Home> Entertainment
Advertisement

ನಟಿ ವರಲಕ್ಷ್ಮಿ ಟೊಮೆಟೊ ಬ್ಯಾಗ್‌ ಕದ್ದ ಕಳ್ಳ..! ವಿಡಿಯೋ ವೈರಲ್‌

Tomato price viral video : ಟೊಮೆಟೊ ಬೆಲೆ ಗಗನಕ್ಕೇರುತ್ತಿದೆ. ಗ್ರಾಹಕರಿಗೆ ಈ ಕೆಂಪು ಸುಂದರಿ ಕೈಗೆಟುಕದ ನಕ್ಷತ್ರವಾಗಿದ್ದಾಳೆ. ಸಧ್ಯ ನಟಿ ವರಲಕ್ಷ್ಮಿ ಶರತ್ ಕುಮಾರ್ ಅವರು ಖದೀಸಿದ್ದ ಟೊಮೆಟೋವನ್ನು ಕಳ್ಳನೊಬ್ಬ ಕದ್ದು ಪರಾರಿಯಾಗಿರುವ ಘಟನೆ ನಡೆದಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ವಿಡಿಯೋ ನೋಡಿ ಸಂಪೂರ್ಣ ಘಟನೆ ವಿವಿರ ತಿಳಿಯುತ್ತದೆ.

ನಟಿ ವರಲಕ್ಷ್ಮಿ ಟೊಮೆಟೊ ಬ್ಯಾಗ್‌ ಕದ್ದ ಕಳ್ಳ..! ವಿಡಿಯೋ ವೈರಲ್‌

Varalaxmi Sarathkumar tomato video : ಪ್ರಸ್ತುತ ಟೊಮ್ಯಾಟೊ ಬೆಲೆ ಕೇಳಿ ಗ್ರಾಹಕರು ಸುಸ್ತಾಗಿದ್ದಾರೆ. ಎಲ್ಲೆಡೆ ಟೆಮೊಟೆ ಹಾವಳಿ ನಡೆದಿದೆ. ಈವರೆಗೆ ರೂ. 100ರಿಂದ 150ರ ನಡುವೆ ಇದ್ದ ಟೊಮೇಟೊ ಬೆಲೆ ದಿಢೀರ್ ಏರಿಕೆಯಾಗಿದ್ದು, ಇದೀಗ ರೂ. 200 ಹೆಚ್ಚು ವೆಚ್ಚವಾಗುತ್ತದೆ. ಇದರಿಂದ ಟೊಮೇಟೊ ಹೆಸರು ಹೇಳಿದರೆ ಜನಸಾಮಾನ್ಯರು ಆತಂಕಕ್ಕೆ ಒಳಗಾಗುತ್ತಾರೆ.

ಹೌದು.. ಜನರು ಟೊಮೇಟೊ ಇಲ್ಲದ ಜೀವನಕ್ಕೆ ಒಗ್ಗಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಈ ನಡುವೆ ಸೋಷಿಯಲ್ ಮೀಡಿಯಾದಲ್ಲಿ ಟೊಮೆಟೊ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಕೆಲವರು ಬೆಲೆ ಏರಿಕೆಯ ಬಗ್ಗೆ ತಮಾಷೆಯಾಗಿ ಪೋಸ್ಟ್ ಮಾಡುತ್ತಿದ್ದಾರೆ. ಸಿನಿಮಾ ತಾರೆಯರು ಕೂಡ ಟೊಮೇಟೊ ಕುರಿತ ತಮಾಷೆಯ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯ ಪಾತ್ರದಲ್ಲಿ ವಿಜಯ್‌ ಸೇತುಪತಿ ನಟನೆ..! ʼಲೀಡರ್ ರಾಮಯ್ಯʼ ಚಿತ್ರಕ್ಕೆ ತಮಿಳು ನಟ ನಾಯಕ

ಇತ್ತೀಚೆಗಷ್ಟೇ ಸಿನಿಮಾ ನಟಿ ವರಲಕ್ಷ್ಮಿ ಶರತ್ ಕುಮಾರ್ ಕೂಡ ತಮಾಷೆಯ ವೀಡಿಯೋ ಮಾಡಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ ಟೊಮೆಟೊ ಮೌಲ್ಯವನ್ನು ವಿವರಿಸಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗುತ್ತಿದೆ. ಬನ್ನಿ ವಿಡಿಯೋದಲ್ಲಿ ಏನಿದೆ ಅಂತ ನೋಡುವ.

