Home> Entertainment
Advertisement

ಯಶ್‌ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌ : ಡೈರೆಕ್ಟರ್‌ ಮತ್ತು ಸ್ಟೋರಿ ಫಿಕ್ಸ್‌, ಶಿಘ್ರದಲ್ಲೇ ಅನೌನ್ಸ್‌

Yash19 update : ಖ್ಯಾತ ಮಲಯಾಳಂ ನಿರ್ದೇಶಕಿ ಗೀತು ಮೋಹನ್ ದಾಸ್ ಯಶ್ ಜೊತೆ ಸಿನಿಮಾ ಮಾಡಲಿದ್ದಾರೆ. ಸದ್ಯ ಈ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು... ಸದ್ಯದಲ್ಲೇ ಅಧಿಕೃತ ಘೋಷಣೆ ಹೊರಬೀಳಲಿದೆ. 

ಯಶ್‌ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌ : ಡೈರೆಕ್ಟರ್‌ ಮತ್ತು ಸ್ಟೋರಿ ಫಿಕ್ಸ್‌, ಶಿಘ್ರದಲ್ಲೇ ಅನೌನ್ಸ್‌

Yash new movie : ರಾಷ್ಟ್ರಪ್ರಶಸ್ತಿ ವಿಜೇತ ಮಲಯಾಳಂ ನಿರ್ದೇಶಕಿ ಗೀತು ಮೋಹನ್ ದಾಸ್ ಅವರ ಜೊತೆ ರಾಕಿಂಗ್‌ ಸ್ಟಾರ್‌ ಯಶ್ ಅವರು ಸಿನಿಮಾ ಮಾಡ್ತಾರೆ ಎನ್ನುವ ಮಾತು ಕೇಳಿ ಬರುತ್ತಿತ್ತು. ಇದೀಗ ಆ ಮಾತು ನಿಜವಾಗುವಂತಿದೆ. ಏಕೆಂದರೆ ಯಶ್‌ ಗೀತು ಅವರ ಸಿನಿಮಾದ ಸ್ಕ್ರೀಪ್ಟ್‌ ನೋಡಿ ಮೆಚ್ಚುಕೊಂಡಿದ್ದು, ಸಿನಿಮಾ ಮಾಡೋಕೆ ಓಕೆ ಎಂದಿದ್ದಾರೆ ಎಂದು ಹೇಳಲಾಗುತ್ತಿದೆ.

ಹೌದು.. ಗೀತು ಮೋಹನ್‌ ದಾಸ್‌ ಅವರ ಜೊತೆ ಯಶ್‌ ಸಿನಿಮಾ ಮಾಡ್ತಾರಾ? ಯಶ್‌ 19ನೇ ಚಿತ್ರವನ್ನು ನಿರ್ದೇಶಿಸುವ ಅವಕಾಶ ಅವರಿಗೆ ಸಿಕ್ಕಿದೆಯೇ? ಅಂದರೆ... ಕನ್ನಡ ಚಿತ್ರರಂಗದ ಕೆಲವರು ‘ಹೌದು’ ಎನ್ನುತ್ತಿದ್ದಾರೆ. ಸದ್ಯ ಈ ಬಗ್ಗೆ ಚರ್ಚೆ ನಡೆಯುತ್ತಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಈ ಬಗ್ಗೆ ಅಧಿಕೃತವಾಗಿ ಘೋಷಣೆ ಹೊರಬೀಳಲಿದೆ ಎನ್ನಲಾಗಿದೆ.

ಇದನ್ನೂ ಓದಿ: ವರ್ಕ್ ಫ್ರಮ್ ಥಿಯೇಟರ್‌..? ಕೆಲಸ ಮಾಡುತ್ತಲೇ ಜವಾನ್‌ ಸಿನಿಮಾ ನೋಡಿದ ವ್ಯಕ್ತಿ : ವಿಡಿಯೋ ನೋಡಿ

ಪ್ರಶಾಂತ್ ನೀಲ್ ನಿರ್ದೇಶನದ 'ಕೆಜಿಎಫ್' ಮತ್ತು 'ಕೆಜಿಎಫ್ ಚಾಪ್ಟರ್ 2' ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಯಶಸ್ಸನ್ನು ಕಂಡಿವೆ. 'ಕೆಜಿಎಫ್' ಭಾರತೀಯ ಸಿನಿಮಾವನ್ನು ನೆಕ್ಸ್ಟ್‌ ಲೆವೆಲ್‌ಗೆ ಕೊಂಡೊಯ್ದಿದೆ. ಅದರೊಂದಿಗೆ ಯಶ್ ನೆಕ್ಸ್ಟ್ ನ ಪ್ರಾಜೆಕ್ಟ್ ಬಗ್ಗೆ ಉತ್ಸಾಹ ಮೂಡಿದೆ. ಅವರ ಮುಂದಿನ ಚಿತ್ರದ ಬಗ್ಗೆ ಈಗಾಗಲೇ ಹಲವು ಊಹಾಪೋಹಗಳು ಎದ್ದಿವೆ.

