Home> Entertainment
Advertisement

Video: ಆತ್ಮಹತ್ಯೆಗೂ ಮುನ್ನ ಫ್ರೆಂಡ್ಸ್ ಜೊತೆ ಕುಣಿದಾಡಿದ್ದ ಸುಶಾಂತ್ ಮಾಜಿ ಮ್ಯಾನೇಜರ್ ...!

ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯನ್ ಅವರ ಜೂನ್ 8, 2020 ರಂದು ನಡೆದ ನಿಗೂಢ ಸಾವಿನ ಬಗ್ಗೆ ಮುಂಬೈ ಪೊಲೀಸರು ಮತ್ತೊಮ್ಮೆ ತನಿಖೆ ನಡೆಸುತ್ತಿದ್ದಾರೆ, ಇವರಿಬ್ಬರ ನಡುವೆ ಸಂಬಂಧವಿದೆ ಎಂದು ಹಲವರು ಭಾವಿಸಿದ್ದಾರೆ. ಸುಶಾಂತ್, 34, 2020 ರ ಜೂನ್ 14 ರಂದು ಅವರ ಬಾಂದ್ರಾ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದರು.

Video: ಆತ್ಮಹತ್ಯೆಗೂ ಮುನ್ನ ಫ್ರೆಂಡ್ಸ್ ಜೊತೆ ಕುಣಿದಾಡಿದ್ದ ಸುಶಾಂತ್ ಮಾಜಿ ಮ್ಯಾನೇಜರ್ ...!

ನವದೆಹಲಿ: ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯನ್ ಅವರ ಜೂನ್ 8, 2020 ರಂದು ನಡೆದ ನಿಗೂಢ ಸಾವಿನ ಬಗ್ಗೆ ಮುಂಬೈ ಪೊಲೀಸರು ಮತ್ತೊಮ್ಮೆ ತನಿಖೆ ನಡೆಸುತ್ತಿದ್ದಾರೆ, ಇವರಿಬ್ಬರ ನಡುವೆ ಸಂಬಂಧವಿದೆ ಎಂದು ಹಲವರು ಭಾವಿಸಿದ್ದಾರೆ. ಸುಶಾಂತ್, 34, 2020 ರ ಜೂನ್ 14 ರಂದು ಅವರ ಬಾಂದ್ರಾ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದರು.

ಇದನ್ನು ಓದಿ: ಸಾಯುವುದಕ್ಕೂ ಮುನ್ನ ಸುಶಾಂತ್ ಮಾಜಿ ಮ್ಯಾನೇಜರ್ ದಿಶಾ ಸಾಲಿನ್ 45 ನಿಮಿಷಗಳ ಕಾಲ ಮಾತಾಡಿದ್ದೇನು?

28 ರ ಹರೆಯದ ದಿಶಾ, ಜೂನ್ 8 ರಂದು ಮುಂಬೈನ ಎತ್ತರದ ಅಪಾರ್ಟ್ಮೆಂಟ್ನಿಂದ ಹಾರಿದ್ದಾರೆಂದು ದೂರಲಾಗಿದೆ. ಆಕೆಯ ಸಾವಿಗೆ ಸ್ವಲ್ಪ ಮುಂಚಿತವಾಗಿ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ವಿಡಿಯೋವೊಂದು ಈಗ ಹೊರಬಂದಿದೆ, ಅಲ್ಲಿ ದಿಶಾ ತನ್ನ ಸ್ನೇಹಿತರೊಂದಿಗೆ  ಆನಂದಿಸುತ್ತಿರುವುದನ್ನು ಕಾಣಬಹುದು. ಪಾರ್ಟಿ ತನ್ನ ಸ್ನೇಹಿತನ ನಿವಾಸದಲ್ಲಿತ್ತು ಮತ್ತು ಅದಕ್ಕೆ ಹಾಜರಾದ ಕೂಡಲೇ ಅವಳು ಶವವಾಗಿ ಪತ್ತೆಯಾಗಿದ್ದಳು.

ವೀಡಿಯೊದಲ್ಲಿ ಇತರ ಕೆಲವು ಆಪ್ತರೊಂದಿಗೆ ದಿಶಾ ಅವರನ್ನು ಕಾಣಬಹುದು ಮತ್ತು ಸಂತೋಷವಾಗಿರುವುದನ್ನು ಕಾಣಬಹುದು. ಹೃತಿಕ್ ರೋಷನ್ ಅಭಿನಯದ 'ಮಿಷನ್ ಕಾಶ್ಮೀರ' ಟ್ರ್ಯಾಕ್ 'ರಿಂಡ್ ಪೋಶ್ಮಾಲ್' ಗೆ ಸ್ನೇಹಿತರ ಗುಂಪೊಂದು ನೃತ್ಯ ಮಾಡುತ್ತಿರುವುದು ಕಂಡುಬರುತ್ತದೆ.

ಆಗಸ್ಟ್ 6, 2020 ರಂದು, ಮುಂಬೈ ಪೊಲೀಸ್ ಡಿಸಿಪಿ ವಿಶಾಲ್ ಠಾಕೂರ್ ಅವರು ದಿಶಾ ಅವರ ವರದಿಗಾಗಿ ಕಾಯುತ್ತಿದ್ದಾರೆ ಎಂದು ಹೇಳಿದರು, ಅದು ಇನ್ನೂ ಬಂದಿಲ್ಲ.

ಜೂನ್ 14 ರಂದು ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಮತ್ತು ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯನ್ ಅವರ  ಸಾವು ಅಭಿಮಾನಿಗಳಲ್ಲಿ ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿದ್ದು, ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ನ್ಯಾಯಯುತ ತನಿಖೆಗಾಗಿ ಒತ್ತಾಯಿಸುತ್ತಿದ್ದಾರೆ.

ದಿಶಾ ಸಾವನ್ನಪ್ಪಿ ಸುಮಾರು ಎರಡು ತಿಂಗಳುಗಳು ಕಳೆದಿವೆ, ಮತ್ತು ಇತ್ತೀಚೆಗೆ ಮುಂಬೈ ಪೊಲೀಸರು ದಿಶಾ ಅವರ ಸಾವಿಗೆ ಸಂಬಂಧಿಸಿದ ಮಾಹಿತಿ ಅಥವಾ ಪುರಾವೆಗಳನ್ನು ತಿಳಿದಿದ್ದರೆ ಹಂಚಿಕೊಳ್ಳಬೇಕೆಂದು ಜನರನ್ನು ಒತ್ತಾಯಿಸಿದರು.

Read More