Home> Entertainment
Advertisement

Upendra: ‘ಸಿನಿಮಾದಲ್ಲಿ ಸಿಗರೇಟ್ ಸೇವನೆ, ಜೂಜಿನ ಜಾಹೀರಾತು ತಪ್ಪು, ಸರ್ಕಾರದ ಅನುಮತಿ ಸರಿಯೇ..?’

ನಟ ಉಪೇಂದ್ರ ಅವರು ಸಿನಿಮಾದಲ್ಲಿ ಸಿಗರೇಟ್ ಸೇದುವುದು, ಕುಡಿಯುವುದು, ಜೂಜಿಗೆ ಜಾಹೀರಾತು ನೀಡುವುದರ ಕುರಿತಾಗಿ ವ್ಯಂಗ್ಯವಾಗಿ ಪೋಸ್ಟ್ ಹಂಚಿಕೊಂಡಿದ್ದಾರೆ.

Upendra: ‘ಸಿನಿಮಾದಲ್ಲಿ ಸಿಗರೇಟ್ ಸೇವನೆ, ಜೂಜಿನ ಜಾಹೀರಾತು ತಪ್ಪು, ಸರ್ಕಾರದ ಅನುಮತಿ ಸರಿಯೇ..?’

ಬೆಂಗಳೂರು: ಬಾಲಿವುಡ್ ಖ್ಯಾತ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಮತ್ತು ಅಕ್ಷಯ್ ಕುಮಾರ್ ಪಾನ್ ಮಸಾಲ ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವುದು ನಿಮಗೆ ಗೊತ್ತೆ ಇದೆ. ಅದರಲ್ಲೂ ಅಕ್ಷಯ್ ಕುಮಾರ್ ಅವರು ಪಾನ್ ಮಸಾಲ ಜಾಹೀರಾತಿನ ಕಾರಣ ಸಖತ್ ಟ್ರೋಲ್ ಆಗಿದ್ದರು. ‘ಪದ್ಮಶ್ರೀ’ ಪುರಸ್ಕೃತ ಈ ನಟರಿಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಸಮಾಜದಲ್ಲಿ ಉನ್ನತ ಸ್ಥಾನದಲ್ಲಿರುವ ಈ ನಟರು ತಮ್ಮ ಅಭಿಮಾನಿಗಳಿಗೆ ಪಾನ್ ಮಸಾಲ ಜಾಹೀರಾತಿನ ಮೂಲಕ ಯಾವ ಸಂದೇಶ ನೀಡುತ್ತಿದ್ದಾರೆ..? ಅನ್ನೋದು ಅನೇಕರ ಪ್ರಶ್ನೆಯಾಗಿದೆ.

ಬಾಲಿವುಡ್ ಸ್ಟಾರ್ ಗಳಷ್ಟೇ ಅಲ್ಲ, ಕನ್ನಡ ಸೇರಿದಂತೆ ವಿವಿಧ ಭಾಷೆಗಳ ಸ್ಟಾರ್ ನಟರು ಪಾನ್ ಮಸಾಲ, ಬಿಯರ್, ಆನ್‍ಲೈನ್ ಜೂಜಿನ ಜಾಹೀರಾತುಗಳಲ್ಲಿ ಕಾಣಿಸಿಕೊಂಡು ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದೇ ವಿಚಾರವಾಗಿ ಇದೀಗ ರಿಯಲ್ ಸ್ಟಾರ್ ಉಪೇಂದ್ರ ಅವರು ಸೋಷಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟ್ ಹಂಚಿಕೊಂಡಿದ್ದು, ಸಖತ್ ಸದ್ದು ಮಾಡುತ್ತಿದೆ.

ಇದನ್ನೂ ಓದಿ: ಜನ್ಮಭೂಮಿ To ಪುಣ್ಯಭೂಮಿ: ಅಪ್ಪು ಅಮರಜ್ಯೋತಿ ಯಾತ್ರೆಗೆ ಚಾಲನೆ ನೀಡಿದ ಅಣ್ಣಾವ್ರ ತಂಗಿ

ಉಪೇಂದ್ರ ಪೋಸ್ಟ್ ನಲ್ಲಿ ಏನಿದೆ..?

ನಟ ಉಪೇಂದ್ರ ಅವರು ಸಿನಿಮಾದಲ್ಲಿ ಸಿಗರೇಟ್ ಸೇದುವುದು, ಕುಡಿಯುವುದು, ಜೂಜಿಗೆ ಜಾಹೀರಾತು ನೀಡುವುದರ ಕುರಿತಾಗಿ ವ್ಯಂಗ್ಯವಾಗಿ ಪೋಸ್ಟ್ ಹಂಚಿಕೊಂಡಿದ್ದಾರೆ.

‘ಒಂದು ಸಿನಿಮಾದಲ್ಲಿ ಸಿಗರೇಟ್ ಸೇದೋದು ತಪ್ಪು  ಕುಡಿಯೋದು ತಪ್ಪು, ಜೂಜಿಗೆ ಜಾಹಿರಾತು ನೀಡೋದು ತಪ್ಪು….. ಆದರೆ ಇವುಗಳಿಂದ ಬರೋ ತೆರಿಗೆ ಹಣಕ್ಕಾಗಿ ಇದಕ್ಕೆಲ್ಲಾ ಅನುಮತಿ ಕೊಟ್ಟಿರೋ ಸರ್ಕಾರ ಸರಿ, ಶ್… ಯಾರೂ ಮಾತನಾಡಬಾರದು ! ನಾಯಕ ಸಂಸ್ಕ್ರತಿಯ ರಾಜಕೀಯ ಗುಂಗಿನ ಸಮಾಜದಲ್ಲಿ……  ಯಾವತ್ತೂ ಅಪ್ಪ ಸರಿ… ಮಕ್ಕಳು ತಪ್ಪು!’ ಎಂದು ಅವರು ತಮ್ಮ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.

ಉಪೇಂದ್ರ ಅವರ ಪೋಸ್ಟ್ ಗೆ ನೂರಾರು ಜನರು ಪ್ರತಿಕ್ರಿಯಿಸಿದ್ದು ಪಾಸಿಟಿವ್, ನೆಗೆಟಿವ್ ಆಗಿ ಕಾಮೆಂಟ್ ಮಾಡಿದ್ದಾರೆ. ನೀವು ಹೇಳಿದ್ದು ನೂರಕ್ಕೆ ನೂರು ಸತ್ಯವೆಂದು ಕೆಲವರು ಕಾಮೆಂಟ್ ಮಾಡಿದ್ದರೆ, ಮದ್ಯ ಸೇವಿಸಬಾರದು ಎಂದು ಗಾಂಧೀಜಿ ಹೇಳಿದ್ದಾರೆ, ಯಾರಾದರೂ ಬ್ಯಾನ್ ಮಾಡಿದ್ದಾರಾ? ಅಂತಾ ಮತ್ತೆ ಕೆಲವರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: Rocking Star Yash: ‘ಕೆಜಿಎಫ್-2' ಸಕ್ಸಸ್‌ಗೆ ಥ್ಯಾಂಕ್ಸ್ ಹೇಳಿದ್ರೂ ಟ್ರೋಲ್ ಆದ ಯಶ್!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More