Home> Entertainment
Advertisement

Trisha Krishnan: 'ಥಗ್ ಲೈಫ್' ನಾಯಕಿ ತ್ರಿಶಾ ಎಷ್ಟು ಕೋಟಿ ಆಸ್ತಿ ಒಡತಿ ಗೊತ್ತಾ?

Trisha Krishnan Property: ಅಮೀರ್ ಅಭಿನಯದ ಮೇಲಣಂ ಪಸಿತೆ ಚಿತ್ರದ ಮೂಲಕ ನಾಯಕಿಯಾಗಿ ಪಾದಾರ್ಪಣೆ ಮಾಡಿದ ತ್ರಿಶಾ ನಾಯಕಿಯಾಗಿ ಯಶಸ್ವಿಯಾಗಿ 20 ವರ್ಷ ಪೂರೈಸಿದ್ದಾರೆ. ಈಕೆಗೆ ಈಗ 40 ವರ್ಷವಾದರೂ ಇನ್ನೂ 20 ವರ್ಷದವರಂತೆ ಕಾಣುತ್ತಾರೆ. ಹಾಗಾಗಿ ಅವರಿಗೆ ಕಾಲಿವುಡ್‌ನಲ್ಲಿ ಬೇಡಿಕೆ ಹೆಚ್ಚಿದೆ. ಸದ್ಯ ಇವರ ಆಸ್ತಿ ಕುರಿತಾದ ಮಾಹಿಯೊಂದು ಹೊರಬಿದ್ದಿದೆ.. 

Trisha Krishnan: 'ಥಗ್ ಲೈಫ್' ನಾಯಕಿ ತ್ರಿಶಾ ಎಷ್ಟು ಕೋಟಿ ಆಸ್ತಿ ಒಡತಿ ಗೊತ್ತಾ?

Trisha Krishnan: ನಟಿಯರು ಸಿನಿಮಾದಲ್ಲಿ ಸ್ವಲ್ಪ ಕಾಲ ಮಾತ್ರ ನಾಯಕಿಯರಾಗಿ ನಟಿಸಬಹುದು, ವಯಸ್ಸಾದಂತೆ ನಾಯಕಿಯರಿಗೆ ಅವಕಾಶಗಳು ಕ್ರಮೇಣ ಕಡಿಮೆಯಾಗುತ್ತವೆ, ಇದರಿಂದಾಗಿ ಅನೇಕ ನಾಯಕ ನಟಿಯರು ನಾಯಕಿ ಪಾತ್ರಗಳಿಗೆ ಗುಡ್ ಬೈ ಹೇಳಿ ಅಕ್ಕ, ತಂಗಿ, ತಾಯಿಯಂತಹ ಪಾತ್ರಗಳನ್ನು ಮಾಡಲು ಪ್ರಾರಂಭಿಸುತ್ತಾರೆ. . ಆದರೆ ನಟಿಯೊಬ್ಬಳು 20 ವರ್ಷಗಳ ಕಾಲ ನಾಯಕಿಯಾಗಿರುವುದು ಸಾಮಾನ್ಯ ಸಂಗತಿಯಲ್ಲ. ಅಂತಹ ದೊಡ್ಡ ಸಾಧನೆ ಮಾಡಿದವರು ತ್ರಿಷಾ. 

ಇತ್ತೀಚೆಗಷ್ಟೇ ವಿಜಯ್ ಜೊತೆ ಲಿಯೋ ಚಿತ್ರದಲ್ಲಿ ನಟಿಸಿದ್ದ ತ್ರಿಶಾ, ಸದ್ಯ ನಟ ಅಜಿತ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದಲ್ಲದೆ, ಮಣಿರತ್ನಂ ಅವರ ಥಗ್ ಲೈಫ್ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.. 40ರಲ್ಲೂ ಟೀನ್‌ ಏಜ್‌ ನಾಯಕಿಯಾಗಿ ಹರಿದಾಡುತ್ತಿರುವ ತ್ರಿಷಾ ಇನ್ನೂ ಮದುವೆಯಾಗಿಲ್ಲ.

