Home> Entertainment
Advertisement

VIDEO:'BAAGHI 3' ಚಿತ್ರದ ಜಬರ್ದಸ್ತ್ ಟ್ರೈಲರ್ ಬಿಡುಗಡೆ

ಟೈಗರ್ ಶ್ರಾಫ್ ಅವರ ಸೂಪರ್ ಹಿಟ್ ಫ್ರಂಚೈಸಿ ಆಗಿರುವ 'ಬಾಗಿ 3' ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಈ ಟ್ರೈಲರ್ ನಲ್ಲಿ ಮತ್ತೊಮ್ಮೆ ಟೈಗರ್ ಶ್ರಾಫ್ ತಮ್ಮ ಜಬರ್ದಸ್ತ್ ಆಕ್ಷನ್ ಮೂಲಕ ತನ್ನ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗುತ್ತಿದ್ದಾರೆ.

VIDEO:'BAAGHI 3' ಚಿತ್ರದ ಜಬರ್ದಸ್ತ್ ಟ್ರೈಲರ್ ಬಿಡುಗಡೆ

ನವದೆಹಲಿ:ಟೈಗರ್ ಶ್ರಾಫ್ ಅವರ ಸೂಪರ್ ಹಿಟ್ ಫ್ರಂಚೈಸಿ ಆಗಿರುವ 'ಬಾಗಿ 3' ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಈ ಟ್ರೈಲರ್ ನಲ್ಲಿ ಮತ್ತೊಮ್ಮೆ ಟೈಗರ್ ಶ್ರಾಫ್ ತಮ್ಮ ಜಬರ್ದಸ್ತ್ ಆಕ್ಷನ್ ಮೂಲಕ ತನ್ನ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗುತ್ತಿದ್ದಾರೆ. ಈ ಹಿಂದೆ ಟೈಗರ್ ಶ್ರಾಫ್ ಅಭಿಯಾನದ 'ವಾರ್' ಚಿತ್ರದ ಬಳಿಕ ಅವರ ಅಭಿಮಾನಿಗಳು 'ಬಾಗಿ 3' ಚಿತ್ರದ ಬಿಡುಗಡೆಗೆ ಕಾಯುತ್ತಿದ್ದಾರೆ. ಸದ್ಯ ಈ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಬಿಡುಗಡೆಯಾಗುತ್ತಲೇ ಭಾರಿ ವೈರಲ್ ಆಗಿದೆ.

ಈ ಚಿತ್ರದ ಜಬರ್ದಸ್ತ್ ಟ್ರೈಲರ್ ವೀಕ್ಷಿಸಿ ನೀವು ಕೂಡ ಈ ಚಿತ್ರ 'ಬಾಗಿ' ಮತ್ತು 'ಬಾಗಿ 2' ಚಿತ್ರಗಳನ್ನು ಸಹ ಮೀರಿಸುವಂತಿದೆ ಎನ್ನಬಹುದು. ಈ ಮೊದಲು ಬಿಡುಗಡೆಯಾಗಿದ್ದ ಈ ಎರಡು ಚಿತ್ರಗಳು ಬಾಕ್ಸ್ ಆಫೀಸ್ ಮೇಲೆ ಧೂಳೆಬ್ಬಿಸಿದ್ದವು. ಹೀಗಾಗಿ ಈ ಚಿತ್ರದ ಕುರಿತು ಅಭಿಮಾನಿಗಳ ಅಪೇಕ್ಷೆ ಮತ್ತು ಕುತೂಹಲ ಇನ್ನಷ್ಟು ಹೆಚ್ಚಾಗಿದೆ. ಸದ್ಯ ಬಿಡುಗಡೆಯಾಗಿರುವ ಟ್ರೈಲರ್ ನೋಡಿದರೆ ಅಭಿಮಾನಿಗಳ ತವಕ ಇನ್ನಷ್ಟು ಹೆಚ್ಚಾಗಲಿದೆ ಎಂದೇ ಹೇಳಬಹುದು.

ಈ ಚಿತ್ರದ ಆರಂಭದಲ್ಲಿ ಟೈಗರ್ ಶ್ರಾಫ್ ಹಾಗೂ ರಿತೇಶ್ ದೇಶಮುಖ್ ಅವರ ಪ್ರೀತಿ ತೋರಿಸಲಾಗಿದೆ. ಟ್ರೈಲರ್ ಕೊನೆಯಲ್ಲಿ ತನ್ನ ಸಹೋದರನಿಗಾಗಿ ಟೈಗರ್ ಶ್ರಾಫ್ ಒಂಟಿಯಾಗಿ ಉಗ್ರ ರಾಷ್ಟ್ರದ ಜೊತೆಗೆ ಹೋರಾಟ ನಡೆಸುತ್ತಿರುವುದು ಕಂಡುಬಂದಿದೆ. ಬಾಗಿ ಚಿತ್ರದ 'ರಾನಿ' 'ಬಾಗಿ 3' ಚಿತ್ರದಲ್ಲಿ ಮತ್ತಷ್ಟು ಖತರ್ನಾಕ್ ಮಿಶನ್ ಮೇಲೆ ಹೊರಟಿರುವುದು ನೀವು ವೀಕ್ಷಿಸಬಹುದಾಗಿದೆ.

ಬರುವ ಮಾರ್ಚ್ 6ನೇ ತಾರೀಖಿಗೆ ಈ ಚಿತ್ರ ಬಿಡುಗಡೆಯಾಗಲಿದೆ. ಅಂದರೆ ಇಂದಿನಿಂದ ಬರೋಬ್ಬರಿ 1 ತಿಂಗಳ ಬಳಿಕ ಈ ಚಿತ್ರ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಟೈಗರ್ ಶ್ರಾಫ್ ಜೊತೆಗೆ ಶೃದ್ಧಾ ಕಪೂರ್ ಹಾಗೂ ರಿತೇಶ್ ದೇಶಮುಖ್ ಪ್ರಮುಖ ಭೂಮಿಕೆಯಲ್ಲಿ ಇರಲಿದ್ದಾರೆ. ನಾಡಿಯಾಡ್ ವಾಲಾ ಗ್ರ್ಯಾಂಡ್ ಸನ್ಸ್ ಬ್ಯಾನರ್ ಅಡಿ ನಿರ್ಮಾಣಗೊಳ್ಳುತ್ತಿರುವ ಈ ಚಿತ್ರಕ್ಕೆ ಅಹ್ಮದ್ ಖಾನ್ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ.

Read More