ನಟಿ ವರಲಕ್ಷ್ಮಿ ಶರತ್‌ಕುಮಾರ್ ಸಿನಿಮಾದಲ್ಲಿ ಮಾತ್ರವಲ್ಲ ನಿಜ ಜೀವನದಲ್ಲೂ ಸದಾ ಕ್ರಿಯಾಶೀಲರಾಗಿರುತ್ತಾಳೆ. ಅವರ ಇತ್ತೀಚಿನ ಟೊಮೇಟೊ ವಿಡಿಯೋ ಈಗ ವೈರಲ್ ಆಗುತ್ತಿದೆ. ವರಲಕ್ಷ್ಮಿ ಶರತ್ ಕುಮಾರ್ ಗೋಡೆಯ ಬಳಿ ನಿಂತು ಇನ್ನೊಬ್ಬ ಹುಡುಗಿಯೊಂದಿಗೆ ಮಾತನಾಡುತ್ತಿದ್ದಾರೆ. ತಮ್ಮ ಸೆಲ್ ಫೋನ್ ಮತ್ತು ಟೊಮೆಟೊ ಚೀಲವನ್ನು ಪಕ್ಕದ ಗೋಡೆಯ ಮೇಲೆ ಇಟ್ಟಿರುತ್ತಾರೆ. ಒಬ್ಬ ವ್ಯಕ್ತಿ ಅದನ್ನು ಗಮನಿಸಿ ಗೋಡೆಯ ಹಿಂದಿನಿಂದ ಬಂದು ಅವಳ ಸೆಲ್ ಫೋನ್ ತೆಗೆದುಕೊಂಡು ಹೋಗುತ್ತಾನೆ.

ಇದನ್ನೂ ಓದಿ: ಸಾರಾ ಲೆಹೆಂಗಾ ಲುಕ್‌ಗೆ ಪಡ್ಡೆ ಹೈಕ್ಳು ಫಿದಾ..! ಫೋಟೋ ನೋಡಿ

ಇದನ್ನು ನೋಡಿದ ಮತ್ತೊಬ್ಬ ಹುಡುಗಿ ವರಲಕ್ಷ್ಮಿಗೆ ಹೇಳಿದಾಗ ಫೋನ್ ಹೋದ್ರೆ ಹೋಯ್ತು ಬಿಡು ಅಂತ ಸುಮ್ಮನಾಗುತ್ತಾರೆ. ಆಕೆ ಪ್ರತಿಕ್ರಿಯಿಸದಿದ್ದಾಗ ಫೋನ್ ಕದ್ದ ಕಳ್ಳ ಈ ಬಾರಿ ಮತ್ತೆ ಬಂದು ಸೆಲ್ ಫೋನ್ ಅಲ್ಲೇ ಇಟ್ಟು ಟೊಮೇಟೊ ಇರುವ ಬ್ಯಾಗ್ ತೆಗೆದುಕೊಂಡು ಹೋಗುತ್ತಾನೆ. ಇದನ್ನು ನೋಡಿದ ವರಲಕ್ಷ್ಮಿ ಆ ವ್ಯಕ್ತಿಯನ್ನು ಹಿಂಬಾಲಿಸುತ್ತಾಳೆ. ಇದೀಗ ಈ ಹಾಸ್ಯ ವಿಡಿಯೋ ವೈರಲ್ ಆಗುತ್ತಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More