Home> Entertainment
Advertisement

Shocking News: ನಟಿಯನ್ನು ಗುಂಡಿಕ್ಕಿ ಕೊಂದ ಉಗ್ರರು..!

ಖ್ಯಾತ ಕಿರುತೆರೆ ನಟಿ ಅಮರೀನಾ ಭಟ್ ಕಾಶ್ಮೀರದಲ್ಲಿ ಉಗ್ರರ ಗುಂಡಿಗೆ ಬಲಿಯಾಗಿದ್ದಾರೆ ಎಂದು ವರದಿಯಾಗಿದೆ.

Shocking News: ನಟಿಯನ್ನು ಗುಂಡಿಕ್ಕಿ ಕೊಂದ ಉಗ್ರರು..!

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಬುದ್ಗಾಮ್ ಜಿಲ್ಲೆಯಲ್ಲಿ ಕಿರುತೆರೆ ನಟಿ ಅಮರೀನಾ ಭಟ್ ಅವರನ್ನು ಉಗ್ರರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಸುದ್ದಿಸಂಸ್ಥೆ ANI ವರದಿ ಮಾಡಿದೆ. 

ಇದನ್ನೂ ಓದಿ: Wedding Photos : 17 ವರ್ಷ ಲಿವ್ ಇನ್ ನಲ್ಲಿದ್ದು, 54ನೇ ವಯಸ್ಸಿನಲ್ಲಿ ಮದುವೆಯಾದ ಈ ಬಾಲಿವುಡ್ ಜೋಡಿ!

ಈ ಘಟನೆಯು ಮೇ 25ರಂದು ರಾತ್ರಿ 8 ಗಂಟೆಯ ಸುಮಾರಿಗೆ ನಡೆದಿದೆ. ಮೂವರು ಲಷ್ಕರ್-ಎ-ತೊಯ್ಬಾ ಭಯೋತ್ಪಾದಕರು ನಟಿ ಮತ್ತು ಅವರ 10 ವರ್ಷದ ಸೋದರಳಿಯ ಫರ್ಹಾನ್‌ಗೆ ಗುಂಡು ಹಾರಿಸಿದ್ದರು. ಅನೇಕ ಬುಲೆಟ್‍ಗಳು ತಗುಲಿದ್ದರಿಂದ ನಟಿ ಗಂಭೀರವಾಗಿ ಗಾಯಗೊಂಡಿದ್ದರು. ಬಳಿಕ ಅಮ್ರೀನಾ ಸಾವನ್ನಪ್ಪಿದರು ಎಂದು ತಿಳಿದುಬಂದಿದೆ. ಬಾಲಕನ ಸ್ಥಿತಿ ಸ್ಥಿರವಾಗಿದೆ ಎನ್ನಲಾಗಿದೆ.

ಇದನ್ನೂ ಓದಿ: "ವೀರ ಕಂಬಳ" ಚಿತ್ರಕ್ಕೆ ಕಥೆಯೇ ಹೀರೋ... ಸಿಹಿ ಸುದ್ದಿ ಕೊಟ್ಟ ರಾಜೇಂದ್ರ ಸಿಂಗ್ ಬಾಬು!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More