Home> Entertainment
Advertisement

Viral Video: ಹಲವು ಡಾನ್ಸರ್ ಗಳ ಜೊತೆಗೆ ನೇರ ಪೈಪೋಟಿಗಿಳಿದ Nora Fatehi

ಕೆಲವೇ ಗಂಟೆಗಳ ಹಿಂದೆ ಖ್ಯಾತ ಬಾಲಿವುಡ್ ಡ್ಯಾನ್ಸರ್ ನೋರಾ ಫತೇಹಿ ತನ್ನ ಈ ವಿಡಿಯೋ ಅನ್ನು ಅಭಿಮಾನಿಗಳ ಜೊತೆಗೆ ಹಂಚಿಕೊಂಡಿದ್ದಾಳೆ. ಸದ್ಯ ಅವಳ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಕತ್ ವೈರಲ್ ಆಗಲಾರಂಭಿಸಿದೆ.

Viral Video: ಹಲವು ಡಾನ್ಸರ್ ಗಳ ಜೊತೆಗೆ ನೇರ ಪೈಪೋಟಿಗಿಳಿದ Nora Fatehi

ನವದೆಹಲಿ: ತನ್ನ ಅಭಿಮಾನಿಗಳ ಹೃದಯಕ್ಕೆ ಹೇಗೆ ಲಗ್ಗೆ ಇಡಬೇಕು ಎಂಬುದು ಬಾಲಿವುಡ್ ಖ್ಯಾತ ನರ್ತಕಿ ನೋರಾ ಫತೆಹಿಗೆ ಚೆನ್ನಾಗಿ ತಿಳಿದಿದೆ. ಕೊರೊನಾ ವೈರಸ್ ಲಾಕ್ ಡೌನ್ ಹಿನ್ನೆಲೆಯಲ್ಲಿಯೂ ಕೂಡ ತನ್ನ ಅಭಿಮಾನಿಗಳ ಜೊತೆಗೆ  ಕನೆಕ್ಟ್ ಆಗಿರಲು ನೋರಾ ನಿತ್ಯ ವಿನೂತನ ಪ್ರಯತ್ನ ನಡೆಸುತ್ತಲೇ ಇದ್ದಾಳೆ. ಸಾಮಾನ್ಯವಾಗಿ ನೋರಾ ತನ್ನ ಅತ್ಯದ್ಭುತ ಡಾನ್ಸ್ ಮೂವ್ ಗಳಿಗಾಗಿ ಹೆಸರುವಾಸಿ. ಬಾಲಿವುಡ್ ಚಿತ್ರಗಳು ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿಯೂ ಕೂಡ ನೋರಾ ತನ್ನ ಪ್ರತಿಭೆಯ ಮೂಲಕ ತನ್ನದೇ ಆದ ಸ್ಥಾನ ಸೃಷ್ಟಿಸಿದ್ದಾಳೆ. ನಿತ್ಯ ಅವಳ ಒಂದಲ್ಲ ಒಂದು ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ ವೈರಲ್ ಆಗುತ್ತಲೇ ಇರುತ್ತದೆ. ಸದ್ಯ ನೋರಾ ತನ್ನ ಮತ್ತೊಂದು ವಿಡಿಯೋವನ್ನು ತನ್ನ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದು, ಈ ವಿಡಿಯೋ ಇದೀಗ ಇಂಟರ್ನೆಟ್ ಮೇಲೆ ಭಾರಿ ವೈರಲ್ ಆಗಲಾರಂಭಿಸಿದೆ.

 
 
 
 

 
 
 
 
 
 
 
 
 

Look at me go!! Yass!! Im so proud of myself.. this entry of mine in SD3 is SAVAGE and FIERCE AF!😍 the day i went to set and saw these outstanding dancers and how technically superior they were to me i was like OH HELL NO.. i cannot do this...i was so nervous dancing with them..i didnt think i would be able to match up! But i pushed cuz i wanted to prove to myself and to everyone that i have no limitations if i dont give up! when i finally saw the end result I couldn’t believe that that was ME pulling off this style and these moves! Bravo Noriana.. im glad i got out of my comfort zone and managed quiet well! Im genuinely so proud of myself and to me this is a lil achievement in my journey as an aritst..the sky is the limit guys dont let nothing stop you!!! FYI This is the actual track which we danced on which was later changed in the edit! I think the original track adds more fire and personality to the whole thing dont u think? 😉☺️ Shoutout to the royals and the choreographers who were so patient with me @rahuldid @iamkrutimahesh and @remodsouza sir! Shoutout to @marcepedrozo for making me look good Shoutout to @anups_ for helping me get the audio right! #selflove #selfappreciation #motivation #sd3 #streetdancer3d

