Home> Entertainment
Advertisement

VIDEO: ಬಿಡುಗಡೆಯಾಗುತ್ತಲೇ ಜಬರ್ದಸ್ತ್ ಹವಾ ಸೃಷ್ಟಿಸಿದೆ ಈ ಹಾಡು

'ಬಾಗಿ-3' ಚಿತ್ರದ ಜಬರ್ದಸ್ತ್ ಹಾಡು 'ದಸ್ ಬಹಾನೆ 2.0' ಬಿಡುಗಡೆಯಾಗಿದೆ. ಈ ಹಾಡಿನಲ್ಲಿ ಖ್ಯಾತ ಬಾಲಿವುಡ್ ತಾರೆ ಶೃದ್ಧಾ ಕಪೂರ್ ತುಂಬಾ ಹಾಟ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

VIDEO: ಬಿಡುಗಡೆಯಾಗುತ್ತಲೇ ಜಬರ್ದಸ್ತ್ ಹವಾ ಸೃಷ್ಟಿಸಿದೆ ಈ ಹಾಡು

ನವದೆಹಲಿ: ಖ್ಯಾತ ಬಾಲಿವುಡ್ ನಟ ಟೈಗರ್ ಶ್ರಾಫ್ ಅವರ ಸುಪರ್ ಹಿಟ್ ಫ್ರೆಂಚೈಸಿ ಆಗಿರುವ 'ಬಾಗಿ 3' ಚಿತ್ರದ ಟ್ರೈಲರ್ ಬಿಡುಗಡೆಯಾದಾಗಿನಿಂದ ಅವರ ಅಭಿಮಾನಿಗಳು ಈ ಚಿತ್ರದ ಬಿಡುಗಡೆಗೆ ತುದಿಗಾಲಲ್ಲಿ ಕಾಯುತ್ತಿದ್ದಾರೆ. ಒಂದೆಡೆ ಈ ಚಿತ್ರದ ಟ್ರೈಲರ್ ನಲ್ಲಿ ಟೈಗರ್ ಶ್ರಾಫ್ ತಮ್ಮ ಜಬರ್ದಸ್ತ್ ಆಕ್ಷನ್ ದೃಶ್ಯಗಳಿಂದ ಜನರ ಮೆಚ್ಚುಗೆಗೆ ಪಾತ್ರರಾಗುತ್ತಿದ್ದರೆ, ಇನ್ನೊಂದೆಡೆ ಇದೀಗ ಚಿತ್ರದ ಜಬರ್ದಸ್ತ್ ಹಾಡು 'ದಸ್ ಬಹಾನೆ 2.0' ಬಿಡುಗಡೆಯಾಗಿದ್ದು, ಈ ಹಾಡಿನಲ್ಲಿ ಖ್ಯಾತ ಬಾಲಿವುಡ್ ನಟಿ ಶೃದ್ಧಾ ಕಪೂರ್ ತುಂಬಾ ಹಾಟ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಹಾಡಿನಲ್ಲಿ ಸಂಗೀತ ಹಾಗೂ ಗಾಯನದ ಜೊತೆಗೆ ಇನ್ನೊಂದು ವೈಶಿಷ್ಟ್ಯವಿದೆ. ಅದೇನೆಂದರೆ ಈ ಹಾಡಿನ ಚಿತ್ರೀಕರಣದ ಲೋಕೇಶನ್ ಹಾಗೂ ಸಿನೆಮ್ಯಾಟೋಗ್ರಾಫಿ. ಇದನ್ನು ವಿಕ್ಷೀಸಿರುವ ಹಲವರು ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ಹಾಡಿನ ಬಿಡುಗಡೆಗೂ ಮುನ್ನ ಟೈಗರ್ ಶ್ರಾಫ್ ಈ ಹಾಡಿನ ಪೋಸ್ಟರ್ ಬಿಡುಗಡೆ ಮಾಡಿದ್ದರು. ಪೋಸ್ಟರ್ ಬಿಡುಗಡೆ ಮಾಡಿದ್ದ ಅವರು, "ಬಾಗಿ ಭಾರಿ ಬದ್ಮಾಶ್ ಆಗಿದ್ದು ಹಾಗೂ ಅವನ ಪಾರ್ಟಿ ಜೈಮ್ ಹಾಡು ಕೂಡ! #ದಸ್ ಬಹಾನೆ 2.0 ಶೀಘ್ರವೇ ಬರಲಿದೆ, #ಬಾಗಿ3, #ಸಾಜಿದ್ ನಾಡಿಯಾಡ್ ವಾಲಾ" ಎಂದು ಅಡಿ ಬರಹ ಬರೆದುಕೊಂಡಿದ್ದರು.

ಈ ಹಾಡಿಗೆ ಕೆಕೆ ಹಾಗೂ ಶಾನ್ ತಮ್ಮ ಧ್ವನಿ ನೀಡಿದ್ದಾರೆ. ಈ ಹಾಡು ಖ್ಯಾತ ಬಾಲಿವುಡ್ ಸಾಂಗ್ ಆಗಿರುವ 'ದಸ್ ಬಹಾನೆ' ಹಾಡಿನ ಪುನರಾವೃತ್ತಿಯಾಗಿದೆ. ಇದಕ್ಕೂ ಮೊದಲು ಬಿಡುಗಡೆಯಾಗಿದ್ದ 'ದಸ್ ಬಹಾನೆ' ಹಾಡು 'ದಸ್' ಚಿತ್ರದಲ್ಲಿ ಮೂಡಿಬಂದಿತ್ತು. ಅಹ್ಮದ್ ಖಾನ್ ನಿರ್ದೇಶನದ 'ಬಾಗಿ 3' ಚಿತ್ರದಲ್ಲಿ ಟೈಗರ್ ಪುನಃ ತಮ್ಮ ರೆಬೆಲ್ ಗೆಟಪ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ವರ್ಷ ಮಾರ್ಚ್ 6 ರಂದು ಈ ಚಿತ್ರ ಬೆಳ್ಳಿ ಪರದೆಯ ಮೇಲೆ ಬಿಡುಗಡೆಯಾಗಲಿದೆ.

Read More