Home> Entertainment
Advertisement

ಬ್ರಾಂಡ್ ಬಲಗೊಳಿಸಲು ಉದ್ಯಮಿಗಳಿಗೊಂದು ಅವಕಾಶ , Zee ಹೊರ ತಂದಿದೆ Zee Brand Works

ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ZEE ಬ್ರ್ಯಾಂಡ್ ವರ್ಕ್ಸ್ ಗ್ರೂಪ್ ಬ್ರ್ಯಾಂಡಿಂಗ್,  ಸೇಲ್ಸ್ ಹೆಚ್ಚಳ, ಗ್ರಾಹಕರ ಆಕರ್ಷಣೆ,  ಕಂಟೆಂಟ್ ಕ್ರಿಯೇಶನ್  ಗುರಿಗಳನ್ನು ಹೊಂದಿದೆ.   ಭಾರತೀಯ ಮಾರುಕಟ್ಟೆಗಳು ಮತ್ತು ಗ್ರಾಹಕ ಸಂಘಗಳಾದ್ಯಂತ ZEE ವಿಶಿಷ್ಟ ನಾಯಕತ್ವ ಮತ್ತು ಪರಿಣತಿಯಿಂದ ಕೂಡಿದೆ. 

ಬ್ರಾಂಡ್ ಬಲಗೊಳಿಸಲು ಉದ್ಯಮಿಗಳಿಗೊಂದು ಅವಕಾಶ , Zee ಹೊರ ತಂದಿದೆ Zee Brand Works

ನವದೆಹಲಿ : ಭಾರತದ ಪ್ರಮುಖ ಮಾಧ್ಯಮ ಮತ್ತು ಮನರಂಜನಾ ಕಂಪನಿಯಾದ Zee ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್ ಲಿಮಿಟೆಡ್ (ZEEL) ಇಂದು ಎಲ್ಲಾ ಕ್ಷೇತ್ರಗಳು ಮತ್ತು  ಮತ್ತು ವಿಭಾಗಗಳಲ್ಲಿ  ಗ್ರಾಹಕರಿಗೆ ಹೆಚ್ಚಿನ ಕೊಡುಗೆಗಳನ್ನು ನೀಡುವ ಉದ್ದೇಶದಿಂದ ZEE ಬ್ರಾಂಡ್ ವರ್ಕ್ಸ್ ಅನ್ನು ಪ್ರಾರಂಭಿಸಿದೆ.

ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ZEE ಬ್ರ್ಯಾಂಡ್ ವರ್ಕ್ಸ್ ಗ್ರೂಪ್ ಬ್ರ್ಯಾಂಡಿಂಗ್,  ಸೇಲ್ಸ್ ಹೆಚ್ಚಳ, ಗ್ರಾಹಕರ ಆಕರ್ಷಣೆ,  ಕಂಟೆಂಟ್ ಕ್ರಿಯೇಶನ್  ಗುರಿಗಳನ್ನು ಹೊಂದಿದೆ. ಭಾರತೀಯ ಮಾರುಕಟ್ಟೆಗಳು ಮತ್ತು ಗ್ರಾಹಕ ಸಂಘಗಳಾದ್ಯಂತ ZEE ವಿಶಿಷ್ಟ ನಾಯಕತ್ವ ಮತ್ತು ಪರಿಣತಿಯಿಂದ ಕೂಡಿದೆ. ZEE ಬ್ರಾಂಡ್ ವರ್ಕ್ಸ್ ಬ್ರಾಂಡ್‌ಗಳು ಮತ್ತು ಮಾರಾಟಗಾರರಿಗೆ ವರ್ಧಿತ ಮತ್ತು  ಡೈರೆಕ್ಟ್ ಅಕ್ಸೆಸ್ ನೀಡುತ್ತದೆ. ಈ ಮೂಲಕ 11 ಭಾಷೆಗಳಲ್ಲಿ ZEE ಟಿವಿ ಚಾನೆಲ್‌ಗಳು, OTT ಪ್ಲಾಟ್‌ಫಾರ್ಮ್ ZEE5 ಮತ್ತು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳ ಮೂಲಕ  ಪ್ರೇಕ್ಷಕರನ್ನು ತಲುಪುವುದು ಸಾಧ್ಯವಾಗುತ್ತದೆ. 