ಅಲ್ಲದೆ, ಯಶ್‌ ಅಭಿಮಾನಿಗಳು ಈಗಾಗಲೇ 'ಕೆಜಿಎಫ್ ಚಾಪ್ಟರ್ 3' ಗಾಗಿ ಕಾಯುತ್ತಿದ್ದಾರೆ.. ಸದ್ಯ ಯಶ್ ಅವರ ಮುಂಬರುವ ಚಿತ್ರದ ಕುರಿತು ಕ್ರೇಜಿ ಅಪ್‌ಡೇಟ್ ಲಭಿಸಿದೆ. ರಾಕಿಭಾಯ್‌ ತಮ್ಮ ಮುಂದಿನ ಚಿತ್ರವನ್ನು ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಗೀತು ಮೋಹನ್‌ದಾಸ್ ಅವರೊಂದಿಗೆ ಮಾಡಲಿದ್ದಾರೆ ಎಂಬ ವರದಿಗಳಿವೆ. ಈ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಭಾರಿ ಚರ್ಚೆ ನಡೆಯುತ್ತಿವೆ.

ಇದನ್ನೂ ಓದಿ: ಜಂಬದ ಹುಡುಗಿ ಕೈಯಲ್ಲಿ 'ರಣಹದ್ದು': ಫಸ್ಟ್ ಲುಕ್ ರಿಲೀಸ್ ಮಾಡಿದ ರಾಕಿಂಗ್ ಸ್ಟಾರ್ ಮೊದಲ ನಾಯಕಿ

ಈ ಕುರಿತು ಪ್ರತಿಕ್ರಿಯಿಸಿದ ಯಶ್, ಕಳೆದ ವರ್ಷದಿಂದ ನಿರ್ದೇಶಕ ಗೀತು ಮೋಹನ್‌ದಾಸ್ ಅವರೊಂದಿಗೆ ಮಾತುಕತೆ ನಡೆಯುತ್ತಿದೆ. ಗೀತು ಅವರಿಗೆ ಬಂದ ಪರಿಕಲ್ಪನೆಯಿಂದ ಬೌಲ್ಡ್ ಆಗಿದ್ದೇನೆ ಎಂದು ಹೇಳಿದ್ದಾರೆ. ಯಶ್ ಈ ಬಾರಿ ಬಜೆಟ್ ಆಧಾರಿತ ಸಿನಿಮಾಕ್ಕಿಂತ ಕಥೆಗೆ ಹೈಪ್ ತರುವ ಸಿನಿಮಾ ಮಾಡಲಿದ್ದಾರಂತೆ. ಈ ಸಿನಿಮಾದಿಂದ ಅಭಿಮಾನಿಗಳು ಸಾಕಷ್ಟು ನಿರೀಕ್ಷೆಯಲ್ಲಿದ್ದಾರೆ.

ಕಥೆಗಳಿಗೆ ಪ್ರಾಧಾನ್ಯತೆ ನೀಡಿ ರಿಸ್ಕ್ ತೆಗೆದುಕೊಳ್ಳುವ ಯಶ್ ಕಥೆಯ ಚಾಲೆಂಜಿಂಗ್ ಕಂಡು ಓಕೆ ಅಂದಿದ್ದು, ಕೆಲ ದಿನಗಳಿಂದ ಆ ಕೆಲಸದಲ್ಲಿ ತೊಡಗಿದ್ದಾರೆ ಎಂದು ವರದಿಯಾಗಿದೆ. ಸದ್ಯ ಚರ್ಚೆಯಲ್ಲಿರುವ ಈ ಸಿನಿಮಾ ಇನ್ನು 30 ದಿನಗಳಲ್ಲಿ ಅನೌನ್ಸ್ ಆಗಲಿದೆ ಎಂಬುದು ಯಶ್ ಅಭಿಮಾನಿಗಳ ನಂಬಿಕೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More