತೆಯಿಂದ ತಕ್ಷಣ ಪರಿಹಾರ ನೀಡುತ್ತದೆ

ಮಲಬದ್ಧತೆಯ ಸಮಸ್ಯೆಗೆ ಸದಾ ಔಷಧಿಗಳನ್ನು ತಿನ್ನುವುದು ಕರುಳಿಗೆ ಹಾನಿಕಾರಕವಾಗಿ ಪರಿಣಮಿಸಬಹುದು.  ಅಡುಗೆಮನೆಯಲ್ಲಿಯೇ ಲಭ್ಯವಿರುವ ಕೆಲವು ಆಹಾರ ಪದಾರ್ಥಗಳನ್ನು ಸೇವಿಸುವ ಮೂಲಕ ಮಲಬದ್ಧತೆಯ ಸಮಸ್ಯೆಯನ್ನು ನಿವಾರಿಸಬಹುದು.

 ಅಡುಗೆ ಮನೆಯಲ್ಲಿ ಇರುವ ಈ ನಾಲ್ಕು ವಸ್ತುಗಳು ಮಲಬದ್ಧತೆಯಿಂದ ತಕ್ಷಣ ಪರಿಹಾರ ನೀಡುತ್ತದೆ

ಬೆಂಗಳೂರು : ಮಲಬದ್ಧತೆ ಒಂದು ಸಾಮಾನ್ಯ ಸಮಸ್ಯೆಯಾಗಿದೆ. ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಸಮಯದಲ್ಲಿ  ಮಲಬದ್ದತೆಯ ಸಮಸ್ಯೆ ಕಾಡುತ್ತದೆ. ಆದರೆ ಈ ಸಮಸ್ಯೆಯನ್ನು ನಿರ್ಲಕ್ಷಿಸುವುದು ಅನೇಕ ರೋಗಗಳಿಗೆ ಕಾರಣವಾಗಬಹುದು. ಸಾಮಾನ್ಯವಾಗಿ ಮಲಬದ್ಧತೆಯ ಸಮಸ್ಯೆಯು ಸರಿಯಾದ ಆಹಾರವನ್ನು ತೆಗೆದುಕೊಳ್ಳದ ಕಾರಣ ಸಂಭವಿಸುತ್ತದೆ. ಆಹಾರದಲ್ಲಿ ಕಡಿಮೆ ಫೈಬರ್ ಅಂಶ, ಸಾಕಷ್ಟು ನೀರು ಕುಡಿಯದಿರುವುದು, ರಾತ್ರಿ ಸಾಕಷ್ಟು ನಿದ್ರೆ ಮಾಡದಿರುವುದು ಮತ್ತು ಅಸ್ತವ್ಯಸ್ತವಾಗಿರುವ ಜೀವನಶೈಲಿಯಿಂದ ಮಲಬದ್ಧತೆ ಸಂಭವಿಸಬಹುದು. ಮಲಬದ್ಧತೆಯ ಸಮಸ್ಯೆಗೆ ಸದಾ ಔಷಧಿಗಳನ್ನು ತಿನ್ನುವುದು ಕರುಳಿಗೆ ಹಾನಿಕಾರಕವಾಗಿ ಪರಿಣಮಿಸಬಹುದು.  ಅಡುಗೆಮನೆಯಲ್ಲಿಯೇ ಲಭ್ಯವಿರುವ ಕೆಲವು ಆಹಾರ ಪದಾರ್ಥಗಳನ್ನು ಸೇವಿಸುವ ಮೂಲಕ ಮಲಬದ್ಧತೆಯ ಸಮಸ್ಯೆಯನ್ನು ನಿವಾರಿಸಬಹುದು. 

