Home> Health
Advertisement

ಹಲ್ಲಿನ ಹಳದಿ ಕಲೆ ಮತ್ತು ಬಾಯಿ ದುರ್ವಾಸನೆ ಹೋಗಲಾಡಿಸಲು ಇವೇ ಸರಳ ಮನೆಮದ್ದು !


ಬ್ಯಾಕ್ಟೀರಿಯಾ ಪದರ ಕಾರಣದಿಂದಾಗಿ ಹಲ್ಲುಗಳು ಹಳದಿಯಾಗುವುದು, ದಂತಕ್ಷಯ, ವಸಡಿನಲ್ಲಿ  ರಕ್ತ ಹೀಗೆ ಒರಲ್ ಹೆಲ್ತ್ ಗೆ ಸಬಂಧಿಸಿದ ಅನೇಕ ಸಮಸ್ಯೆಗಳು ಎದುರಾಗುತ್ತದೆ. 

ಹಲ್ಲಿನ ಹಳದಿ ಕಲೆ ಮತ್ತು ಬಾಯಿ  ದುರ್ವಾಸನೆ ಹೋಗಲಾಡಿಸಲು ಇವೇ ಸರಳ ಮನೆಮದ್ದು !

ಬೆಂಗಳೂರು : ಕೆಲವೊಮ್ಮೆ ನಿತ್ಯ ಹಲ್ಲುಜ್ಜಿದ್ದರೂ, ಅಥವಾ ದಿನಕ್ಕೆ ಎರಡು ಬಾರಿ ಹಲ್ಲುಜ್ಜಿದ ನಂತರವೂ ಬಾಯಿಯಿಂದ ದುರ್ವಾಸನೆ  ಬರುತ್ತಿರುತ್ತದೆ. ಹೀಗಾದಾಗ ನೀವು ಬಳಸುವ ಟೂತ್ ಪೇಸ್ಟ್ ಅನ್ನು ಬದಲಾಯಿಸುವ ಅಗತ್ಯವಿಲ್ಲ. ಹೀಗಾಗಲು ಕಾರಣ ಏನು ಎನ್ನುವುದನ್ನು ತಿಳಿದುಕೊಳ್ಳಲು ಪ್ರಯತ್ನಿಸಬೇಕು. ಇದಕ್ಕೆ  ಹಲ್ಲುಗಳ ಬೇರುಗಳಲ್ಲಿ ಅಂಟಿಕೊಂಡು ಕುಳಿತಿರುವ ಹಳದಿ ಕಲೆಗಳೇ ಕಾರಣವಾಗಿರುತ್ತದೆ. ಈ ಹಳದಿ ಕಲೆಗಳನ್ನು ಪ್ಲೇಕ್ ಎಂದು ಕೂಡಾ ಕರೆಯುತ್ತಾರೆ. ಈ ಹಳದಿ ಕಲೆಗಳು ಹೆಚ್ಚಾದಂತೆ ಅಂಥವಾ ಗಾಢವಾಗಿ ಅಂಟಿಕೊಳ್ಳುತ್ತಿರುವಂತೆಯೇ ಬಾಯಿಯ ದುರ್ವಾಸನೆಯೂ ಹೆಚ್ಚುತ್ತದೆ. ಯಾಕೆಂದರೆ ಪ್ಲೇಕ್ ಎನ್ನುವುದು ಬ್ಯಾಕ್ಟೀರಿಯಾದ ಪದರವಾಗಿರುತ್ತದೆ. ಈ  ಬ್ಯಾಕ್ಟೀರಿಯಾ ಪದರ ಕಾರಣದಿಂದಾಗಿ ಹಲ್ಲುಗಳು ಹಳದಿಯಾಗುವುದು, ದಂತಕ್ಷಯ, ವಸಡಿನಲ್ಲಿ  ರಕ್ತ ಹೀಗೆ ಒರಲ್ ಹೆಲ್ತ್ ಗೆ ಸಬಂಧಿಸಿದ ಅನೇಕ ಸಮಸ್ಯೆಗಳು ಎದುರಾಗುತ್ತದೆ. 

