ನವದೆಹಲಿ: ಇಂಟರ್ನೆಟ್ ಸೆಂಸೇಶನ್ ಎಂದೇ ಖ್ಯಾತ ಕಣ್ಸನ್ನೆ ಬೆಡಗಿ ನಿಮಗೆ ನೆನಪಿದೆಯಾ? ಹೌದು, ಎರಡು ವರ್ಷಗಳ ಹಿಂದೆ ಅಂದರೆ 2018ರಲ್ಲಿ ಮೋಹಕವಾಗಿ ಕಣ್ಣು ಹೊಡೆಯುವ ಮೂಲಕ ಲಕ್ಷಾಂತರ ಯುವಕರನ್ನು ಹುಚ್ಚೆಬ್ಬಿಸಿದ ಅದೇ ಪ್ರಿಯಾ ಪ್ರಕಾಶ್ ವಾರಿಯರ್. ಆದರೆ, ಆ ವಿಡಿಯೋ ಬಳಿಕ ಪ್ರಿಯಾ ಮಾಯವಾಗಿದ್ದರು ಹಾಗೂ ನೋಡುತ್ತಿದ್ದಂತೆ ಅವರ ಚರ್ಚೆಯೂ ಕೂಡ ಕಡಿಮೆಯಾಗುತ್ತಾ ಹೋಯ್ತು. ಆದರೆ, ಇದೀಗ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಭೇಟಿ ನೀಡುತ್ತಲೇ ಮತ್ತೊಮ್ಮೆ ಪ್ರಿಯಾ ಪ್ರಕಾಶ್ ವಿಡಿಯೋವೊಂದು ಇದೀಗ ಭಾರಿ ವೈರಲ್ ಆಗಲಾರಂಭಿಸಿದೆ. ಈ ಬಾರಿ ಪ್ರಿಯಾಳ ಮೋಹಕ ಕಣ್ಸನ್ನೆಗೆ ವಿಶ್ವದ ದೊಡ್ಡಣ್ಣ ನಾಚಿ ನೀರಾಗಿರುವ ವಿಡಿಯೋ ವೈರಲ್ ಆಗುತ್ತಿದೆ.
ಟ್ರಂಪ್ ಭಾರತ ಭೇಟಿಯ ವೇಳೆ ಈ ವಿಡಿಯೋ ವೈರಲ್ ಆಗುತ್ತಿದ್ದು, ಈ ವಿಡಿಯೋದಲ್ಲಿ ಪ್ರಿಯಾ ಹಾಗೂ ಟ್ರಂಪ್ ಕಂಡುಬಂದಿದ್ದಾರೆ. ವಿಡಿಯೋದಲ್ಲಿ ಪ್ರಿಯಾ ತಮ್ಮ ಮೋಹಕ ಕಣ್ಸನ್ನೆಯನ್ನು ಬೀರುತ್ತಿರುವುದು ತೋರಿಸಲಾಗಿದ್ದು, ಟ್ರಂಪ್ ಅವರನ್ನು ನೋಡಿ ನಾಚಿಕೊಳ್ಳುತ್ತಿದ್ದಾರೆ. ಸಂಪೂರ್ಣ ವಿಡಿಯೋದಲ್ಲಿ ಟ್ರಂಪ್ ಹಾಗೂ ಪ್ರಿಯಾ ಅವರ ಮಧ್ಯೆ ಕಣ್ಸನ್ನೆಯಲ್ಲಿಯೇ ಮಾತುಕತೆ ನಡೆಯುತ್ತಿರುವುದು ತೋರಿಸಲಾಗಿದೆ. ಆದರೆ, ಸಂಪೂರ್ಣ ವಿಡಿಯೋ ವೀಕ್ಷಿಸಿದ ಬಳಿಕ ಇದೊಂದು ಎಡಿಟ್ ಮಾಡಲಾಗಿರುವ ವಿಡಿಯೋ ಆಗಿರುವುದು ನಿಮ್ಮ ಗಮನಕ್ಕೆ ಬರಲಿದೆ. ಇಂಟರ್ನೆಟ್ ಮೇಲೆ ಹಾಸ್ಯಮಯ ಮೀಮ್ ಗಳು ವೈರಲ್ ಮಾಡುವಂತೆ ಈ ವಿಡಿಯೋ ಅನ್ನು ಕೂಡ ಎಡಿಟ್ ಮಾಡಿ ವೈರಲ್ ಮಾಡಲಾಗಿದೆ.
