Home> Health
Advertisement

ಸಾವಿನಲ್ಲೂ ಸಾರ್ಥಕತೆ: ಮೆದುಳು ನಿಷ್ಕ್ರಿಯಗೊಂಡಿದ್ದ ಬಿಎಸ್ಎಫ್ ಯೋಧನ ಅಂಗಾಗ ದಾನ

ಮೃತ ಜವಾನ ರಾಕೇಶ್ ಕುಮಾರ್ ಅವರ ಒಂದು ಕಿಡ್ನಿಯನ್ನು ದೆಹಲಿಯ ಏಮ್ಸ್‌ನಲ್ಲಿ ಬಳಸಿದ್ದರೆ, ಇನ್ನೊಂದನ್ನು ಸಫ್ದರ್‌ಜಂಗ್ ಆಸ್ಪತ್ರೆಗೆ ಕಳುಹಿಸಲಾಗಿದೆ.  ಹೃದಯವನ್ನು ಸೇನೆಯ ಸಂಶೋಧನೆ ಮತ್ತು ರೆಫರಲ್ (RR) ಆಸ್ಪತ್ರೆಯಲ್ಲಿ ರೋಗಿಗೆ ಕಸಿ ಮಾಡಲಾಗಿದೆ.

ಸಾವಿನಲ್ಲೂ ಸಾರ್ಥಕತೆ: ಮೆದುಳು ನಿಷ್ಕ್ರಿಯಗೊಂಡಿದ್ದ ಬಿಎಸ್ಎಫ್ ಯೋಧನ ಅಂಗಾಗ ದಾನ

ಇಲ್ಲಿನ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನಲ್ಲಿ (ಎಐಐಎಂಎಸ್) 52 ವರ್ಷದ ಮಾಜಿ ಬಿಎಸ್‌ಎಫ್ ಜವಾನ ಮೃತಪಟ್ಟಿದ್ದರು. ಮೆದುಳು ನಿಷ್ಕ್ರಿಯಗೊಂಡಿದೆ ಎಂದು ವೈದ್ಯರು ಘೋಷಿಸುತ್ತಿದ್ದಂತೆ, ಅವರ ಕುಟುಂಬವು ಮೃತರ ಅಂಗಗಳನ್ನು ದಾನ ಮಾಡಿ ಮೂವರಿಗೆ ಹೊಸ ಜೀವನವನ್ನು ನೀಡಲು ನಿರ್ಧರಿಸಿದೆ.

ಇದನ್ನೂ ಓದಿ: Viral Video: ನಾಗರ ಹಾವು ಮೊಟ್ಟೆ ಇಡುವ ವಿಡಿಯೋ ವೈರಲ್‌.!

ಮೃತ ಜವಾನ ರಾಕೇಶ್ ಕುಮಾರ್ ಅವರ ಒಂದು ಕಿಡ್ನಿಯನ್ನು ದೆಹಲಿಯ ಏಮ್ಸ್‌ನಲ್ಲಿ ಬಳಸಿದ್ದರೆ, ಇನ್ನೊಂದನ್ನು ಸಫ್ದರ್‌ಜಂಗ್ ಆಸ್ಪತ್ರೆಗೆ ಕಳುಹಿಸಲಾಗಿದೆ.  ಹೃದಯವನ್ನು ಸೇನೆಯ ಸಂಶೋಧನೆ ಮತ್ತು ರೆಫರಲ್ (RR) ಆಸ್ಪತ್ರೆಯಲ್ಲಿ ರೋಗಿಗೆ ಕಸಿ ಮಾಡಲಾಗಿದೆ.