ಇದನ್ನೂ ಒದಿ-‘ಅನಾವರಣ’ ಸಿನಿಮಾದ ಮತ್ತೊಂದು ಸಾಂಗ್‌ ರಿಲೀಸ್! ಅರ್ಜುನ್ & ಸಾರಿಕಾ ಜೋಡಿಯ ಗಾನಬಜಾನ

ಇತ್ತೀಚೆಗೆ ಇವರ ಆಸ್ತಿ ಕುರಿತು ಮಾಹಿತಿಯೊಂದು ಹೊರಬಿದ್ದಿದೆ.. ನಟಿ ತ್ರಿಷಾ ಅವರ ಆಸ್ತಿ 85 ಕೋಟಿ ರೂ. ಕಳೆದ ವರ್ಷದವರೆಗೂ ಚಿತ್ರವೊಂದಕ್ಕೆ 3 ಕೋಟಿ ಗಳಿಸುತ್ತಿದ್ದ ತ್ರಿಷಾ, ಪೊನ್ನಿಯ ಸೆಲ್ವನ್ ಚಿತ್ರದ ಯಶಸ್ಸಿನ ನಂತರ ಸಂಭಾವನೆಯನ್ನು 5 ಕೋಟಿಗೆ ಏರಿಸಿಕೊಂಡಿದ್ದಾರೆ. ಇದೀಗ ಅವರ ಲಿಯೋ ಚಿತ್ರವೂ ಯಶಸ್ವಿಯಾಗಿರುವುದರಿಂದ ಥಗ್ ಲೈಫ್ ಚಿತ್ರಕ್ಕಾಗಿ ತಮ್ಮ ಸಂಭಾವನೆಯನ್ನು 10 ಕೋಟಿ ರೂ.ಗೆ ಹೆಚ್ಚಿಸಿಕೊಂಡಿದ್ದಾರೆ ಎನ್ನಲಾಗಿದೆ.

ಇದನ್ನೂ ಒದಿ-Drone Prthap: "ಮೋಸ ಆಗ್ತಿದೆ".. ಡ್ರೋನ್‌ ಪ್ರತಾಪ್‌ ಇನ್‌ಸ್ಟಾಗ್ರಾಮ್‌ ಪೋಸ್ಟ್‌ ವೈರಲ್‌..!

ಅದೇ ರೀತಿ ನಟಿ ತ್ರಿಷಾ ಜಾಹೀರಾತುಗಳಲ್ಲಿ ನಟಿಸುವ ಮೂಲಕ ವರ್ಷಕ್ಕೆ 10 ಕೋಟಿ ರೂ. ಗಳಿಸುತ್ತಿದ್ದಾರೆ.. ಇವರಿಗೆ ಚೆನ್ನೈನಲ್ಲಿ 7 ಕೋಟಿ ರೂ. ಐಷಾರಾಮಿ ಮನೆ ಇದೆ. ಇದಲ್ಲದೇ ತ್ರಿಶಾ ಹೈದರಾಬಾದ್‌ನಲ್ಲಿ 6 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ಬಂಗಲೆಯನ್ನು ಹೊಂದಿದ್ದಾರೆ. 

ಕಾರುಗಳ ಬಗ್ಗೆಯೂ ಒಲವು ಹೊಂದಿರುವ ನಟಿ ತ್ರಿಷಾ ಬಳಿ 80 ಲಕ್ಷ ರೂ.ಗಳ ಮರ್ಸಿಡಿಸ್ ಬೆಂಝ್ ಎಸ್ ಕ್ಲಾಸ್, ರೂ.75 ಲಕ್ಷ ಮೌಲ್ಯದ ಬಿಎಂಡಬ್ಲ್ಯು 5 ಸಿರೀಸ್ ಕಾರು, ರೂ.60 ಲಕ್ಷ ಮೌಲ್ಯದ ರೇಂಜ್ ರೋವರ್ ಇವೊಕ್ ಮತ್ತು ರೂ.5 ಕೋಟಿ ಮೌಲ್ಯದ ಬಿಎಂಡಬ್ಲ್ಯು ರೀಗಲ್ ಕಾರುಗಳಿವೆ. ಇದಲ್ಲದೇ ತ್ರಿಶಾ ರಿಯಲ್ ಎಸ್ಟೇಟ್ ನಲ್ಲಿ ಹಲವು ಕೋಟಿ ಹೂಡಿಕೆ ಮಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Read More