ನಾವು ಆಹರ ಸೇವಿಸುವಾಗ ಸಾಮಾನ್ಯವಾಗಿ ಆ ಆಹಾರದ ಕಣಗಳು ಹಲ್ಲು ಮತ್ತು ವಸಡುಗಳಲ್ಲಿ ಸೇರಿಕೊಳ್ಳುತ್ತವೆ. ಅವುಗಳನ್ನು ಸರಿಯಾಗಿ ಸ್ವಚ್ಛಗೊಳಿಸದಿದ್ದರೆ ಅವು  ಫ್ಲೆಕ್ ರೂಪವನ್ನು ಪಡೆಯುತ್ತವೆ. ಫ್ಲೆಕ್  ಅನ್ನು ಹಾಗೆಯೇ ಬಿಟ್ಟರೆ ಟಾರ್ಟರ್  ಆಗಿ ಬದಲಾಗುತ್ತದೆ. ಹೌದು, ಈ ಹಳದಿ ಕಲೆಗಳು ಹಲ್ಲುಗಳ ಮೇಲೆ ಜಮೆಯಾಗುತ್ತಾ ಹೋದ ಹಾಗೆ ಆಸಿಡ್ ರಚನೆಗೂ ಅದು ಕಾರಣವಾಗುತ್ತದೆ. ಇದು ಹಲ್ಲಿನ ದಂತಕವಚವನ್ನು ನಾಶಪಡಿಸುತ್ತದೆ. ಹಲ್ಲುಗಳಿಂದ ಪ್ಲೇಕ್ ಅನ್ನು ತೆಗೆದುಹಾಕಲು ದಂತ ವೈದ್ಯರ ಬಳಿಗೆಯೇ ಹೋಗಬೇಕೆಂದಿಲ್ಲ. ಅವುಗಳನ್ನು ಬಿಳುಪುಗೊಳಿಸಲು ಕೆಲವು ಮನೆಮದ್ದುಗಳನ್ನು ಕೂಡಾ ಪ್ರಯತ್ನಿಸಬಹುದು. 

ಇದನ್ನೂ ಓದಿ : ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಣದಲ್ಲಿಡಲು ಈ 12 ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ!

ಹಲ್ಲುಗಳಿಂದ ಪ್ಲೇಕ್ ಅನ್ನು ತೆಗೆದುಹಾಕಲು ಮನೆಮದ್ದುಗಳು:
ಬೇಕಿಂಗ್ ಸೋಡಾ :
ಅಡಿಗೆ ಸೋಡಾ ಹಲ್ಲುಗಳಿಂದ ಪ್ಲೇಕ್ ಅನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಸ್ವಲ್ಪ ಪ್ರಮಾಣದ ಬೇಕಿಂಗ್ ಸೋಡಾವನ್ನು ನೀರಿಗೆ ಸೇರಿಸಿ ಪೇಸ್ಟ್ ಮಾಡಿಕೊಳ್ಳಿ. ಈ ಬೇಕಿಂಗ್ ಸೋಡಾದ ಪೇಸ್ಟ್ ನ ಸಹಾಯದಿಂದ  ವಾರಕ್ಕೆ ನಾಲ್ಕು ಬಾರಿ ಹಲ್ಲುಗಳನ್ನು ಬ್ರಷ್ ಮಾಡಿ. ಇದು ಹಲ್ಲಿನ ಹಳದಿ ಕಲೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.

ಅಲೋವೆರಾ ಜೆಲ್ : ಅಲೋವೆರಾ ಉರಿಯೂತದ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಹಲ್ಲಿನ ಪ್ಲೇಕ್ ಅನ್ನು ಕಡಿಮೆ ಮಾಡಲು ಒಸಡಿನ ಸಮಸ್ಯೆ ನಿವಾರಿಸಲು ಅಲೋವೆರಾ ಜೆಲ್ ಅನ್ನು ನೈಸರ್ಗಿಕ  ಟೂತ್ ಪೇಸ್ಟ್ ಅಥವಾ ಮೌತ್ವಾಶ್ ಆಗಿ ಬಳಸಿಬಹುದು.  

ಇದನ್ನೂ ಓದಿ : ಕಪ್ಪು ಕ್ಯಾರೆಟ್‌ ಅನ್ನು ಎಂದಾದರೂ ನೋಡಿದ್ದೀರಾ..? ಇದನ್ನ ತಿಂದ್ರೆ ಕೊಲೆಸ್ಟ್ರಾಲ್ ಕರಗುವುದು ಖಚಿತ.!

