Home> Entertainment
Advertisement

YouTube ನಲ್ಲಿ ಹೊಸ ದಾಖಲೆ ಸೃಷ್ಟಿಸಿದ KGF Chapter 2 Teaser

ನಿನ್ನೆ ರಾತ್ರಿ ತೆರೆಗೆ ಬಂದ ಕೆಜಿಎಫ್ 2 ರ ಟೀಸರ್ ಬಿಡುಗಡೆಯಾದ ನಂತರ ಯಶ್ ಅವರ ಅಭಿಮಾನಿಗಳು ಬಹಳ ಉತ್ಸುಕರಾಗಿದ್ದಾರೆ.ಈಗಾಗಲೇ ಯಶ್ ಅವರ ಈ ಟಿಸರ್ ಅಭಿಮಾನಿಗಳಂತೂ ಫುಲ್ ಫಿದಾ ಆಗಿದ್ದಾರೆ.ಆ ಮೂಲಕ ಕನ್ನಡದ ಸೂಪರ್‌ಸ್ಟಾರ್ ಈಗ ದೇಶದ ಅತ್ಯಂತ ಪ್ರೀತಿಯ ನಟರಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದಾರೆ ಮತ್ತು ಅವರ ಟೀಸರ್ ಭಾರತೀಯ ಸಿನಿಮಾದಲ್ಲಿ ಹೊಸ ಬೆಂಚ್ ಮಾರ್ಕನ್ನು ಸೃಷ್ಟಿಸಿದೆ.

YouTube ನಲ್ಲಿ ಹೊಸ ದಾಖಲೆ ಸೃಷ್ಟಿಸಿದ KGF Chapter 2 Teaser

ನವದೆಹಲಿ: ನಿನ್ನೆ ರಾತ್ರಿ ತೆರೆಗೆ ಬಂದ ಕೆಜಿಎಫ್ 2 ರ ಟೀಸರ್ ಬಿಡುಗಡೆಯಾದ ನಂತರ ಯಶ್ ಅವರ ಅಭಿಮಾನಿಗಳು ಬಹಳ ಉತ್ಸುಕರಾಗಿದ್ದಾರೆ.ಈಗಾಗಲೇ ಯಶ್ ಅವರ ಈ ಟಿಸರ್ ಅಭಿಮಾನಿಗಳಂತೂ ಫುಲ್ ಫಿದಾ ಆಗಿದ್ದಾರೆ.ಆ ಮೂಲಕ ಕನ್ನಡದ ಸೂಪರ್‌ಸ್ಟಾರ್ ಈಗ ದೇಶದ ಅತ್ಯಂತ ಪ್ರೀತಿಯ ನಟರಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದಾರೆ ಮತ್ತು ಅವರ ಟೀಸರ್ ಭಾರತೀಯ ಸಿನಿಮಾದಲ್ಲಿ ಹೊಸ ಬೆಂಚ್ ಮಾರ್ಕನ್ನು ಸೃಷ್ಟಿಸಿದೆ.

ಇದನ್ನೂ ಓದಿ: WATCH: ಬಹುನಿರೀಕ್ಷಿತ KGF Chapter 2 Teaser ಬಿಡುಗಡೆ

ಅಚ್ಚರಿ ಎಂದರೆ ಯೂಟ್ಯೂಬ್‌ನಲ್ಲಿ ಟಿಸರ್ ಬಿಡುಗಡೆಯಾದ 18 ಗಂಟೆಗಳಲ್ಲಿ 5.5 ಕೋಟಿಗೂ ಅಧಿಕ ವಿಕ್ಷಣೆಯನ್ನು ಕಂಡಿದೆ. ಅಷ್ಟೇ ಅಲ್ಲದೆ 34 ಲಕ್ಷಕ್ಕೂ ಅಧಿಕ ಲೈಕ್ ಗಳಿಸುವ ಮೂಲಕ ಭಾರತೀಯ ಸಿನಿ ಇತಿಹಾಸದಲ್ಲೇ ಬಿಡುಗಡೆಯಾದ ಕೇವಲ 24 ಗಂಟೆಯೊಳಗೆ ಅಧಿಕ ವೀಕ್ಷಣೆ ಕಂಡ ಟೀಸರ್ ಎನ್ನುವ ಖ್ಯಾತಿಗೆ KGF Chapter 2 (KGF: Chapter 2) Teaser ಪಾತ್ರವಾಗಿದೆ.

ಇದನ್ನೂ ಓದಿ: KGF Chapter 2: ಬಿಡುಗಡೆಯಾಗುತ್ತಿದ್ದಂತೆ ಟ್ರೆಂಡ್ ಸೃಷ್ಟಿಸಿದೆ ಈ ಚಿತ್ರದ ಫಸ್ಟ್ ಲುಕ್

ರಾಕಿಂಗ್ ಸ್ಟಾರ್ ಯಶ್(Yash) ಕೆಜಿಎಫ್ ಚಾಪ್ಟರ್ 2 ರ ಟೀಸರ್ ನಲ್ಲಿ ತನ್ನ ಮಾಸ್ ಹೀರೋ ಆಗಿ ಗಮನ ಸೆಳೆದಿದ್ದಾರೆ.ಇನ್ನೊಂದೆಡೆಗೆ ಅವರ ಪ್ರತಿಸ್ಪರ್ಧಿ ಅಧೀರಾ (Adheera) ಪಾತ್ರದಲ್ಲಿ ಸಂಜಯ್ ದತ್ ಲುಕ್ ಕೂಡ ಅಷ್ಟೇ ಅದ್ಧೂರಿಯಾಗಿ ಮೂಡಿ ಬಂದಿದೆ.ಇನ್ನೊಂದೆಡೆಗೆ ರಾಜಕಾರಣಿ ಪಾತ್ರದಲ್ಲಿ ರವೀನಾ ಟಂಡನ್ ಕೂಡ ರಫ್ ಅಂಡ್ ಟಫ್ ಎನ್ನುವಂತೆ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ 'KGF 2' ತಂಡದಿಂದ ಗಿಫ್ಟ್

ಈ ಚಿತ್ರವೂ 2020 ರ ಅಕ್ಟೋಬರ್‌ನಲ್ಲಿ ತೆರೆಗೆ ಬರಲಿದೆ ಎಂದು ನಿರೀಕ್ಷಿಸಲಾಗಿತ್ತು ಆದರೆ ಕೊರೊನಾ ಹಾಗೂ ಸಂಜಯ ದತ್ ಅವರ ಅನಾರೋಗ್ಯದ ಹಿನ್ನಲೆಯಲ್ಲಿ ನಿರ್ಮಾಣದ ಕಾರ್ಯ ವಿಳಂಬವಾಯಿತು. ಆದರೆ ಈಗ ಈ ಟೀಸರ್‌ನ ಒಂದು ನೋಟದಿಂದ, ಕೆಜಿಎಫ್ ಚಾಪ್ಟರ್ 2 ಪ್ರೇಕ್ಷಕರನ್ನು ಮತ್ತೆ ಚಿತ್ರಮಂದಿರಗಳಿಗೆ ಅದ್ಧೂರಿಯಾಗಿ ಸೆಳೆಯಲಿದೆ ಎಂದರೆ ಅದು ಅತಿಶಯೋಕ್ತಿಯಾಗಲಾರದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ

Android Link - https://bit.ly/3hDyh4G
iOS Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More