Home> Entertainment
Advertisement

Yash Boss:ದೇಶಾದ್ಯಂತ ಟ್ರೆಂಡ್​ ಆಗ್ತಿದೆ ‘ಯಶ್‌ ಬಾಸ್’ ಹೆಸರು!

ಕೆಜಿಎಫ್ ಚಾಪ್ಟರ್​ 2 ಸಿನಿಮಾ ವಿಶ್ವಾದ್ಯಂತ ಹವಾ ಮಾಡುತ್ತಿದೆ. ಈ ಗೆಲುವಿನಿಂದ ಖುಷಿ ಆಗಿರುವ ಅಭಿಮಾನಿಗಳು ‘ಯಶ್​ ಬಾಸ್​’ ಎಂದು ಜೈಕಾರ ಹಾಕುತ್ತಿದ್ದಾರೆ. ಟ್ವಿಟರ್​ನಲ್ಲಿ ಇಂದು ಯಶ್‌ ಆರ್ಭಟ ಕಂಡು ಜನ ದಂಗಾಗಿದ್ದಾರೆ.

Yash Boss:ದೇಶಾದ್ಯಂತ ಟ್ರೆಂಡ್​ ಆಗ್ತಿದೆ ‘ಯಶ್‌ ಬಾಸ್’ ಹೆಸರು!

ಎಲ್ಲೆಲ್ಲೂ ಕೆಜಿಎಫ್‌2 ಸಿನಿಮಾ ಧೂಳೆಬ್ಬಿಸಿದೆ. ನಟ ಯಶ್​ ಅಭಿನಯಕ್ಕೆ ಜನ ಮರುಳಾಗಿದ್ದಾರೆ. ಅಲ್ಲದೇ ತಮ್ಮ ನೆಚ್ಚಿನ ನಟನನ್ನು ಅಭಿಮಾನಿಗಳು ಬಾಸ್ ಎಂದು ಕರೆದಿದ್ದಾರೆ. 

ಇದನ್ನೂ ಓದಿ: Kantara Teaser: ಕಾಂತಾರ ಟೀಸರ್‌ ರಿಲೀಸ್‌! ದೆವ್ವದ ಕಥೆ ಹೇಳಲು ಬರುತ್ತಿದ್ದರಾ ರಿಷಬ್ ಶೆಟ್ಟಿ?

ಕೆಜಿಎಫ್ ಚಾಪ್ಟರ್​ 2 ಸಿನಿಮಾ ವಿಶ್ವಾದ್ಯಂತ ಹವಾ ಮಾಡುತ್ತಿದೆ. ಈ ಗೆಲುವಿನಿಂದ ಖುಷಿ ಆಗಿರುವ ಅಭಿಮಾನಿಗಳು ‘ಯಶ್​ ಬಾಸ್​’ ಎಂದು ಜೈಕಾರ ಹಾಕುತ್ತಿದ್ದಾರೆ. ಟ್ವಿಟರ್​ನಲ್ಲಿ ಇಂದು ಯಶ್‌ ಆರ್ಭಟ ಕಂಡು ಜನ ದಂಗಾಗಿದ್ದಾರೆ.

ಈ ಸಿನಿಮಾಗೆ ಸಂಬಂಧಿಸಿದ ಅನೇಕ ವಿಚಾರಗಳು ಟ್ರೆಂಡ್​ ಆಗುತ್ತಿವೆ. ಆ ಪೈಕಿ #YashBoss ಎಂಬ ಹ್ಯಾಶ್​ ಟ್ಯಾಗ್​ ಎಲ್ಲರ ಚಿತ್ತವನ್ನು ಆಕರ್ಷಿಸುತ್ತಿದೆ. 

 

 

ಆರಂಭದ ದಿನಗಳಲ್ಲಿ ಕಷ್ಟಪಟ್ಟು ಮೇಲೆ ಬಂದ ನಟ ಯಶ್‌ ಅವರಿಗೆ ಫ್ಯಾನ್ಸ್‌ ಬಾಸ್‌ ಸ್ಥಾನ ಕೊಟ್ಟಿದ್ದಾರೆ. ಬೆಂಗಳೂರಿನಲ್ಲಿ ಉಳಿದುಕೊಳ್ಳಲು ಜಾಗ ಇಲ್ಲದೇ ನೋವು ಅನುಭವಿಸಿದ್ದ ಯಶ್‌, ಇದೀಗ ಅಭಿಮಾನಿಗಳಿಂದ ‘ಯಶ್​ ಬಾಸ್​’ ಎನಿಸಿಕೊಳ್ಳುವ ಮಟ್ಟಕ್ಕೆ ಬೆಳೆದು ನಿಂತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ.

ಇದನ್ನೂ ಓದಿ: KGF: Chapter 2: ಕನ್ನಡದ ‘ರಾಕಿ’ ಅಬ್ಬರಕ್ಕೆ ಬಾಲಿವುಡ್ ಶೇಕ್ ಶೇಕ್..!

ಪ್ರಶಾಂತ್​ ನೀಲ್​ ನಿರ್ದೇಶನದ ಕೆಜಿಎಫ್‌2 ಸಿನಿಮಾವನ್ನು ವಿಜಯ್​ ಕಿರಗಂದೂರು  ನಿರ್ಮಾಣ ಮಾಡಿದ್ದಾರೆ. ಈ ಪ್ಯಾನ್‌ ಇಂಡಿಯಾ ಸಿನಿಮಾ ಮೊದಲ ದಿನವೇ ಧೂಳೆಬ್ಬಿಸಿದ್ದು, ಯಶ್​ ಜೊತೆ ಕೆಲಸ ಮಾಡಲು ಭಾರತೀಯ ಚಿತ್ರರಂಗದ ಅನೇಕ ಘಟಾನುಘಟಿಗಳು ಈಗ ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More