ಇದನ್ನೂ ಓದಿ : ʼಬೆಟ್ಟದ ಹೂವʼನ್ನ ದೇವರು ಇಷ್ಟಪಟ್ಟು ಕಿತ್ತುಕೊಂಡು ಇಂದಿಗೆ 9 ತಿಂಗಳು

ಈ ಕುರಿತು ಪ್ರತಿಕ್ರಿಯಿಸಿದ ZEE ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್ ಲಿಮಿಟೆಡ್ ನ ಶ್ರೀ. ಆಶಿಶ್ ಸೆಹಗಲ್, “ಭಾರತೀಯ ಮಾಧ್ಯಮ ವೇದಿಕೆಯಲ್ಲಿ ಪ್ರವರ್ತಕರಾಗಿ, ನಾವು ಭಾರತೀಯ ಪ್ರೇಕ್ಷಕರ ನಾಡಿಮಿಡಿತವನ್ನು ಚೆನ್ನಾಗಿ ಅರ್ಥೈಸಿಕೊಂಡಿದ್ದೇವೆ.   ದೇಶದ ಪ್ರತಿಯೊಂದು ಭಾಗದ ಜನರ ಭಾವನೆಗಳು ಮತ್ತು ಸಂಪ್ರದಾಯಗಳು ವಿಭಿನ್ನವಾಗಿವೆ. ಭಾರತೀಯ ಗ್ರಾಹಕರ ಗ್ರಾಹಕರ ಅಗತ್ಯತೆಗಳನ್ನು ಅರ್ಥಮಾಡಿಕೊಂಡು ಮಾರ್ಕೆಟಿಂಗ್ ಮತ್ತು ಬ್ರ್ಯಾಂಡ್ ಪರಿಹಾರಗಳನ್ನು ನೀಡುವುದು  ZEEಯ ವೈಶಿಷ್ಟ್ಯವಾಗಿದೆ ಎಂದು ಹೇಳಿದ್ದಾರೆ. 

ZEE ಬ್ರಾಂಡ್ ವರ್ಕ್ಸ್‌ನ ಪ್ರಾರಂಭದೊಂದಿಗೆ ನಮ್ಮ ಸೇವೆಗಳನ್ನು ಹೆಚ್ಚಿಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.  ಈ ಮೂಲಕ, ಬ್ರ್ಯಾಂಡ್‌ಗಳು ತಮ್ಮ ಗುರಿಗಳನ್ನು ಸಾಧಿಸಲು ಅನುವು ಮಾಡಿಕೊಡಲು ಪರಿಹಾರ-ಆಧಾರಿತ ಮಾರ್ಕೆಟಿಂಗ್ ಸಾಮರ್ಥ್ಯಗಳನ್ನು ತಲುಪಿಸಲು ನಮ್ಮ ಟಿವಿ, ಡಿಜಿಟಲ್ ಮತ್ತು ಸಾಮಾಜಿಕ ಕ್ಷೇತ್ರದ ಅನುಭವವನ್ನು ಬಳಸಿಕೊಳ್ಳುವುದಾಗಿ ತಿಳಿಸಿದ್ದಾರೆ. ಮುಖ್ಯವಾಗಿ, ZEE ಬ್ರ್ಯಾಂಡ್ ವರ್ಕ್ಸ್ ಉತ್ತಮ ಮಾಧ್ಯಮವನ್ನು ಬಳಸಿಕೊಂಡು ಸರಿಯಾದ ಪ್ರೇಕ್ಷಕರನ್ನು ತಲುಪಲು ಬ್ರ್ಯಾಂಡ್‌ಗಳಿಗೆ ಸಹಾಯ ಮಾಡುತ್ತದೆ ಎಂದಿದ್ದಾರೆ. 

ಇದನ್ನೂ ಓದಿ : ಮೆಟ್ಟಿಲುಗಳ ಮೇಲೆ ಕಾಲಿಟ್ರೆ ಕೇಳುತ್ತೆ ಸಂಗೀತ: ಇದು 800 ವರ್ಷ ಹಳೆಯ ದೇವಾಲಯದ ವಿಶೇಷತೆ

