Home> Entertainment
Advertisement

Will Smith Ban:ವಿಲ್‌ ಸ್ಮಿತ್‌ಗೆ 10 ವರ್ಷ ಆಸ್ಕರ್ ಪ್ರಶಸ್ತಿ ಸಮಾರಂಭಕ್ಕೆ ನಿರ್ಬಂಧ

ಏಪ್ರಿಲ್ 8, 2022 ರಿಂದ 10 ವರ್ಷಗಳ ಕಾಲ ವಿಲ್‌ ಸ್ಮಿತ್‌ ಆಸ್ಕರ್ ಪ್ರಶಸ್ತಿ ಸಮಾರಂಭಗಳಲ್ಲಿ ಭೌತಿಕ ಮತ್ತು ವರ್ಚುವಲ್ ಆಗಿ ಭಾಗವಹಿಸುವಂತಿಲ್ಲ ಎಂದು ಮಂಡಳಿಯ ಸಭೆ ನಿರ್ಧರಿಸಲಾಗಿದೆ. 

Will Smith Ban:ವಿಲ್‌ ಸ್ಮಿತ್‌ಗೆ 10 ವರ್ಷ ಆಸ್ಕರ್ ಪ್ರಶಸ್ತಿ ಸಮಾರಂಭಕ್ಕೆ ನಿರ್ಬಂಧ

Oscar Awards ಸಮಾರಂಭವನ್ನು ಸಿನಿ ಜಗತ್ತಿನ ಅತಿದೊಡ್ಡ ಸಮಾರಂಭ ಎಂದೇ ಪರಿಗಣಿಸಲಾಗುತ್ತದೆ. ಆದರೆ ಈ ಕಾರ್ಯಕ್ರಮದ ವೇದಿಕೆಯಲ್ಲಿ ನಟ ವಿಲ್ ಸ್ಮಿತ್ (Will Smith) ಸಹ ನಟನ ಕೆನ್ನೆಗೆ ಬಾರಿಸುವ ಮೂಲಕ ವಿವಾದವನ್ನು ಮೈಗೆಳೆದುಕೊಂಡಿದ್ದರು. ಘಟನೆ ನಡೆದ ಬಳಿಕ ತೀವ್ರ ಚರ್ಚೆಗಳು ನಡೆದಿದ್ದು, ಇದೀಗ ಸ್ಮಿತ್ ಅವರನ್ನು ಹಾಲಿವುಡ್ ಫಿಲ್ಮ್ ಅಕಾಡೆಮಿಯು 10 ವರ್ಷಗಳ ಕಾಲ ಆಸ್ಕರ್‌ ಪ್ರಶಸ್ತಿ ಸಮಾರಂಭಗಳಿಂದ ನಿಷೇಧಿಸಿ ಆದೇಶ ಹೊರಡಿಸಿದೆ.  

ಇದನ್ನು ಓದಿ: Oscars 2022: ವೇದಿಕೆ ಮೇಲೆ ಸಹ ನಟನ ಕೆನ್ನೆಗೆ ಹೊಡೆದ ನಟ ವಿಲ್‌ ಸ್ಮಿತ್!

ಏಪ್ರಿಲ್ 8, 2022 ರಿಂದ 10 ವರ್ಷಗಳ ಕಾಲ ವಿಲ್‌ ಸ್ಮಿತ್‌ ಆಸ್ಕರ್ ಪ್ರಶಸ್ತಿ ಸಮಾರಂಭಗಳಲ್ಲಿ ಭೌತಿಕ ಮತ್ತು ವರ್ಚುವಲ್ ಆಗಿ ಭಾಗವಹಿಸುವಂತಿಲ್ಲ ಎಂದು ಮಂಡಳಿಯ ಸಭೆ ನಿರ್ಧರಿಸಲಾಗಿದೆ. 

ʼಆಸ್ಕರ್ ಪ್ರಶಸ್ತಿ ಸಮಾರಂಭವು ಸಿನಿಮಾ ರಂಗದಲ್ಲಿ ಅಸಾಧಾರಣ ಸಾಧನೆ ಮಾಡಿದ ವ್ಯಕ್ತಿಗಳ ಸಂಭ್ರಮದ ಕ್ಷಣವಾಗಿತ್ತು. ಅಂತಹ ಕ್ಷಣಗಳನ್ನು ಹಾಳುಮಾಡಿದ ಸ್ಮಿತ್ ಅವರ ವರ್ತನೆಯು ಸ್ವೀಕಾರರ್ಹವಲ್ಲ’ ಎಂದು ಅಕಾಡೆಮಿ ಹೇಳಿಕೆಯಲ್ಲಿ ತಿಳಿಸಿದೆ. 

ಇದನ್ನು ಓದಿ: PBKS v GT: 6,6 ತೇವಾಟಿಯಾ ಕೊನೆಯ ಓವರ್ ಥ್ರಿಲ್ಲರ್ ಸಿಕ್ಸರ್ ಗೆ ಬೆಚ್ಚಿದ ಪಂಜಾಬ್ ಕಿಂಗ್ಸ್..!

ಇನ್ನು ನಿರ್ಬಂಧದ ಕುರಿತು ಮಾತನಾಡಿರುವ ವಿಲ್‌ ಸ್ಮಿತ್, ನಾನು ಅಕಾಡೆಮಿಯ ನಿರ್ಧಾರವನ್ನು ಸ್ವೀಕರಿಸುತ್ತೇನೆ ಮತ್ತು ಗೌರವಿಸುತ್ತೇನೆ ಎಂದು ಹೇಳಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More