Home> Entertainment
Advertisement

ವಿಜಯ್‌ - ಸಮಂತಾ ಒಂದೇ ಹಾಸಿಗೆ ಮೇಲೆ... ಬೆಡ್‌ರೂಮ್‌ ಸೀನ್‌ ವೈರಲ್‌!

Samantha Vijay Bedroom Scene: ಕುಶಿ ಸಿನಿಮಾದ ಹಾಡಿನ ಸಣ್ಣ ಕ್ಲಿಪ್ ಅನ್ನು ನಟ ವಿಜಯ್‌ ದೇವರಕೊಂಡ ಹಂಚಿಕೊಂಡಿದ್ದಾರೆ. ವಿಜಯ್ ಮತ್ತು ಸಮಂತಾ ಒಂದೇ ಹಾಸಿಗೆ ಮೇಲೆ ಮಲಗಿರುವುದನ್ನು ಇದರಲ್ಲಿ ಕಾಣಬಹುದು.  
 

ವಿಜಯ್‌ - ಸಮಂತಾ ಒಂದೇ ಹಾಸಿಗೆ ಮೇಲೆ... ಬೆಡ್‌ರೂಮ್‌ ಸೀನ್‌ ವೈರಲ್‌!

Khushi Movie: ವಿಜಯ್ ದೇವರಕೊಂಡ ಮತ್ತು ಸಮಂತಾ ರುತ್ ಪ್ರಭು ಅವರ ಮುಂದಿನ ಕುಶಿ ಒಂದು ರೊಮ್ಯಾಂಟಿಕ್ ಚಿತ್ರವಾಗಿದೆ. ಇದೀಗ ಈ ಸಿನಿಮಾದ ಹಾಡಿನ ಸಣ್ಣ ಕ್ಲಿಪ್ ಅನ್ನು ನಟ ವಿಜಯ್‌ ದೇವರಕೊಂಡ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ, ವಿಜಯ್ ಮತ್ತು ಸಮಂತಾ ಆರಾಮವಾಗಿ ಮಲಗುವುದನ್ನು ಕಾಣಬಹುದು. ಹಾಸಿಗೆಯಲ್ಲಿ ಒಬ್ಬರನ್ನೊಬ್ಬರು ತಬ್ಬಿಕೊಂಡು ಮಲಗಿದ ಕ್ಲಿಪ್‌ನ್ನು ವಿಜಯ್‌ ಶೇರ್‌ ಮಾಡಿದ್ದಾರೆ. 

ಈ ವಿಡಿಯೋದಲ್ಲಿ ವಿಜಯ್ ದೇವರಕೊಂಡ ಮತ್ತು ಸಮಂತಾ ರುತ್ ಪ್ರಭು ಅವರ ಕೆಮಿಸ್ಟ್ರಿ ತುಂಬಾ ಮುದ್ದಾಗಿದೆ. ಹೊಸ ಆನ್-ಸ್ಕ್ರೀನ್ ಜೋಡಿ ಪ್ರೇಕ್ಷಕರನ್ನು ತಮ್ಮ ಕೆಮಿಸ್ಟ್ರಿಯೊಂದಿಗೆ ವಿಸ್ಮಯಗೊಳಿಸುತ್ತಿದೆ. 

ಇದನ್ನೂ ಓದಿ: ಆಲಿಯಾ - ರಣಬಿರ್‌ ವಿಚ್ಛೇದನ? ಕಂಗನಾ ನಂತರ, ನೀತು ಕಪೂರ್ ಪೋಸ್ಟ್ ಹೆಚ್ಚಿಸಿತು ಆತಂಕ!

ಮತ್ತೊಂದೆಡೆ, ಸಮಂತಾ ಹಾಡಿನ ಮತ್ತೊಂದು ಮುದ್ದಾದ ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯಲ್ಲಿ ಪ್ರೀತಿಯ ಬಗ್ಗೆ ಮಾತನಾಡಿದ್ದಾರೆ. ಕ್ಲಿಪ್‌ನಲ್ಲಿ, ವಿಜಯ್ ಕೆಲಸಕ್ಕಾಗಿ ಓಡುತ್ತಿರುವಾಗ ಸಮಂತಾ ಊಟದ ಡಬ್ಬಿ ತೆಗೆದುಕೊಂಡು ಹೋಗುವುದನ್ನು ಖಾತ್ರಿಪಡಿಸಿಕೊಳ್ಳುವುದನ್ನು ಕಾಣಬಹುದು.  

 

 

ನವವಿವಾಹಿತ ದಂಪತಿಗಳ ಪ್ರಣಯ, ಪ್ರೀತಿ ಮತ್ತು ಕೆಮಿಸ್ಟ್ರಿಯನ್ನು ಈ ವಿಡಿಯೋಗಳಲ್ಲಿ ನೋಡಬಹುದು. ತೆಲುಗು ಅವತರಣಿಕೆಯನ್ನು ಸಿದ್ ಶ್ರೀರಾಮ್ ಮತ್ತು ಚಿನ್ಮಯಿ ಶ್ರೀಪಾದರು ಹಾಡಿದ್ದಾರೆ. ತಮಿಳು, ಮಲಯಾಳಂ, ಕನ್ನಡ ಮತ್ತು ಹಿಂದಿಯಲ್ಲೂ ಈ ಹಾಡು ಬಿಡುಗಡೆಯಾಗಿದೆ. ಮಲಯಾಳಂನ ಹೃದಯಂ ಚಿತ್ರಕ್ಕೆ ಸಂಗೀತ ನೀಡಿರುವ ಸಂಗೀತ ನಿರ್ದೇಶಕ ಹಿಶಾಮ್ ಅಬ್ದುಲ್ ವಹಾಬ್ ಕುಶಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ.

ಇದನ್ನೂ ಓದಿ: "ಸೂರಪ್ಪ ಬಾಬು ಒಬ್ಬ ಶಿಖಂಡಿ" ಹೊಸ ಬಾಂಬ್‌ ಸಿಡಿಸಿದ ಚಕ್ರವರ್ತಿ ಚಂದ್ರಚೂಡ್‌

ಕುಶಿ ತೆಲುಗು ಚಿತ್ರರಂಗದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಕುಶಿ ಒಂದು ರೊಮ್ಯಾಂಟಿಕ್ ಡ್ರಾಮಾ ಎಂದು ಹೇಳಲಾಗಿದೆ. ಶಿವ ನಿರ್ವಾಣ ನಿರ್ದೇಶಿಸಿದ ಈ ಚಿತ್ರವು ಅಸಾಂಪ್ರದಾಯಿಕ ಪ್ರೇಮಕಥೆಯ ಸುತ್ತ ಸುತ್ತುತ್ತದೆ. ಜಯರಾಮ್, ಸಚಿನ್ ಖೇಡಕರ್, ಮುರಳಿ ಶರ್ಮಾ, ಲಕ್ಷ್ಮಿ, ಅಲಿ, ರೋಹಿಣಿ, ವೆನ್ನೆಲ ಕಿಶೋರ್, ರಾಹುಲ್ ರಾಮಕೃಷ್ಣ, ಶ್ರೀಕಾಂತ್ ಅಯ್ಯಂಗಾರ್, ಮತ್ತು ಶರಣ್ಯ ಮಹತ್ವದ ಪಾತ್ರಗಳಲ್ಲಿ ಚಿತ್ರದ ಭಾಗವಾಗಿದ್ದಾರೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More