Home> Entertainment
Advertisement

Aparna Nair : ನೇಣು ಬಿಗಿದ ಸ್ಥಿತಿಯಲ್ಲಿ ಖ್ಯಾತ ನಟಿಯ ಶವ ಪತ್ತೆ.. ಪ್ರಕರಣ ದಾಖಲಿಸಿಕೊಂಡ ಪೊಲೀಸರು

Actress Aparna Nair Death: 31 ವರ್ಷದ ಖ್ಯಾತ ನಟಿ ಅಪರ್ಣಾ ನಾಯರ್ ಹಠಾತ್ ನಿಧನರಾಗಿದ್ದಾರೆ. ಗುರುವಾರ ಸಂಜೆ ನಟಿಯ ಶವ ಅವರ ಮನೆಯಲ್ಲಿ ಅನುಮಾನಾಸ್ಪದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪೊಲೀಸರು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Aparna Nair : ನೇಣು ಬಿಗಿದ ಸ್ಥಿತಿಯಲ್ಲಿ ಖ್ಯಾತ ನಟಿಯ ಶವ ಪತ್ತೆ.. ಪ್ರಕರಣ ದಾಖಲಿಸಿಕೊಂಡ ಪೊಲೀಸರು

Aparna Nair Death: ಮನರಂಜನಾ ಉದ್ಯಮವನ್ನು ಬೆಚ್ಚಿ ಬೀಳಿಸುವ ಸುದ್ದಿ ಬೆಳಕಿಗೆ ಬಂದಿದೆ. ವರದಿಗಳ ಪ್ರಕಾರ, 31 ವರ್ಷದ ಖ್ಯಾತ ಮಲಯಾಳಂ ಕಿರುತೆರೆ ನಟಿ ಅಪರ್ಣಾ ನಾಯರ್ ಹಠಾತ್ ಸಾವನ್ನಪ್ಪಿದ್ದಾರೆ. ನಿನ್ನೆ ರಾತ್ರಿ ನಟಿ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದು, ಪೊಲೀಸರು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಪರ್ಣಾ ನಾಯರ್ ಸಾವಿಗೆ ಕಾರಣ ಇನ್ನೂ ಬಹಿರಂಗವಾಗಿಲ್ಲ.

ವರದಿಗಳ ಪ್ರಕಾರ, ಖ್ಯಾತ ಮಲಯಾಳಂ ಕಿರುತೆರೆ ನಟಿ ಅಪರ್ಣಾ ನಾಯರ್ ಗುರುವಾರ ಸಂಜೆ 7.30 ರ ಸುಮಾರಿಗೆ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಆ ಸಮಯದಲ್ಲಿ ನಟಿಯ ತಾಯಿ ಮತ್ತು ಸಹೋದರಿ ಕೂಡ ಮನೆಯಲ್ಲಿದ್ದರು. ಅಪರ್ಣಾ ಶವ ನೇಣು ಬಿಗದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕುಟುಂಬ ಸದಸ್ಯರು ನಟಿಯನ್ನು ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ವೈದ್ಯರು ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದರು. ಸದ್ಯ ಅಪರ್ಣಾ ನಾಯರ್ ಮೃತದೇಹವನ್ನು ಆಸ್ಪತ್ರೆಯಲ್ಲಿ ಪರೀಕ್ಷೆಗಾಗಿ ಇಡಲಾಗಿದೆ. ನಟಿಯ ಹಠಾತ್ ಸಾವಿಗೆ ಕಾರಣವೇನು ಎಂಬುದು ತಿಳಿದುಬಂದಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸಂಪೂರ್ಣ ಗಂಭೀರವಾಗಿ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Jawan Controversy: ವಿವಾದ ಸೃಷ್ಟಿಸಿದ ಶಾರುಖ್ ಖಾನ್ ಅವರ ಈ ಡೈಲಾಗ್..! 

ವರದಿಗಳ ಪ್ರಕಾರ, 31 ವರ್ಷದ ಅಪರ್ಣಾ ನಾಯರ್ ಅವರ ಅಗಲಿಕೆಯಿಂದ ಪತಿ ಸಂಜೀತ್ ಮತ್ತು ಇಬ್ಬರು ಪುತ್ರಿಯರಾದ ತ್ರಯಾ ಮತ್ತು ಕೃತಿಕಾ ದುಃಖತಪ್ತರಾಗಿದ್ದಾರೆ. ನಟಿಯ ಹಠಾತ್ ಅಗಲಿಕೆಯಿಂದ ಇಡೀ ಕುಟುಂಬ ಆಘಾತದಲ್ಲಿದೆ. ಅದೇ ಸಮಯದಲ್ಲಿ, ಚಿತ್ರರಂಗಕ್ಕೆ ಸಂಬಂಧಿಸಿದವರು ನಟಿಗೆ ಗೌರವ ಸಲ್ಲಿಸುತ್ತಿದ್ದಾರೆ. 

ಅಪರ್ಣಾ ನಾಯರ್ ಟಿವಿ ಶೋಗಳು ಮತ್ತು ಚಲನಚಿತ್ರಗಳ ಮೂಲಕ ಜನರಿಗೆ ಪರಿಚಿತರಾದವರು. ತಮ್ಮ ನಟನಾ ವೃತ್ತಿಜೀವನದಲ್ಲಿ ಅನೇಕ ಹಿಟ್ ಶೋಗಳು ಮತ್ತು ಚಲನಚಿತ್ರಗಳನ್ನು ನೀಡಿದ್ದಾರೆ, ಇದರಲ್ಲಿ ಮೇಘತೀರ್ಥಂ, ಕೊಡತಿ ಸಮಕ್ಷಮ್ ಬಾಲನ್ ವಕೀಲ್, ಕಲ್ಕಿ, ಚಂದನಮಜ ಮತ್ತು ಆತ್ಮಸಖಿ ಸೇರಿವೆ. ನಟಿ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದರು ಮತ್ತು ಆಗಾಗ್ಗೆ ತಮ್ಮ ಕೆಲಸ ಮತ್ತು ಕುಟುಂಬದೊಂದಿಗೆ ಸಂತೋಷದ ಕ್ಷಣಗಳನ್ನು ಹಂಚಿಕೊಳ್ಳುತ್ತಿದ್ದರು. 

ಇದನ್ನೂ ಓದಿ: ಕಿಚ್ಚನ ಹುಟ್ಟುಹಬ್ಬಕ್ಕೆ ಅರಸು ಕ್ರಿಯೇಷನ್ಸ್ ಉಡುಗೊರೆ..ಆಕಾಶದ ನಕ್ಷತ್ರಕ್ಕೆ ಸುದೀಪ್ ಹೆಸರು ನಾಮಕರಣ 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Read More