Home> Entertainment
Advertisement

Akshay Kumar-Twinkle Khanna: ಪಬ್ಲಿಕ್ ನಲ್ಲಿಯೇ ಸ್ಟಾರ್ ನಟನ ಪ್ಯಾಂಟ್ ಬಟನ್ ತೆಗೆದಿದ್ದಕ್ಕೆ ಪತ್ನಿ ಬಂಧನ!

Akshay Kumar-Twinkle Khanna Pant Controversy: ಇಷ್ಟಕ್ಕೂ ದಂಪತಿ ವಿರುದ್ಧ ನಗರದ ಸಾಮಾಜಿಕ ಕಾರ್ಯಕರ್ತರೊಬ್ಬರು ಸಾರ್ವಜನಿಕವಾಗಿ ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದರು. ಟ್ವಿಂಕಲ್ ಮತ್ತು ಅಕ್ಷಯ್ ಅವರನ್ನು ಪೊಲೀಸರು ಬಂಧಿಸಿದರು. ಆದರೆ ತಕ್ಷಣ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು.

Akshay Kumar-Twinkle Khanna: ಪಬ್ಲಿಕ್ ನಲ್ಲಿಯೇ ಸ್ಟಾರ್ ನಟನ ಪ್ಯಾಂಟ್ ಬಟನ್ ತೆಗೆದಿದ್ದಕ್ಕೆ ಪತ್ನಿ ಬಂಧನ!

Akshay Kumar-Twinkle Khanna Pant Controversy: 2009 ರಲ್ಲಿ ಅಕ್ಷಯ್ ಕುಮಾರ್ ಮತ್ತು ಅವರ ಪತ್ನಿ ಟ್ವಿಂಕಲ್ ಖನ್ನಾ ಫ್ಯಾಷನ್ ಶೋವೊಂದರಲ್ಲಿ ಅಶ್ಲೀಲವಾಗಿ ವರ್ತಿಸಿದ್ದಾರೆ  ಎಂಬ ಆರೋಪ ಹೊತ್ತು ದೊಡ್ಡ ವಿವಾದಕ್ಕೆ ಸಿಲುಕಿದ್ದರು.

ಅಕ್ಷಯ್ ಅವರು ಲ್ಯಾಕ್ಮೆ ಫ್ಯಾಶನ್ ಶೋನಲ್ಲಿ ರ‍್ಯಾಂಪ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಮುಂದಿನ ಸಾಲಿನಲ್ಲಿ ಕುಳಿತಿದ್ದ ತನ್ನ ಹೆಂಡತಿಯ ಮುಂದೆ ಇದ್ದಕ್ಕಿದ್ದಂತೆ ನಿಂತು ತನ್ನ ಜೀನ್ಸ್ ಬಟನ್ ಬಿಚ್ಚು ಎಂದಿದ್ದಾರೆ. ಟ್ವಿಂಕಲ್ ಮೊದಲು ಹಿಂಜರಿದರು. ಆದರೆ ನಂತರ ಪ್ಯಾಂಟ್ ಬಟನ್ ಬಿಚ್ಚಿದ್ದಾರೆ.

ಇದನ್ನೂ ಓದಿ: 'ಜಗವ ಹಡೆದ ಮಗಳಿವಳು,ಕರುಳ ಕರೆಗೆ ಮರಗುವಳು' ಹಾಡಿಗೆ ಜನರ ಕಣ್ಗಳು ಒದ್ದೆ..!

ಈ ವಿಡಿಯೋ ವೈರಲ್ ಆಗಿದ್ದು, ಭಾರೀ ಸಂಚಲನ ಮೂಡಿಸಿತ್ತು. ಈವೆಂಟ್‌ನಲ್ಲಿ ಪ್ರೇಕ್ಷಕರು ಅಕ್ಷಯ್ ಮತ್ತು ಅವರ ಪತ್ನಿಯ ಕೃತ್ಯವನ್ನು ಮೆಚ್ಚಿದರೆ, ಅನೇಕರು ಅದನ್ನು ಅಶ್ಲೀಲವೆಂದು ಆರೋಪಿಸಿದರು.

ಇಷ್ಟಕ್ಕೂ ದಂಪತಿ ವಿರುದ್ಧ ನಗರದ ಸಾಮಾಜಿಕ ಕಾರ್ಯಕರ್ತರೊಬ್ಬರು ಸಾರ್ವಜನಿಕವಾಗಿ ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದರು. ಟ್ವಿಂಕಲ್ ಮತ್ತು ಅಕ್ಷಯ್ ಅವರನ್ನು ಪೊಲೀಸರು ಬಂಧಿಸಿದರು. ಆದರೆ ತಕ್ಷಣ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು.

ಅಕ್ಷಯ್, ಅವರ ಪತ್ನಿ ಮತ್ತು ಈವೆಂಟ್‌ನ ಆಯೋಜಕರ ವಿರುದ್ಧ IPC ಸೆಕ್ಷನ್ 294 ರ ಅಡಿಯಲ್ಲಿ ಆರೋಪ ಹೊರಿಸಲಾಗಿತ್ತು.

ಇದನ್ನೂ ಓದಿ: DA Arrears Update: ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಶೀಘ್ರವೇ ಸಿಗಲಿದೆ ಈ ಸಂತಸದ ಸುದ್ದಿ

ಅಕ್ಷಯ್ ಮತ್ತು ಟ್ವಿಂಕಲ್ ಖನ್ನಾ ಬಾಲಿವುಡ್ ನ ಸ್ಟಾರ್ ಜೋಡಿ ಎಂದು ಕರೆಯಲಾಗುತ್ತದೆ. ಇನ್ನು ಅಕ್ಷಯ್ ಕುಮಾರ್ ನಟನೆಯ ಸೆಲ್ಫಿ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಈ ವರ್ಷ ತೆರೆಗೆ ಬರುತ್ತಿರುವ ಅಕ್ಷಯ್ ಕುಮಾರ್ ಮೊದಲ ಸಿನಿಮಾ ಇದಾಗಿದ್ದು, ಸೌತ್ ಸಿನಿಮಾದ ರಿಮೇಕ್ ಆಗಿದೆ ಎಂದು ಹೇಳಲಾಗುತ್ತಿದೆ. ಕಳೆದ ವರ್ಷ ಅಕ್ಷಯ್ ಕುಮಾರ್ ಅವರ ಯಾವ ಸಿನಿಮಾವು ಹಿಟ್ ಆಗಿರಲಿಲ್ಲ. ಈ ವರ್ಷವಾದರೂ ಅಕ್ಷಯ್ ಬಾಕ್ಸಾಫಿಸ್ ನಲ್ಲಿ ಸದ್ದು ಮಾಡ್ತಾರಾ ಎಂದು ಕಾದುನೋಡಬೇಕಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More