Home> Entertainment
Advertisement

Vasishta Simha - Haripriya: ಇಂದು ಗುಟ್ಟಾಗಿ ಎಂಗೇಜ್ಮೆಂಟ್‌ ಮಾಡಿಕೊಂಡ ವಸಿಷ್ಠ ಸಿಂಹ - ಹರಿಪ್ರಿಯಾ!?

Vasishta Simha - Haripriya Engagement : ಈಗ ಕೇಳಿಬರುತ್ತಿರುವ ಮತ್ತೊಂದು ಸುದ್ದಿಯೆಂದರೆ, ನಟಿ ಹರಿಪ್ರಿಯ ಜೊತೆ ವಸಿಷ್ಠ ಸಿಂಹ ನಿಶ್ಚಿತಾರ್ಥ ಮಾಡಿಕೊಂಡಿದ್ದಾರಂತೆ. ಇಬ್ಬರೂ ತಾರೆಯರು ಗುಟ್ಟಾಗಿ ಎಂಗೇಜ್ಮೆಂಟ್‌ ಮಾಡಿಕೊಂಡಿದ್ದಾರಂತೆ. ವಶಿಷ್ಠ ಮತ್ತು ಹರಿಪ್ರಿಯಾ ಕುಟುಂಬಸ್ಥರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. 

Vasishta Simha - Haripriya: ಇಂದು ಗುಟ್ಟಾಗಿ ಎಂಗೇಜ್ಮೆಂಟ್‌ ಮಾಡಿಕೊಂಡ ವಸಿಷ್ಠ ಸಿಂಹ - ಹರಿಪ್ರಿಯಾ!?

Vasishta Simha - Haripriya Engagement : ಈಗ ಮದುವೆ ಸೀಸನ್ ಶುರುವಾಗಿದೆ. ಇತ್ತೀಚೆಗೆ ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್ ನಲ್ಲಿ ಉದ್ಯಮಿ ಯಶಸ್ವಿ ಪಟ್ಲ ಜೊತೆ ನಟಿ ಅದಿತಿ ಪ್ರಭುದೇವ ಸಪ್ತಪದಿ ತುಳಿದರು. ಆ ಬಳಿಕ ಅಂಬರೀಷ್‌ - ಸುಮಲತಾ ಪುತ್ರ ಅಭಿಷೇಕ್‌ ಮದುವೆ ವದಂತಿಗಳು ಸಹ ಜೋರಾಗಿವೆ. ಶೀಘ್ರದಲ್ಲಿಯೇ ಮಾಡೆಲ್ ಅವಿವಾ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಎಲ್ಲದರೆ ನಡುವೆ ಮೂಗುತಿ ಚುಚ್ಚಿಸಿಕೊಂಡ ನಟಿ ಹರಿಪ್ರಿಯಾ ಕೂಡ ಹಸೆಮಣೆ ಏರಲು ಸಜ್ಜಾಗಿದ್ದಾರೆ ಎನ್ನಲಾಗ್ತಿದೆ. ನಟ ವಸಿಷ್ಠ ಸಿಂಹ ಜೊತೆ ನಟಿ ಹರಿಪ್ರಿಯಾ ಮದುವೆ ವದಂತಿ ಬಿರುಗಾಳಿಯಂತೆ ಹರಿದಾಡುತ್ತಿದೆ. ಈ ಗಾಸಿಪ್‌ಗೆ ಪುಷ್ಠಿ ನೀಡುವಂತೆ ಇಬ್ಬರೂ ಮೊನ್ನೆ ಮೊನ್ನೆ ಏರ್‌ಪೋರ್ಟ್‌ನಲ್ಲಿ ಕೈ ಕೈ ಹಿಡಿದುಕೊಂಡು ಹೋದ ಫೋಟೋ, ವಿಡಿಯೋಗಳು ಕೂಡ ವೈರಲ್‌ ಆಗುತ್ತಿವೆ. 

