Home> Entertainment
Advertisement

ಮೋದಿಗೆ, ಮದುವೆಯ ಕರೆಯೋಲೆ ನೀಡಿದ ನಟಿ ವರಲಕ್ಮಿ ಶರತ್‌ ಕುಮಾರ್‌

Varalakshmi Sarath Kumar: ದಕ್ಷಿಣ ಭಾರತದ ಖ್ಯಾತ ನಟ ಶರತ್ ಕುಮಾರ್ ಹಾಗೂ ರಾಧಿಕಾ ದಂಪತಿಯ ಕಿರಿಯ ಪುತ್ರಿ, ನಟಿ ವರಲಕ್ಷ್ಮಿ ಶರತ್ ಕುಮಾರ್ ಸಪ್ತಪದಿ ತುಳಿಯಲು ಸಜ್ಜಾಗಿದ್ದಾರೆ. ಮುಂಬೈ ಮೂಲದ ವಕೀಲ ನಿಕೋಲಸ್ ಸಚ್‌ದೇವ್ ಅವರನ್ನು ನಟಿ ವರಲಕ್ಷ್ಮಿ ವರಿಸಲು ಸಕಲ ತಯಾರಿಗಳನ್ನು ನಡೆಸುತ್ತಿದ್ದಾರೆ. 
 

ಮೋದಿಗೆ, ಮದುವೆಯ ಕರೆಯೋಲೆ ನೀಡಿದ ನಟಿ ವರಲಕ್ಮಿ ಶರತ್‌ ಕುಮಾರ್‌

Varalakshmi Sarath Kumar: ದಕ್ಷಿಣ ಭಾರತದ ಖ್ಯಾತ ನಟ ಶರತ್ ಕುಮಾರ್ ಹಾಗೂ ರಾಧಿಕಾ ದಂಪತಿಯ ಕಿರಿಯ ಪುತ್ರಿ, ನಟಿ ವರಲಕ್ಷ್ಮಿ ಶರತ್ ಕುಮಾರ್ ಸಪ್ತಪದಿ ತುಳಿಯಲು ಸಜ್ಜಾಗಿದ್ದಾರೆ. ಮುಂಬೈ ಮೂಲದ ವಕೀಲ ನಿಕೋಲಸ್ ಸಚ್‌ದೇವ್ ಅವರನ್ನು ನಟಿ ವರಲಕ್ಷ್ಮಿ ವರಿಸಲು ಸಕಲ ತಯಾರಿಗಳನ್ನು ನಡೆಸುತ್ತಿದ್ದಾರೆ. 

ಇತ್ತೀಚೆಗಷ್ಟೆ ನಟಿ ವರಲಕ್ಷ್ಮಿ ಹಾಗೂ ನಿಕೋಲಸ್‌ ನಿಶ್ಚಿಥಾರ್ತ ಕಾರ್ಯಕ್ರಮ ಸುಸೂತ್ರವಾಗಿ ನೆರವೇರಿದ್ದು.ವಕೀಲ ನಿಕೋಲಸ್ ಸಚ್‌ದೇವ್ ಮತ್ತು ನಟಿ ವರಲಕ್ಷ್ಮಿ ಶರತ್ ಕುಮಾರ್ ಅವರು ತಮ್ಮ ಮದುವೆಗೆ ದಕ್ಷಿಣ ಭಾರತದ ಪ್ರಮುಖ ತಾರೆಯರು, ಸಂಗೀತ ನಿರ್ದೇಶಕರು, ನಿರ್ದೇಶಕರು, ಸೆಲೆಬ್ರಿಟಿಗಳು ಮತ್ತು ನಿರ್ಮಾಪಕರಿಗೆ ಆಹ್ವಾನ ನೀಡಿದ್ದರು. ಕೇವಲ ನಟ ನಟಿಯರಿಗಷ್ಟೆ ಅಲ್ಲದೆ ನಟಿ ಇದೀಗ ಪ್ರಧಾನಿ ನರೇಂದ್ರ ಮೋದಿಯವರನ್ನೂ ಕೂಡ ಖುದ್ದಾಗಿ ಬೇಟಿ ಮಾಡಿ ಮುದುವೆಯ ಆಮಂತ್ರಣ ನೀಡಿದ್ದಾರೆ.

