Home> Entertainment
Advertisement

‘ಬಿಳಿ ಹಲ್ಲಿ’ ಎಂದು ಕರೆಯುತ್ತಿದ್ದವರೇ ಇಂದು ಈ ನಟಿಯ ಸೌಂದರ್ಯಕ್ಕೆ ಮನಸೋತಿದ್ದಾರೆ..!

ಶಾಲಾ ದಿನಗಳಲ್ಲಿ ತನ್ನ ಬಿಳಿ ಮೈಬಣ್ಣದಿಂದಾಗಿ ಸನಾಯರನ್ನು ‘ಬಿಳಿ ಹಲ್ಲಿ’ ಎಂದು ಸಹಪಾಠಿಗಳು ಕರೆಯುತ್ತಿದ್ದರಂತೆ.

‘ಬಿಳಿ ಹಲ್ಲಿ’ ಎಂದು ಕರೆಯುತ್ತಿದ್ದವರೇ ಇಂದು ಈ ನಟಿಯ ಸೌಂದರ್ಯಕ್ಕೆ ಮನಸೋತಿದ್ದಾರೆ..!

ನವದೆಹಲಿ: ಕಿರುತೆರೆ ನಟಿ ಸನಾಯ ಇರಾನಿ(Sanaya Irani) ‘ಲೆಫ್ಟ್ ರೈಟ್ ಲೆಫ್ಟ್’, ‘ಮಿಲೇ ಜಬ್ ಹಮ್ ತುಮ್’ ಮತ್ತು ‘ಇಸ್ ಪ್ಯಾರ್ ಕೋ ಕ್ಯಾ ನಾಮ್ ಡೂನ್?’ ನಂತಹ ಸೂಪರ್ ಹಿಟ್ ಶೋಗಳಲ್ಲಿ ಕೆಲಸ ಮಾಡಿದ್ದಾರೆ. ಇಂದು ಅವರ ಅಭಿನಯ ಮತ್ತು ಸೂಪರ್ ಫಿಟ್ ಮೈಕಟ್ಟಿಗೆ ಕೋಟ್ಯಾಂತರ ಅಭಿಮಾನಿಗಳು ಫಿದಾ ಆಗಿದ್ದಾರೆ. ಆದರೆ ಸನಾಯ ಇರಾನಿ ಬಗೆಗಿನ ಜನರ ವರ್ತನೆ ಈ ಮೊದಲು ಹೀಗಿರಲಿಲ್ಲ. ಒಂದು ಕಾಲದಲ್ಲಿ ಜನರು ಆಕೆಯನ್ನು ‘ಬಿಳಿ ಹಲ್ಲಿ’ ಎಂದು ಕರೆಯುವ ಮೂಲಕ ಕೀಟಲೆ ಮಾಡುತ್ತಿದ್ದರು.

ನಟಿ ಸನಾಯ ತಮ್ಮ ಹಿಂದಿನ ಕಹಿ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಅವರು ಶೀಘ್ರದಲ್ಲೇ ‘Buy Invite Only Season 2’ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.    ತಮ್ಮ ಹೊಸ ಕಾರ್ಯಕ್ರಮದ ಬಗ್ಗೆ ಮಾತನಾಡುತ್ತಾ ಅವರು, ಈ ಹಿಂದೆ ಜನರು ತನ್ನ ಬಗ್ಗೆ ಯಾವ ರೀತಿಯ ಅಭಿಪ್ರಾಯ ಹೊಂದಿದ್ದರು ಎಂಬುದನ್ನು ತಿಳಿಸಿದ್ದಾರೆ. ಶಾಲಾ ದಿನಗಳಲ್ಲಿ ತನ್ನ ಬಿಳಿ ಮೈಬಣ್ಣದಿಂದಾಗಿ ಸನಾಯರನ್ನು ‘ಬಿಳಿ ಹಲ್ಲಿ’(White Lizard) ಎಂದು ಸಹಪಾಠಿಗಳು ಕರೆಯುತ್ತಿದ್ದರಂತೆ. ತನ್ನ ಹಳೆಯ ಶಾಲಾ ದಿನಗಳನ್ನು ನೆನಪಿಸಿಕೊಂಡ ಸನಯಾ, ‘ತಾನು ಊಟಿಯಲ್ಲಿ ಬೋರ್ಡಿಂಗ್ ಶಾಲೆಯಲ್ಲಿ ಓದುತ್ತಿದ್ದೆ. ಈಗಿರುವುದಕ್ಕಿಂತಲೂ 10 ಪಟ್ಟು ಹೆಚ್ಚು ಆಗ  ನಾನು ಸುಂದರವಾಗಿದ್ದೆ’ ಎಂದು ಹೇಳಿಕೊಂಡಿದ್ದಾರೆ.