ಫಿರೋಜಾಬಾದ್ ಮೂಲದ ರಾಕೇಶ್ ಕುಮಾರ್ ಅವರು ಅಕ್ಟೋಬರ್ 3 ರಂದು ತಮ್ಮ ಮನೆಯಲ್ಲಿ ವಿದ್ಯುತ್ ರಿಪೇರಿ ಮಾಡುತ್ತಿದ್ದ ಸಂದರ್ಭದಲ್ಲಿ ಬಿದ್ದು ಗಾಯಗೊಂಡಿದ್ದರು. ತಕ್ಷಣವೇ ಅವರನ್ನು ಸ್ಥಳೀಯ ಟ್ರಾಮಾ ಸೆಂಟರ್‌ಗೆ ಕರೆದೊಯ್ಯಲಾಯಿತು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಏಮ್ಸ್‌ಗೆ ದಾಖಲಿಸಲಾಗಿತ್ತು. ಅಕ್ಟೋಬರ್ 4 ರಂದು ಕುಮಾರ್ ಅವರನ್ನು AIIMS ಟ್ರಾಮಾ ಸೆಂಟರ್‌ಗೆ ದಾಖಲಿಸಿ, ಶಸ್ತ್ರಚಿಕಿತ್ಸೆ ಮಾಡಲಾಯಿತು. ಆದರೆ ಅಕ್ಟೋಬರ್ 6 ರಂದು ಅವರು ಮೆದುಳು ನಿಷ್ಕ್ರಿಯಗೊಂಡು ಮೃತಪಟ್ಟರು ಎಂದು ವೈದ್ಯರು ಘೋಷಿಸಿದರು.

ಅಂಗಾಂಗಗಳನ್ನು ದಾನ ಮಾಡಲು ಅವರ ಕುಟುಂಬಕ್ಕೆ ಸಲಹೆ ನೀಡಲಾಯಿತು ಮತ್ತು ಅವರು ಒಪ್ಪಿದರು. “ಅವರ ಹೃದಯವನ್ನು ಶುಕ್ರವಾರ ಆರ್ಮಿ ಆರ್‌ಆರ್ ಆಸ್ಪತ್ರೆಯಲ್ಲಿ ರೋಗಿಗೆ ಕಸಿ ಮಾಡಲಾಗಿದೆ. ಅವರ ಒಂದು ಕಿಡ್ನಿ ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿದ್ದ ರೋಗಿಯೊಬ್ಬರಿಗೆ ನೀಡಿದ್ದರೆ, ಇನ್ನೊಂದು ಕಿಡ್ನಿಯನ್ನು ಏಮ್ಸ್‌ನಲ್ಲಿ ಬಳಸಲಾಯಿತು. ಮುಂಬರುವ ವಾರಗಳಲ್ಲಿ ಅವರ ಎರಡೂ ಕಾರ್ನಿಯಾಗಳನ್ನು ಕಸಿ ಮಾಡಲು ಸಂರಕ್ಷಿಸಲಾಗಿದೆ”ಎಂದು ವೈದ್ಯರು ಹೇಳಿದರು.

ಇದನ್ನೂ ಓದಿ: ರೈಲಿಗೆ ಸಿಲುಕಿ 335 ಕುರಿಗಳು ಮಾರಣಹೋಮ; ದಿಕ್ಕು ತೋಚದೆ ಕುರಿಗಾಯಿಗಳು ಕಂಗಾಲು!

AIIMS ಟ್ರಾಮಾ ಸೆಂಟರ್‌ನಲ್ಲಿ ಅಂಗಾಂಗ ಸಂಗ್ರಹಣೆ ಸೇವೆಗಳನ್ನು ನರಶಸ್ತ್ರಚಿಕಿತ್ಸೆಯ ಪ್ರಾಧ್ಯಾಪಕ ಡಾ ದೀಪಕ್ ಗುಪ್ತಾ ನೇತೃತ್ವ ವಹಿಸಿದ್ದಾರೆ. ಭಾರತದಲ್ಲಿ ಪ್ರಸ್ತುತ ಪ್ರತಿ ಮೂರು ನಿಮಿಷಕ್ಕೆ ರಸ್ತೆ ಅಪಘಾತದಲ್ಲಿ ಒಬ್ಬರು ಸಾಯುತ್ತಾರೆ (ವರ್ಷಕ್ಕೆ 1,50,000 ಸಾವುಗಳು) ಆದರೆ ಪ್ರತಿ ವರ್ಷ ಕೇವಲ 700 ಅಂಗಾಂಗ ದಾನಗಳು ನಡೆಯುತ್ತವೆ. ಅಂಗಾಂಗ ದಾನದ ಬಗ್ಗೆ ಜಾಗೃತಿ ಇಂದಿನ ಅಗತ್ಯವಾಗಿದೆ ಎಂದರು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More