Home> Entertainment
Advertisement

ಕ್ರಿಕೆಟ್ ಆಟಗಾರ್ತಿ ವೇದಾ ಕೃಷ್ಣಮೂರ್ತಿಗೂ ಇಷ್ಟವಾಯ್ತು 'ನಟಸಾರ್ವಭೌಮ'

ಪುನೀತ್ ರಾಜಕುಮಾರ್ ಅಭಿನಯದ ನಟಸಾರ್ವಭೌಮ ಬಿಡುಗಡೆಯಾಗಿ ರಾಜ್ಯದಾದ್ಯಂತ ಅದ್ಧೂರಿ ಪ್ರದರ್ಶನ ಕಾಣುತ್ತಿದೆ.ಇಂತಹ ಪವರ್ ಫುಲ್ ಮೂವಿಗೆ ಈಗ ಅಂತರಾಷ್ಟ್ರೀಯ ಕ್ರಿಕೆಟ್ ಆಟಗಾರ್ತಿ ಹಾಗೂ ಹೆಮ್ಮಯ ಕನ್ನಡತಿ ವೇದಾ ಕೃಷ್ಣಮೂರ್ತಿ ಕೂಡ ಮೊದಲ ದಿನವೇ ಸಿನಿಮಾವನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕ್ರಿಕೆಟ್ ಆಟಗಾರ್ತಿ ವೇದಾ ಕೃಷ್ಣಮೂರ್ತಿಗೂ ಇಷ್ಟವಾಯ್ತು 'ನಟಸಾರ್ವಭೌಮ'

ಬೆಂಗಳೂರು: ಪುನೀತ್ ರಾಜಕುಮಾರ್ ಅಭಿನಯದ ನಟಸಾರ್ವಭೌಮ ಬಿಡುಗಡೆಯಾಗಿ ರಾಜ್ಯದಾದ್ಯಂತ ಅದ್ಧೂರಿ ಪ್ರದರ್ಶನ ಕಾಣುತ್ತಿದೆ.ಇಂತಹ ಪವರ್ ಫುಲ್ ಮೂವಿಗೆ ಈಗ ಅಂತರಾಷ್ಟ್ರೀಯ ಕ್ರಿಕೆಟ್ ಆಟಗಾರ್ತಿ ಹಾಗೂ ಹೆಮ್ಮಯ ಕನ್ನಡತಿ ವೇದಾ ಕೃಷ್ಣಮೂರ್ತಿ ಕೂಡ ಮೊದಲ ದಿನವೇ ಸಿನಿಮಾವನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಟ ಸಾರ್ವಭೌಮ ಸಿನಿಮಾ ನೋಡಿದ ನಂತರ ಚಿತ್ರದ ಬಗ್ಗೆ ಸಂತಸ ವ್ಯಕ್ತಪಡಿಸಿ " ಇದು ನೋಡಲೇ ಬೇಕಾದ ಅದ್ಬುತ ಸಿನಿಮಾ! ಕ್ಲೈಮ್ಯಾಕ್ಸ್ ಕೂಡ ಚೆನ್ನಾಗಿದೆ.ಈ ಸಿನಿಮಾ ಎಲ್ಲ ದಾಖಲೆಗಳನ್ನು ಮುರಿಯಲಿ ಎಂದು ಅವರು ಟ್ವೀಟ್ ಮೂಲಕ ಆಶಯ ವ್ಯಕ್ತಪಡಿಸಿದ್ದಾರೆ.

ವಿಶೇಷವೆಂದರೆ ವೇದಾ ಕೃಷ್ಣಮೂರ್ತಿಯವರ  ಟ್ವೀಟ್ ಗೆ ಪುನೀತ್ ರಾಜಕುಮಾರ್ ಟ್ವೀಟ್ ಮೂಲಕ ಪ್ರತಿಕ್ರಿಯಿಸಿ " ಥ್ಯಾಂಕ್ಯು ವೇದಾ ಕೃಷ್ಣಾ ಮೂರ್ತಿ ನಟಸಾರ್ವಭೌಮ ಸಿನಿಮಾ ನೋಡಿ ಇಷ್ಟಪಟ್ಟಿದ್ದು ನಮಗೆ ಸಂತಸ ತಂದಿದೆ ಎಂದು ಅವರು ತಿಳಿಸಿದ್ದಾರೆ.

 

Read More