Home> Health
Advertisement

ರೋಸ್‌ ವಾಟರ್‌ನ ಅದ್ಭುತ ಪ್ರಯೋಜನಗಳಿವು...!

Rose Water : ರೋಸ್ ವಾಟರ್ ಒಂದು ಜನಪ್ರಿಯ ಸೌಂದರ್ಯ ವರ್ಧಕವಾಗಿದ್ದು, ಅದರ ಅದ್ಭುತ ತ್ವಚೆಯ ಪ್ರಯೋಜನಗಳಿಗಾಗಿ ಶತಮಾನಗಳಿಂದಲೂ ಬಳಸಲಾಗುತ್ತಿದೆ. ರೋಸ್ ವಾಟರ್ ಸುಮಧುರವಾದ ವಾಸನೆಯನ್ನು ಮಾತ್ರವಲ್ಲ, ಇದು ವಿಟಮಿನ್‌ಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿದೆ, ಇದು ಆರೋಗ್ಯಕರ ಚರ್ಮವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.
 

ರೋಸ್‌ ವಾಟರ್‌ನ ಅದ್ಭುತ ಪ್ರಯೋಜನಗಳಿವು...!

Benifits Of Rose Water : ರೋಸ್ ವಾಟರ್ ಅನ್ನು ನಿಯಮಿತವಾಗಿ ಬಳಸುವುದರಿಂದ ಸುಕ್ಕುಹಿಡಿದಂತಹ ಚರ್ಮವನ್ನು ನಯವಾಗಿಸಲು ಸಹಾಯ ಮಾಡುತ್ತದೆ, ಚರ್ಮದ pH ಮಟ್ಟವನ್ನು ಸಮತೋಲನಗೊಳಿಸುತ್ತದೆ. ಅಲ್ಲದೆ ಇದು ಮೊಡವೆಗಳು ಒಡೆದು ಸೋರುವುದನ್ನು ತಡೆಯುತ್ತದೆ. ರೋಸ್‌ ವಾಟರ್‌ನ ಅದ್ಭುತವಾದ ಪ್ರಯೋಜನಗಳು ಇಂತಿವೆ. 

ಚರ್ಮದ ಆರೈಕೆ

ನಿಮ್ಮ ಚರ್ಮಕ್ಕೆ ಹೊಳಪನ್ನು ನೀಡಲು ರೋಸ್ ವಾಟರ್‌ಬಳಸುವುದು ಬಹಳ ಸಹಕಾರಿ ಇದರಿಂದ ಅನೇಕ ಉಪಯೋಗಗಳಿವೆ ಎಂದು ಅನೇಕ ಶತಮಾನಗಳಿಂದ ದಾಖಲಿಸಲಾಗಿದೆ. ಇದು ಚರ್ಮವು ಎಣ್ಣೆ ಎಣ್ಣೆ ರೀತಿಯಲ್ಲಿ ಆಗುವುದನ್ನು ತಡೆಯುತ್ತದೆ. ಮತ್ತು ಸೂರ್ಯನ ಕಿರಣಗಳಿಂದ ಆಗುವ ಹಾನಿಯಿಂದ ರಕ್ಷಣೆ ನೀಡುತ್ತದೆ. ರೋಸ್‌ ವಾಟರ್‌ನಿಂದ ಮುಖವನ್ನು ಸ್ವಚ್ಚಗೊಳಿಸುವುದು ಮುಖದ ಚರ್ಮದ ಆರೋಗ್ಯಕ್ಕೆ ಉತ್ತಮ. 

ಇದನ್ನೂ ಓದಿ-Healthy Drink: ಬೇಸಿಗೆಯಲ್ಲಿ ಪ್ರತಿದಿನ ನಿಂಬೆ ನೀರು ಕುಡಿಯುವುದರ ಲಾಭ ತಿಳಿದರೆ ಶಾಕ್‌ ಆಗ್ತೀರಾ!

ಒಡೆದ ತುಟಿಗಳ ಆರೈಕೆ 
ಒಡೆದ ತುಟಿಗಳಿಂದ ಮುಕ್ತಿ ಪಡೆಯಲು ಬೀಟ್ರೂಟ್ ಅನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ, ಒಣಗಿಸಿ, ಅವುಗಳನ್ನು ಪುಡಿಮಾಡಿ ಮತ್ತು ರೋಸ್ ವಾಟರ್ನೊಂದಿಗೆ ಮಿಶ್ರಣಮಾಡಿ ಅದನ್ನು ತುಟಿಗಳಿಗೆ ಹಚ್ಚಿದರೆ ಒಡೆದ ತುಟಿಗಳನ್ನು ನಯವಾಗಿಸಬಹುದು.

ಸೋಂಕುಗಳನ್ನು ತೆಗೆದುಹಾಕುತ್ತದೆ
ಚರ್ಮಕ್ಕೆ ರೋಸ್ ವಾಟರ್ ಪ್ರಯೋಜನಗಳು ಸಾಕಷ್ಟಿವೆ. ಆದರೆ ಸೌಮ್ಯವಾದ ಚರ್ಮದ ಸೋಂಕುಗಳನ್ನು ಕಡಿಮೆ ಮಾಡುವುದು ಇದರ ಆಕರ್ಷಕ ಪ್ರಯೋಜನಗಳಲ್ಲಿ ಒಂದಾಗಿದೆ. ನಂಜುನಿರೋಧಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳಿಗೆ ರೋಸ್ ವಾಟರ್ ಹೆಸರುವಾಸಿ. 

ಇದನ್ನೂ ಓದಿ-Health Tips: ದಿನಕ್ಕೆ 10 ಸಾವಿರ ಹೆಜ್ಜೆ ನಡೆದರೆ ಏನಾಗುತ್ತೆ ಗೊತ್ತಾ?

ಕೀಟ ಕಡಿತ
ರೋಸ್ ವಾಟರ್‌ನ ಉರಿಯೂತ ನಿವಾರಕ ಗುಣವು ಕೀಟಗಳ ಕಡಿತಕ್ಕೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ, ಇದನ್ನು ಲೋಷನ್ ಜೊತೆಗೆ ಬೆರೆಸಿ ಕೀಟ ಕಡಿತದ ಮೇಲೆ ಹಚ್ಚಿದರೆ ತುರಿಕೆ ಕಡಿಮೆಯಾಗುತ್ತದೆ.

Disclaimer: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ಜೀ ಕನ್ನಡ ನ್ಯೂಸ್ ಅದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More