Home> Health
Advertisement

Cardamom: ಪ್ರತಿದಿನ ಏಲಕ್ಕಿ ಸೇವಿಸಿದ್ರೆ ಈ ಕಾಯಿಲೆಗಳು ದೂರವಾಗುತ್ತವೆ..!

Cardamom health benefits: ನಮ್ಮಲ್ಲಿ ಹೆಚ್ಚಿನವರು ಚಿಕ್ಕ ಏಲಕ್ಕಿಯನ್ನು ಜಗಿಯುವುದನ್ನು ಇಷ್ಟಪಡುತ್ತಾರೆ. ಇದು ಬಾಯಿಯ ರುಚಿಯನ್ನು ಬದಲಾಯಿಸುತ್ತದೆ. ಏಲಕ್ಕಿ ಸೇವನೆಯಿಂದ ನಮ್ಮ ದೇಹಕ್ಕೆ ಏನೆಲ್ಲಾ ಪ್ರಯೋಜನಗಳಿವೆ ಎಂದು ನಿಮಗೆ ತಿಳಿದಿದೆಯೇ?

Cardamom: ಪ್ರತಿದಿನ ಏಲಕ್ಕಿ ಸೇವಿಸಿದ್ರೆ ಈ ಕಾಯಿಲೆಗಳು ದೂರವಾಗುತ್ತವೆ..!

ಏಲಕ್ಕಿಯ ಆರೋಗ್ಯ ಪ್ರಯೋಜನಗಳು: ಏಲಕ್ಕಿಯ ರುಚಿಯನ್ನು ಯಾರು ತಾನೇ ಇಷ್ಟಪಡುವುದಿಲ್ಲ. ಅದರ ವಿಶಿಷ್ಟ ಸುವಾಸನೆಯು ಆಹಾರದ ರುಚಿಯನ್ನು ಹೆಚ್ಚಿಸುತ್ತದೆ. ಇದನ್ನು ಸಾಮಾನ್ಯವಾಗಿ ಸಿಹಿತಿಂಡಿಗಳು, ಪುಲಾವ್, ಬಿರಿಯಾನಿ ಮತ್ತು ಹಲ್ವಾದಲ್ಲಿ ಬಳಸಲಾಗುತ್ತದೆ. ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಮೆಗ್ನೀಸಿಯಮ್, ಆಂಟಿಆಕ್ಸಿಡೆಂಟ್ಗಳು ಇದರಲ್ಲಿ ಕಂಡುಬರುತ್ತವೆ. ಏಲಕ್ಕಿ ತಿನ್ನುವುದರಿಂದ ಏನೆಲ್ಲಾ ಪ್ರಯೋಜನಗಳನ್ನು ಪಡೆಯಬಹುದು ಎಂಬುದನ್ನು ತಿಳಿದುಕೊಳ್ಳಿರಿ.

ಏಲಕ್ಕಿ ಸೇವನೆಯ ಪ್ರಯೋಜನಗಳು

1. ಜೀರ್ಣಕ್ರಿಯೆಗೆ ಸಹಕಾರಿ: ಚಿಕ್ಕ ಏಲಕ್ಕಿಯ ಸಹಾಯದಿಂದ ಕಿಣ್ವಗಳ ಸ್ರವಿಸುವಿಕೆಯನ್ನು ಉತ್ತೇಜಿಸಲಾಗುತ್ತದೆ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಇದರಿಂದಾಗಿ ಹೊಟ್ಟೆ ಉಬ್ಬರ, ಗ್ಯಾಸ್ ಮತ್ತು ಹೊಟ್ಟೆ ಸೆಳೆತದಂತಹ ಸಾಮಾನ್ಯ ಜೀರ್ಣಕಾರಿ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ.

ಇದನ್ನೂ ಓದಿ: ಈ ಆರೋಗ್ಯ ಲಾಭಗಳಿಗಾಗಿ ನಿತ್ಯವೂ ಒಂದು ಕಪ್ ಮೊಸರು ತಿನ್ನಬೇಕು

 2. ಬಾಯಿಯ ದುರ್ವಾಸನೆ: ಸಣ್ಣ ಏಲಕ್ಕಿಯನ್ನು ನೈಸರ್ಗಿಕ ಮೌತ್ ಫ್ರೆಶ್ನರ್ ಆಗಿ ನಿಮಗೆ ಸಹಕಾರಿಯಾಗುತ್ತದೆ. ನಿತ್ಯವೂ ಇದನ್ನು ಜಗಿಯುತ್ತಿದ್ದರೆ ಬಾಯಿಯ ದುರ್ವಾಸನೆ ದೂರವಾಗುತ್ತದೆ ಮತ್ತು ಬಾಯಿಗೆ ತಾಜಾತನ ಬರುತ್ತದೆ.

3. ರಕ್ತ ಪರಿಚಲನೆ ಉತ್ತಮವಾಗಿರುತ್ತದೆ : ಸಣ್ಣ ಏಲಕ್ಕಿಯು ನೈಸರ್ಗಿಕ ರಕ್ತ ತೆಳುವಾಗಿ ಕಾರ್ಯನಿರ್ವಹಿಸುತ್ತದೆ, ಇದು ರಕ್ತನಾಳಗಳಲ್ಲಿ ರಕ್ತ ಪರಿಚಲನೆ ಸುಧಾರಿಸುತ್ತದೆ. ಇದನ್ನು ತಿನ್ನುವುದರಿಂದ ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ ಮತ್ತು ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ.

 4. ದೇಹವು ನಿರ್ವಿಶೀಕರಣಗೊಳ್ಳುತ್ತದೆ: ವಿಷಕಾರಿ ವಸ್ತುಗಳು ನಮ್ಮ ದೇಹದಲ್ಲಿ ಸಂಗ್ರಹವಾಗಲು ಪ್ರಾರಂಭಿಸಿದರೆ, ಅದು ಅನೇಕ ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ. ಆದರೆ ಚಿಕ್ಕ ಏಲಕ್ಕಿ ಸೇವನೆಯಿಂದ ಮೂತ್ರದ ಹರಿವು ಹೆಚ್ಚಾಗುತ್ತದೆ ಮತ್ತು ದೇಹವು ನಿರ್ವಿಶೀಕರಣಗೊಳ್ಳುತ್ತದೆ. ಇದು ಮೂತ್ರಪಿಂಡದ ಕಾರ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ, ಇದರಿಂದಾಗಿ ಮೂತ್ರಪಿಂಡದ ಸಂಬಂಧಿತ ಕಾಯಿಲೆಗಳ ಅಪಾಯದಿಂದ ನೀವು ದೂರವಿರಬಹುದು.

ಇದನ್ನೂ ಓದಿ: ಮೂಲಂಗಿಯ ಬಗ್ಗೆ ನೀವು ತಿಳಿದುಕೊಳ್ಳಲೇಬೇಕಾದ 5 ವಿಷಯಗಳು ಇವು

(ಗಮನಿಸಿರಿ: ಇಲ್ಲಿ ನೀಡಿರುವ ಸಲಹೆಗಳನ್ನು ಪಾಲಿಸುವ ಮೊದಲು ಕಡ್ಡಾಯವಾಗಿ ನೀವು ವೈದ್ಯರ ಸಲಹೆ ಪಡೆದುಕೊಳ್ಳಿರಿ)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Read More