 
 
 
 

 
 
 
 
 
 
 
 
 
 
 

A post shared by Sanaya Irani (@sanayairani)

ಇದನ್ನೂ ಓದಿ: Bigg Boss 15 ಮನೆಯಲ್ಲಿ ರಾಸಲೀಲೆ ! ಈ Viral Videoನಲ್ಲಿ ಏನ್ ನಡೀತಾ ಇದೆ ನೀವೇ ನೋಡಿ ಗೊತ್ತಾಗುತ್ತೆ

ಗುಜರಾತಿ ಫ್ಯಾಮಿಲಿ ಮಂಗ ಎಂದು ಕರೆದಿತ್ತು

ಆ ದಿನಗಳಲ್ಲಿ ಸನಾಯ ತರಗತಿಯಲ್ಲಿ ಎದ್ದು ಕಾಣುತ್ತಿದ್ದಳು. ಹೀಗಾಗಿಯೇ ಆಕೆಯನ್ನು ‘ಬಿಳಿ ಜಿರಳೆ’, ‘ಹಲ್ಲಿ’ ಅಥವಾ ‘ಬಿಳಿ ಹಲ್ಲಿ’ ಎಂದು ಕರೆಯಲಾಗುತ್ತಿತ್ತು. ಒಂದು ಸಲ ಗುಜರಾತಿ ಕುಟುಂಬ(Gujarat Family)ವು ಆಕೆಯನ್ನು ನೋಡಿ ಮಂಗ ಎಂದು ಕರೆದಿದ್ದರಂತೆ. ಏಕೆಂದರೆ ಸನಾಯ ಕೆನ್ನೆ ಮತ್ತು ಮೂಗು ಕೆಂಪಾಗಿತ್ತು. ಸಂದರ್ಶನವೊಂದರಲ್ಲಿ ಕೂಡ ಈ ಬಗ್ಗೆ ಅವರು ಮಾತನಾಡಿದ್ದರು. 

ವೆಬ್‌ ಸರಣಿಯತ್ತ ಗಮನಹರಿಸುತ್ತಿರುವ ಸನಾಯ

ತಮ್ಮ ವಿಶಿಷ್ಟ ಅಭಿನಯದ ಮೂಲಕ ಸಾಕಷ್ಟು ಜನಪ್ರಿಯತೆ ಗಿಟ್ಟಿಸಿಕೊಂಡಿರುವ ಸನಾಯರಿಗೆ ಇದೀಗ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಕಿರುತೆರೆ ಉದ್ಯಮ(TV Industry)ದಲ್ಲಿ ಕೆಲಸ ಮಾಡುತ್ತಿರುವಾಗ ಅನೇಕ ರೀತಿಯ ಬದಲಾವಣೆಗಳಾಗುತ್ತವೆ. ಹೀಗಾಗಿಯೇ ನನ್ನ ಆಯ್ಕೆಗಳ ಬಗ್ಗೆ ನಾನು ನಿರ್ದಿಷ್ಟವಾಗಿ ಯೋಚಿಸುತ್ತೇನೆ. ಒಬ್ಬ ನಟಿಯಾಗಿ ನಾನು ಪ್ರಯೋಗ ಮಾಡಲು ಬಯಸುತ್ತೇನೆ. ವೆಬ್ ಪ್ಲಾಟ್ ಫಾರ್ಮ್ ಉತ್ತಮವಾಗಿದ್ದು, ಕಿರುತೆರೆ ಅಥವಾ ವೆಬ್‌ನಲ್ಲಿ ಕೆಲಸವನ್ನು ನಾನು ಇಷ್ಟಪಡುತ್ತೇನೆ. ನೀವು ಏನನ್ನೂಇಷ್ಟಪಡುತ್ತಿರೋ ಅದನ್ನು ಆಯ್ಕೆ ಮಾಡಿಕೊಳ್ಳುವುದು ಮುಖ್ಯ ಅಂತಾ ಸನಾಯ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಹೆಚ್ಚುತ್ತಿದೆ Aryan Khan ಸಂಕಷ್ಟ , ಇಂದು ಕೂಡಾ ಸಿಕ್ಕಿಲ್ಲ ಜಾಮೀನು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Read More