Award goes to TV Tawaa .. CC @realDonaldTrump #TrumpInIndia pic.twitter.com/ECcTlmtxHq
— Farrago Abdullah (@abdullah_0mar) February 24, 2020
ಎರಡು ದಿನಗಳ ಹಿಂದೆಯಷ್ಟೇ ತಮ್ಮ ಎರಡು ದಿನಗಳ ಪ್ರವಾಸಕ್ಕಾಗಿ ಟ್ರಂಪ್ ಭಾರತಕ್ಕೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಅವರು ಅಹ್ಮದಾಬಾದ್ ನ ಮೋಟೆರಾ ಕ್ರೀಡಾಂಗಣದಲ್ಲಿ ನೆರದಿದ್ದ ಭಾರಿ ಜನಸಮೂಹವನ್ನು ಉದ್ದೇಶಿಸಿ ಭಾಷಣ ಮಾಡಿದ್ದರು. ಬಳಿಕ ಆಗ್ರಾಗೆ ಭೇಟಿ ನೀಡಿದ್ದ ಅವರು ತಾಜ್ ಮಹಲ್ ಸೌಂದರ್ಯವನ್ನು ಕಣ್ತುಂಬಿಕೊಂಡಿದ್ದರು. ತಮ್ಮ ಪ್ರವಾಸದ ಕೊನೆಯ ದಿನ ದೆಹಲಿಯಲ್ಲಿ ತಂಗಿದ್ದ ಟ್ರಂಪ್ ರಾಜ್ ಘಾಟ್ ಗೆ ಭೇಟಿ ನೀಡಿ, ನಂತರ ಅಮೆರಿಕಾಗೆ ರವಾನೆಯಾಗಿದ್ದಾರೆ.
ಪ್ರಿಯಾ ಪ್ರಕಾಶ್ ವಾರಿಯರ್ ಕುರಿತು ಹೇಳುವುದಾದರೆ, 2018ರಲ್ಲಿ ಪ್ರಿಯಾಳ ಒಂದು ವಿಡಿಯೋ ಭಾರಿ ವೈರಲ್ ಆಗಿತ್ತು. ಈ ವಿಡಿಯೋದಲ್ಲಿ ಪ್ರಿಯಾ ಸ್ಕೂಲ್ ಯುನಿಫಾರ್ಮ್ ನಲ್ಲಿ ಕಾಣಿಸಿಕೊಂಡು, ಕಣ್ಸನ್ನೆಯ ಮೂಲಕ ಯುವಕನ ಜೊತೆ ಸಂವಾದ ನಡೆಸಿದ್ದಳು. ಪ್ರಿಯಾ ಅಭಿನಯಿಸಿದ್ದ ಚಿತ್ರವೊಂದರ ದೃಶ್ಯ ಇದಾಗಿತ್ತು. ಪ್ರಿಯಾ ಕಣ್ಣು ಹೊಡೆಯುವ ಈ ವಿಡಿಯೋ ಎಷ್ಟೊಂದು ವೈರಲ್ ಆಗಿತ್ತೆಂದರೆ ಒಂದೇ ರಾತ್ರಿಯಲ್ಲಿ ಪ್ರಿಯಾ ಇಂಟರ್ನೆಟ್ ಸೆಂಸೇಶನ್ ಆಗಿ ಹೊರಹೊಮ್ಮಿದ್ದಳು. ಒಂದೇ ರಾತ್ರಿಯಲ್ಲಿ ಒಂದು ಮಿಲಿಯನ್ ಗೂ ಅಧಿಕ ಅಭಿಮಾನಿಗಳು ಅವಳನ್ನು ಹಿಂಬಾಲಿಸಲು ಆರಂಭಿಸಿದ್ದರು.