Home> Entertainment
Advertisement

ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದೆ ಶಾರುಖ್ ಅವರ ಈ ವಿಡಿಯೋ

ಬಾಲಿವುಡ್ ನಲ್ಲಿ 'ಕಿಂಗ್ ಖಾನ್' ಎಂದೇ ಖ್ಯಾತ ಸೂಪರ್ಸ್ಟಾರ್ ನಟ ಶಾರುಖ್ ಖಾನ್ ಹಾಗೂ ಅವರ ಪತ್ನಿ ಗೌರಿ ಖಾನ್ ಕುರಿತಾದ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದೆ  ಶಾರುಖ್ ಅವರ ಈ ವಿಡಿಯೋ

ನವದೆಹಲಿ: ಬಾಲಿವುಡ್ ನಲ್ಲಿ 'ಕಿಂಗ್ ಖಾನ್' ಎಂದೇ ಖ್ಯಾತರಾಗಿರುವ ಸೂಪರ್ಸ್ಟಾರ್ ನಟ ಶಾರುಖ್ ಖಾನ್ ಹಾಗೂ ಅವರ ಪತ್ನಿ ಗುರಿ ಖಾನ್ ಯಾವುದೇ ಕಾರ್ಯಕ್ರಮದಲ್ಲಿ ಭಾಗಿಯಾಗಲು ಹೋದರೆ ಅಲ್ಲಿರುವ ಎಲ್ಲ ಕ್ಯಾಮೆರಾಗಳ ಕಣ್ಣು ಈ ಜೋಡಿಯ ಮೇಲೆ ಇರುತ್ತದೆ. ಸದ್ಯ ಶಾರುಖ್ ಖಾನ್ ಹಾಗೂ ಅವರ ಪತ್ನಿ ಗೌರಿ ಖಾನ್ ಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳ ಮೇಲೆ ಸಕತ್ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಶಾರುಖ್ ತಮ್ಮ ವರ್ತನೆಯಿಂದ ಜನರ ಮನಗೆದ್ದಿದ್ದಾರೆ.

ಈ ವಿಡಿಯೋದಲ್ಲಿ ಬಾಲಿವುಡ್ ನ ಕಿಂಗ್ ಖಾನ್ ತಮ್ಮ ಪತ್ನಿಯ ಗೌನ್ ಸರಿಪಡಿಸುವುದರಲ್ಲಿ ತೊಡಗಿದ್ದಾರೆ. ಇಲ್ಲಿ ಗೌರಿ ಖಾನ್ ಮುಂದೆ ಸಾಗುತ್ತಿದ್ದರೆ, ಶಾರುಖ್ ಅವರನ್ನು ಹಿಂಬಾಲಿಸುತ್ತಿದ್ದಾರೆ. ಅಷ್ಟೇ ಅಲ್ಲ ಗೌರಿ ಹಿಂದೆ ಸಾಗುತ್ತಿರುವ ಶಾರುಖ್ ತಮ್ಮ ಪತ್ನಿಯ ಗೌನ್ ಹಿಡಿದು ನಡೆಯುತ್ತಿದ್ದಾರೆ. ಇದನ್ನು ನೋಡಿರುವ ನೆಟ್ಟಿಗರು ಶಾರುಖ್ ಖಾನ್ ಅವರ ವರ್ತನೆಗೆ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 
 
 
 

 
 
 
 
 
 
 
 
 

every girls want husband like shahrukh khan respected and gentlemen😍

A post shared by Rafe (@iamrafe555) on

ಈ ವಿಡಿಯೋ ಮಧ್ಯದಲ್ಲಿಯೇ ಗೌರಿ ತಮ್ಮ ಪತಿ ಶಾರುಖ್ ಗೆ ತಮ್ಮ ಗೌನನ್ನು ಬಿಡುವಂತೆ ಮನವಿ ಮಾಡುತ್ತಿರುವುದನ್ನೂ ಸಹ ನೀವು ಗಮನಿಸಬಹುದು. ಆ ನಂತರವೂ ಕೂಡ ಶಾರುಖ್ ಓರ್ವ ಆದೇಶ ಪಾಲಕ ಪತಿಯಂತೆ ತಮ್ಮ ಪತ್ನಿಯ ಗೌನ್ ಹಿಡಿದು ಸಾಗಿದ್ದಾರೆ.

ಈ ವಿಡಿಯೋ ಇತ್ತೀಚಿಗೆ ನಡೆದ 'ವೋಗ್ ದ ಪಾವರ್ ಲಿಸ್ಟ್ 2019' ಕಾರ್ಯಕ್ರಮದಿಂದ ಹೊರಹೊಮ್ಮಿದೆ. ಇದರಲ್ಲಿ ಶಾರುಖ್ ಹಾಗೂ ಗೌರಿ ಪರಸ್ಪರ ಮ್ಯಾಚಿಂಗ್ ಹೊಂದಿದ ಕಪ್ಪುಬಣ್ಣದ ವಸ್ತ್ರಧರಿಸಿ ಭಾಗವಹಿಸಿದ್ದರು. ಈ ಇಬ್ಬರ ಕೆಮೆಸ್ಟ್ರಿ ನೋಡಿರುವ ಸಾಮಾಜಿಕ ಜಾಲತಾಣಿಗರು ಮೆಚ್ಚುಗೆಯ ಸುರಿಮಳೆಗೈದಿದ್ದಾರೆ.

Read More