ಮಲಬದ್ಧತೆ ಸಮಸ್ಯೆಗೆ ಪರಿಹಾರ : 
ಕಪ್ಪು ಒಣದ್ರಾಕ್ಷಿ : 

ಕಪ್ಪು ಒಣದ್ರಾಕ್ಷಿಗಳು ಫೈಬರ್ ಅಂಶದಲ್ಲಿ ಸಮೃದ್ಧವಾಗಿವೆ. ಇದು ಮಲಬದ್ಧತೆಯ ಸಮಸ್ಯೆಗೆ ಪರಿಹಾರವನ್ನು ನೀಡುತ್ತದೆ. ಆದರೆ ನೆನಪಿರಲಿ ಈ ಒಣ ದ್ರಾಕ್ಷಿಗಳನ್ನು ತಿನ್ನುವುದಕ್ಕೂ ಮೊದಲು ಅವುಗಳನ್ನು ನೀರಿನಲ್ಲಿ ನೆನೆಸಿಡಬೇಕು. ಹೀಗೆ ನೀರಿನಲ್ಲಿ ನೆನೆಸಿಟ್ಟು ಒಣ ದ್ರಾಕ್ಷಿ ತಿಂದರೆ ಅದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ವಾತ ದೋಷ ಇರುವವರಿಗೂ ಇದು ಒಳ್ಳೆಯದು.

ಇದನ್ನೂ ಓದಿ : ಖಾಲಿ ಹೊಟ್ಟೆಯಲ್ಲಿ ಅಪ್ಪಿತಪ್ಪಿಯೂ ಈ ಆಹಾರಗಳನ್ನು ತಿನ್ನಲೇಬಾರದು

ಮೆಂತೆ ಕಾಳು : 
ಮಲಬದ್ಧತೆಯ ಸಮಸ್ಯೆಯಲ ನಿವಾರಣೆಯಲ್ಲಿ ಮೆಂತ್ಯ ಬೀಜ ಕೂಡಾ ಪ್ರಮುಖ ಪಾತ್ರ ವಹಿಸುತ್ತದೆ. ಒಂದು ಚಮಚ ಮೆಂತ್ಯವನ್ನು ರಾತ್ರಿ ನೆನೆಸಿ ಮರುದಿನ ಬೆಳಿಗ್ಗೆ ನೀರಿನೊಂದಿಗೆ ಸೇವಿಸಿ. ಇದು ಮಲಬದ್ದತೆಯನ್ನು ನಿವಾರಿಸುವುದು ಮಾತ್ರವಲ್ಲ ವಾತ ಮತ್ತು ಕಫ ದೋಷ ಇರುವವರಿಗೆ ಒಳ್ಳೆಯದು.  ಆದರೆ ಪಿತ್ತ ದೋಷ ಇರುವವರು ಇದನ್ನು ನಿರ್ಲಕ್ಷಿಸಬೇಕು.

 ನೆಲ್ಲಿ ರಸ :
 ನೆಲ್ಲಿ ರಸ  ಮಲಬದ್ಧತೆಯ ಸಮಸ್ಯೆಯನ್ನು ಗುಣಪಡಿಸುವುದರ ಜೊತೆಗೆ, ಕೂದಲನ್ನು ಬಲಪಡಿಸಲು, ಬಿಳಿ ಕೂದಲನ್ನು ಕಪ್ಪಾಗಿಸಲು, ದೃಷ್ಟಿ ಹೆಚ್ಚಿಸಲು ಸಹಾಯ ಮಾಡುತ್ತದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಆಮ್ಲಾ ಜ್ಯೂಸ್ ಕುಡಿಯುವುದರಿಂದ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. 

ಹಸುವಿನ ತುಪ್ಪ :
ಹಸುವಿನ ತುಪ್ಪ ಮತ್ತು ಹಾಲು ಕೂಡ ಮಲಬದ್ದತೆಯ ಸಮಸ್ಯೆ ನಿವಾರಣೆಗೆ ಸಹಾಯ ಮಾಡುತ್ತದೆ. ಒಂದು ಚಮಚ ಹಸುವಿನ ತುಪ್ಪವನ್ನು ಒಂದು ಲೋಟ ಹಾಲಿನೊಂದಿಗೆ ಬೆರೆಸಿ ಕುಡಿದರೆ,  ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ.

ಇದನ್ನೂ ಓದಿ :  ಪಾನ ಪ್ರಿಯರೇ.. ವಿಜ್ಞಾನಿಗಳ ಪ್ರಕಾರ ಎಷ್ಟು 'ಎಣ್ಣೆ' ಹೊಡೆದ್ರೆ ಸೇಫ್ ಗೊತ್ತಾ?

 

( ಸೂಚನೆ :  ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More