ವರಲಕ್ಷ್ಮಿ ಶರತ್ ಕುಮಾರ್ ಅವರು ತಮ್ಮ ಮದುವೆಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಆಹ್ವಾನಿಸಿದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ತಮ್ಮನ್ನು ಭೇಟಿ ಮಾಡಲು ಅವಕಾಶ ಮಾಡಿಕೊಟ್ಟು, ಆಮಂತ್ರಣ ಸ್ವೀಕರಿಸಿದಕ್ಕಾಗಿ ಮೋದಿಯವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. "ನಮ್ಮ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿಜಿ ಅವರನ್ನು ಭೇಟಿ ಮಾಡಿ, ನಮ್ಮ ವಿಶಿಷ ದಿನಕ್ಕೆ ಆಹ್ವಾನವನ್ನು ನೀಡಲು ಅವಕಾಶ ಮಾಡಿ ಕೊಟ್ಟಿದ್ದಕ್ಕೆ ಧನ್ಯವಾದಗಳು, ನಿಮ್ಮ ಆತ್ಮೀಯ ಮತ್ತು ಸೌಹಾರ್ದಯುತ ಉಪಸ್ಥಿತಿಗೆ ಧನ್ಯವಾದಗಳು. ನನ್ನ ಹೆತ್ತವರಾದ ಶರತ್ ಕುಮಾರ್ ಮತ್ತು ರಾಧಿಕಾ ಶರತ್ ಕುಮಾರ್ ಅವರು ನಿಮ್ಮ ಔದಾರ್ಯತೆಯನ್ನು  ಶ್ಲಾಘಿಸಿದ್ದಾರೆ" ಎಂದು ಫೋಟೋ ಹಂಚಿಕೊಳ್ಳುವ ಮೂಲಕ ನಟಿ ವರಲಕ್ಷ್ಮಿ ತಮ್ಮ ಖಾತೆಯಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Kalki 2898 AD OTT: ಸಧ್ಯಕ್ಕೆ ಓಟಿಟಿಗೆ ಬರಲ್ಲ ಕಲ್ಕಿ ಚಿತ್ರ..!ಚಿತ್ರತಂಡ ಹೀಗೊಂದು ನಿರ್ಧಾರ ಮಾಡಿದ್ದು ಯಾಕೆ..?

ವರಲಕ್ಷ್ಮಿ ಶರತ್ ಕುಮಾರ್ ತಮ್ಮ ಮದುವೆಯ ಆಮಂತ್ರಣಗಳನ್ನು ವೈಯಕ್ತಿಕವಾಗಿ ನೀಡಲು ದೇಶಾದ್ಯಂತ ವಿವಿಧ ವಿಐಪಿಗಳನ್ನು ಖುದ್ದಾಗಿ ಭೇಟಿ ಮಾಡುತ್ತಿದ್ದಾರೆ. ಈ ಹಿಂದೆ ಅವರು ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ಭೇಟಿ ಮಾಡಿ ಮದುವೆಗೆ ಆಹ್ವಾನಿಸಿದ್ದರು.

ವರಲಕ್ಷ್ಮಿ ಶರತ್ ಕುಮಾರ್ ಮತ್ತು ವಕೀಲ ನಿಕೋಲಸ್ ಸಚ್‌ದೇವ್ ಅವರು ಇತ್ತೀಚೆಗೆ ತಮ್ಮ ಮದುವೆಯ ಶಾಪಿಂಗ್‌ಗಾಗಿ ದುಬೈಗೆ ಹಾರಿದ್ದರು, ಇನ್ನೂ ಈ ಜೋಡಿ ನಿಖರವಾದ ಮದುವೆಯ ದಿನಾಂಕವನ್ನು ಬಹಿರಂಗಪಡಿಸಿಲ್ಲ. 

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Read More