ZEE ಬ್ರಾಂಡ್ ವರ್ಕ್ಸ್ ಕುರಿತು, ZEE ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್ ಲಿಮಿಟೆಡ್‌ನ ಮುಖ್ಯ  ರೆವೆನ್ಯೂ ಅಧಿಕಾರಿ ರಾಜೀವ್ ಬಕ್ಷಿ, “ಗ್ರಾಹಕರು ತಮ್ಮ ಅಭಿರುಚಿ ಮತ್ತು ಅಗತ್ಯಗಳನ್ನು ಪೂರೈಸುವ ಬ್ರಾಂಡ್ ಗಳಿಗೆ ಹೆಚ್ಚಿನ ಮನ್ನಣೆ ನೀಡುತ್ತಾರೆ ಎಂದು ಹೇಳಿದ್ದಾರೆ. ಆಳವಾದ ಭಾವನಾತ್ಮಕ ಸಂಪರ್ಕವನ್ನು ರೂಪಿಸುವುದು ಮತ್ತು ಹೆಚ್ಚಿನ ಪಾಲನ್ನು ಆಕ್ರಮಿಸಿಕೊಳ್ಳುವುದು ಅಸ್ತಿತ್ವದಲ್ಲಿರುವ ಮತ್ತು ಉದಯೋನ್ಮುಖ ಬ್ರ್ಯಾಂಡ್‌ಗಳ ಮುಂದೆ ಇರುವ ಪ್ರಾಥಮಿಕ ಸವಾಲಾಗಿದೆ. 
ZEE ಬ್ರಾಂಡ್ ವರ್ಕ್ಸ್ HSM ಮತ್ತು ಪ್ರಾದೇಶಿಕ ಮಾರುಕಟ್ಟೆ ಕ್ಲಸ್ಟರ್‌ಗಳಲ್ಲಿ ಬ್ರ್ಯಾಂಡ್ ಮೌಲ್ಯ ಮತ್ತು ಮಾರಾಟವನ್ನು ಹೆಚ್ಚಿಸಲು ನಮ್ಮ ಪ್ರಯತ್ನಗಳನ್ನು ಮತ್ತಷ್ಟು ತೀವ್ರಗೊಳಿಸುತ್ತದೆ. ಈ  ಪಯಣದಲ್ಲಿ ಸಮಾನ ಮನಸ್ಕ ಮಾರಾಟಗಾರರೊಂದಿಗೆ ಪಾಲುದಾರಿಕೆ ಹೊಂದಲು ಮತ್ತು ಅವರ ಬೆಳವಣಿಗೆಯ ಕಾರ್ಯತಂತ್ರಗಳನ್ನು ಹೆಚ್ಚಿಸಲು ನಾವು ಉತ್ಸುಕರಾಗಿದ್ದೇವೆ ಎಂದು ಹೇಳಿದ್ದಾರೆ. 

ZEE ಬ್ರಾಂಡ್ ವರ್ಕ್ಸ್ ಹೊಸ ಯೋಜನೆಗಳನ್ನು ಪ್ರಾರಂಭಿಸಿದೆ. ಬ್ರ್ಯಾಂಡ್‌ಗಳ ವೈವಿಧ್ಯಮಯ ಉದ್ದೇಶಗಳಿಗೆ ಅನುಗುಣವಾಗಿ ಪ್ರೇಕ್ಷಕರನ್ನು ಪರಿಣಾಮಕಾರಿಯಾಗಿ ತಲುಪಲು ಅವುಗಳನ್ನು ವಿನ್ಯಾಸಗೊಳಿಸಲಾಗಿದೆ. 

ಇದನ್ನೂ ಓದಿ : ಅಬ್ಬಬ್ಬಾ..! ಒಂದೇ ದಿನದಲ್ಲಿ ʼವಿಕ್ರಾಂತ್ ರೋಣʼ ಕಲೆಕ್ಷನ್‌ ಮಾಡಿದ್ದು ಎಷ್ಟು ಗೊತ್ತಾ?

ZEE network ದೃಶ್ಯ ಮಾಧ್ಯಮ, ಒಟಿಟಿ ಆನ್ ಗ್ರೌಂಡ್ ಮತ್ತು ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಂಡು  ಪ್ರಾಡಕ್ಟ್ ಲಾಂಚ್ ಅನ್ನು ವಿನ್ಯಾಸಗೊಳಿಸುತ್ತಿದೆ. ಬ್ರಾಂಡ್ ನ ವಿಶೇಷತೆ, ಉಪಯುಕ್ತತೆ ಮತ್ತು ಭವ್ಯತೆ ಇದರಲ್ಲಿ ಮಹತ್ವ ಪಡೆದುಕೊಂಡಿದೆ. 

ಈ ಕಾಲದ ದೂರದರ್ಶಿತ್ವ ಮತ್ತು ಉದ್ಯಮಿಗಳ ಸಮುದಾಯಕ್ಕೆ ಹೊಸ ರೀತಿಯ ಸೃಜನಾತ್ಮಕ ಪರಿಹಾರಗಳನ್ನು ಒದಗಿಸುತ್ತದೆ. ಭಾರತದ ಆರ್ಥಿಕತೆಯ ಪ್ರಗತಿಯಲ್ಲಿ ಅವರ ಕೊಡುಗೆ ಯಶಸ್ವಿ ಕಂಪನಿಗಳ ಯಶಸ್ಸಿನ ಯಾನ, ಯಶಸ್ಸಿನ ಗುಟ್ಟನ್ನು ಇದರಲ್ಲಿ ಹೈ ಲೈಟ್ ಮಾಡಲಾಗುತ್ತದೆ. 
  
ಇದರಲ್ಲಿ ಟಿವಿ ಸ್ಟಾರ್ ತಮ್ಮ ವಾಸ್ತವ ಇರುವಿಕೆಯಲ್ಲಿ ಕಾಣಿಸುತ್ತಾರೆ. ವಿಶೇಷ ಸಂದರ್ಶನ ಅನನ್ಯ ದೃಶ್ಯಗಳು ಇದರಲ್ಲಿ ಇರಲಿವೆ.  

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More