ಗ್ರೀನ್ ಟೀ : ಗ್ರೀನ್ ಟೀಯಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಅಷ್ಟೇ ಅಲ್ಲ ಗ್ರೀನ್ ಟೀ  ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಕೂಡಾ ಹೊಂದಿದೆ. ಗ್ರೀನ್ ಟೀಯನ್ನು ನಿಯಮಿತವಾಗಿ ಸೇವಿಸುವುದರಿಂದ ಬಾಯಿಯಲ್ಲಿ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ನಿಯಂತ್ರಿಸಬಹುದು ಮತ್ತು ಪ್ಲೇಕ್ ರಚನೆಯನ್ನು ಕಡಿಮೆ ಮಾಡಬಹುದು.

ವಿಟಮಿನ್ ಸಿ ಆಹಾರಗಳು : ಒಸಡುಗಳ ಆರೋಗ್ಯಕ್ಕೆ ವಿಟಮಿನ್ ಸಿ ಅತ್ಯಗತ್ಯ.  ವಿಟಮಿನ್ ಸಿ ಸಮೃದ್ಧವಾಗಿರುವ ಆಹಾರವನ್ನು ಸೇವಿಸುವುದರಿಂದ ಪ್ಲೇಕ್ ಅನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ನಿಮ್ಮ ಆಹಾರದಲ್ಲಿ ಸಿಟ್ರಸ್ ಹಣ್ಣುಗಳು, ಸ್ಟ್ರಾಬೆರಿಗಳು, ಕಿವಿ ಮತ್ತು ಬೆಲ್ ಪೆಪರ್ ಗಳನ್ನು ಸೇರಿಸಿ.

ಎಳ್ಳು  :  ನೈಸರ್ಗಿಕ ಹಲ್ಳುಜ್ಜುವ ಪುಡಿಯಾಗಿ ಎಳ್ಳನ್ನು ಬಳಸಬಹುದು. ಅದು ಪ್ಲೇಕ್ ಅನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಹಲ್ಲುಜ್ಜಿದ ನಂತರ, ಒಂದು ಚಮಚ ಎಳ್ಳನ್ನು ತೆಗೆದುಕೊಂಡು  ಮತ್ತೆ ಹಲ್ಲುಗಳ ಮೇಲೆ ಉಜ್ಜಿಕೊಳ್ಳಿ. ಇದು ಹಲ್ಲಿನ ಮೇಲೆ ಅಂಟಿಕೊಂಡಿರುವ ಹಳದಿ ಕಲೆಗಳನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ. 

ಇದನ್ನೂ ಓದಿ : ಕೇವಲ 10 ನಿಮಿಷದಲ್ಲಿ ಕಿವಿ ನೋವು ಮತ್ತು ತುರಿಕೆ ನಿವಾರಿಸುತ್ತೆ ಈ ಸುಲಭ ಮನೆಮದ್ದು..!

ಆಪಲ್ ಸೈಡರ್ ವಿನೆಗರ್  : ಆಪಲ್ ಸೈಡರ್ ವಿನೆಗರ್ ನಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು ಬಾಯಿಯಿಂದ ಪ್ಲೇಕ್ ಅನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಆದರೆ ಅದರ ಆಮ್ಲೀಯತೆಯಿಂದಾಗಿ, ಅದರ ಬಳಕೆಯಲ್ಲಿ ಎಚ್ಚರಿಕೆ ವಹಿಸಬೇಕು. ವಿನೆಗರ್ ಅನ್ನು ನೀರಿನಲ್ಲಿ ಬೆರೆಸಿ ನಂತರ ಮೌತ್ವಾಶ್ ಆಗಿ ಬಳಸಿ.

ಲವಂಗ ಎಣ್ಣೆ: ಲವಂಗದ ಎಣ್ಣೆಯು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು, ಬ್ಯಾಕ್ಟೀರಿಯಾ ಮತ್ತು ಉರಿಯೂತವನ್ನು ಕಡಿಮೆ ಮಾಡಲು  ಸಹಾಯ ಮಾಡುತ್ತದೆ. ಸ್ವಚ್ಛವಾದ ಹತ್ತಿ ಉಂಡೆಯಿಂದ ಲವಂಗದ ಎಣ್ಣೆಯನ್ನು ಒಸಡುಗಳ ಮೇಲೆ ಹಚ್ಚಬೇಕು. 

 

(ಸೂಚನೆ :ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee Kannada News ಅದನ್ನು ಅನುಮೋದಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More