A post shared by Nora Fatehi (@norafatehi) on

ಸಕತ್ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ನೋರಾ ಫತೇಹಿ ತನ್ನ ವಿಶಿಷ್ಟ ಸ್ಟೈಲ್ ನಲ್ಲಿ ಡಾನ್ಸ್ ಮಾಡುತ್ತಿರುವುದನ್ನು ನೀವು ನೋಡಬಹುದು. ಕೆಲ ಗಂಟೆಗಳ ಹಿಂದೆಯೇ ನೋರಾ ತನ್ನ ಈ ವಿಡಿಯೋವನ್ನು ಹಂಚಿಕೊಂಡಿದ್ದು , ಸುಮಾರು ನಾಲ್ಕೂವರೆ ಲಕ್ಷಕ್ಕೂ ಅಧಿಕ ಜನರು ಅದನ್ನು ವೀಕ್ಷಿಸಿದ್ದಾರೆ. ಈ ವಿಡಿಯೋಗೆ ಸಿಗುತ್ತಿರುವ ಪ್ರತಿಕ್ರಿಯೆಯನ್ನು ಗಮನಿಸಿದರೆ ನೋರಾ ಫತೇಹಿ ಅವರ ಮೋಹಕ ನೃತ್ಯ ಅಬಿಮಾನಿಗಳ ಮನದಲ್ಲಿ ಯಾವ ರೀತಿ ಛಾಪು ಮೂಡಿಸಿದೆ ಎಂಬುದರ ಕಲ್ಪನೆಯನ್ನು ನೀವು ಮಾಡಬಹುದು. ನೋರಾ ಸದ್ಯ ತನ್ನ ಈ ವಿಡಿಯೋ ಅನ್ನು ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾಳೆ. ಇತ್ತೀಚೆಗಷ್ಟೇ ನೋರಾ ತನ್ನ ಟಿಕ್-ಟಾಕ್ ಖಾತೆಯ ಮೂಲಕ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಆ ವಿಡಿಯೋದಲ್ಲಿ ನೋರಾ ಬ್ಲಾಕ್ ಡ್ರೆಸ್ ನಲ್ಲಿ ಡಾನ್ಸ್ ಮಾಡುತ್ತಿರುವುದನ್ನು ನೀವು ಗಮನಿಸಬಹುದು.

 
 
 
 

 
 
 
 
 
 
 
 
 

Wow so many norianas 😍 Here goes my tik tok debut! Follow me now #itsnoriana #norafatehi #babyboychallenge

A post shared by Nora Fatehi (@norafatehi) on

ತಮ್ಮ ಚಿತ್ರಗಳು ಹಾಗೂ ಸಾಮಾಜಿಕ ಮಾಧ್ಯಮಗಳ ಮೂಲಕ ತಮ್ಮ ಅಭಿಮಾನಿಗಳ ಜೊತೆಗೆ ಭಾರಿ ಆಕ್ಟಿವ್ ಆಗಿರುವ ಬಾಲಿವುಡ್ ನಟಿ-ಮಣಿಯರಲ್ಲಿ ನೋರಾ ಫತೇಹಿ ಕೂಡ ಒಬ್ಬರಾಗಿದ್ದಾರೆ. ನೋರಾ ವೃತ್ತಿ ಜೀವನದ ಕುರಿತು ಹೇಳುವುದಾದರೆ, ಇತ್ತೀಚೆಗಷ್ಟೇ ನೋರಾ 'ಸ್ಟ್ರೀಟ್ ಡ್ಯಾನ್ಸರ್ 3D'ಯಲ್ಲಿ ಮಹತ್ವದ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಳು. ಇದಕ್ಕೂ ಮೊದಲು ನೋರಾ ಸಲ್ಮಾನ್ ಖಾನ್ ಅಭಿನಯದ 'ಭಾರತ' ಚಿತ್ರದಲ್ಲಿ ಸುನೀಲ್ ಗ್ರೋವರ್ ಜೊತೆಗೆ ನಟಿಸಿದ್ದಳು. ಖ್ಯಾತ ಬಾಲಿವುಡ್ ಹಾಡುಗಳಾಗಿರುವ 'ಓ ಸಾಕಿ ಸಾಕಿ', 'ಏಕ್ ತೋ ಕಮ್ ಜಿಂದಗಾನಿ', 'ದಿಲ್ಬರ್' ಹಾಗೂ 'ಕಮರಿಯಾ' ಹಾಡುಗಳ ಮೂಲಕ ಮನೆಮಾತಾಗಿದ್ದಾರೆ. ಬೆಳ್ಳಿ ಪರದೆಗೆ ಬರುವುದಕ್ಕೂ ಮೊದಲು ನೋರಾ ಕಿರುತೆರೆಯ 'ಬಿಗ್ ಬಾಸ್' ರಿಯಾಲಿಟಿ ಷೋ ಮೂಲಕವೂ ಕೂಡ ಗುರಿತಿಸಿಕೊಂಡಿದ್ದಾರೆ. ಸದ್ಯ ಈ ಮೋಹಕ ತಾರೆ 'ಕ್ವಾರಂಟೀನ್'ನಲ್ಲಿದ್ದರೂ ಕೂಡ ತನ್ನ ಅಭಿಮಾಹಿಗಳ ಜೊತೆಗೆ ಕನೆಕ್ಟ್ ಆಗುವ ಒಂದು ಅವಕಾಶವನ್ನೂ ಕೂಡ ಬಿಡುತ್ತಿಲ್ಲ.

Read More