ಇದನ್ನೂ ಓದಿ : Niveditha Gowda : ನಿವೇದಿತಾ ಗೌಡ ಹಾಟ್‌ ವಿಡಿಯೋ ವೈರಲ್‌! ನೆಗೆಟಿವ್‌ ಕಾಮೆಂಟ್ಸ್‌ಗೆ ನಿವ್ವಿ ಖಡಕ್‌ ಆನ್ಸರ್‌

ಈಗ ಕೇಳಿಬರುತ್ತಿರುವ ಮತ್ತೊಂದು ಸುದ್ದಿಯೆಂದರೆ, ನಟಿ ಹರಿಪ್ರಿಯ ಜೊತೆ ವಸಿಷ್ಠ ಸಿಂಹ ನಿಶ್ಚಿತಾರ್ಥ ಮಾಡಿಕೊಂಡಿದ್ದಾರಂತೆ. ಇಬ್ಬರೂ ತಾರೆಯರು ಗುಟ್ಟಾಗಿ ಎಂಗೇಜ್ಮೆಂಟ್‌ ಮಾಡಿಕೊಂಡಿದ್ದಾರಂತೆ. ವಶಿಷ್ಠ ಮತ್ತು ಹರಿಪ್ರಿಯಾ ಕುಟುಂಬಸ್ಥರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಆಪ್ತರಿಗೂ ತಿಳಿಯದಂತೆ ಈ ಜೋಡಿ ಎಂಗೇಜ್ಮೆಂಟ್ ಮಾಡಿಕೊಂಡ ಬಗ್ಗೆ ಸುದ್ದಿಗಳು ಹರಿದಾಡುತ್ತಿವೆ. ವಶಿಷ್ಠ ನಿಶ್ಚಿತಾರ್ಥದ ಬಗ್ಗೆ ಆಪ್ತಮೂಲಗಳಿಂದ ಮಾಹಿತಿ ದೊರೆತಿದೆ. ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ನಿಶ್ವಿತಾರ್ಥ ಇಂದು ಬೆಳಗ್ಗೆ ಹರಿಪ್ರಿಯಾ ಮನೆಯಲ್ಲಿ ನೆರವೇರಿದೆ ಎಂದು ಹೇಳಲಾಗುತ್ತಿದೆ. 

ಇತ್ತೀಚೆಗೆ ಸ್ಯಾಂಡಲ್‌ವುಡ್‌ನ ಈ ಸ್ಟಾರ್​ ಜೋಡಿ ಮದುವೆ ಆಗುತ್ತಾರೆ ಎಂದು ಗಾಸಿಪ್‌ ಶುರುವಾಗಿತ್ತು. ಇತ್ತೀಚಿಗಷ್ಟೆ ಇಬ್ಬರ ನಡುವಿನ ಪ್ರೀತಿಯ ವಿಚಾರ ಕೂಡ ಬಹಿರಂಗವಾಗಿತ್ತು. ಕೆಲ ದಿನಗಳ ಹಿಂದೆ ಇವರಿಬ್ಬರೂ ದುಬೈ ಪ್ರವಾಸ ಮುಗಿಸಿಕೊಂಡು ವಾಪಸ್‌ ಆಗಿದ್ದರು. ಈ ಬೆನ್ನಲ್ಲೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನೇನೂ ಕೆಲವೇ ದಿನಗಳಲ್ಲಿ ಸಪ್ತಪದಿ ತುಳಿಯಲಿದ್ದು, ಅದಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರಂತೆ. ಇದಕ್ಕಾಗಿಯೇ ಹರಿಪ್ರಿಯಾ ಹಾಗೂ ವಸಿಷ್ಠ ದುಬೈಗೆ ತೆರಳಿದ್ದರು  ಎಂದು ಹೇಳಲಾಗುತ್ತಿದೆ. ಆದರೆ ಇಷ್ಟೆಲ್ಲಾ ರೂಮರ್‌ಗಳು ಹರಿದಾಡುತ್ತಿದ್ದರೂ ಇಬ್ಬರೂ ಮಾತ್ರ ಗುಟ್ಟುಬಿಟ್ಟುಕೊಟ್ಟಿಲ್ಲ.

ಇದನ್ನೂ ಓದಿ : Vedha New Teaser : ನಾಳೆ ರಾಯಚೂರಿನಲ್ಲಿ ವೇದನ ಅಬ್ಬರ! ಚಿತ್ರ ಪ್ರಚಾರಕ್ಕೆ ನ್ಯೂ ಐಡಿಯಾ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More