Home> Entertainment
Advertisement

The Kerala Story Collection: ಬಾಕ್ಸಾಫೀಸ್‌ನಲ್ಲಿ 'ದಿ ಕೇರಳ ಸ್ಟೋರಿ' ಮತ್ತೊಂದು ದಾಖಲೆ!

The Kerala Story Box Office Collection Day 16: ‘ದಿ ಕೇರಳ ಸ್ಟೋರಿ’ ಗಲ್ಲಾಪೆಟ್ಟಿಗೆಯಲ್ಲಿ ತನ್ನ ಬೇಟೆಯನ್ನು ಮುಂದುವರೆಸಿದೆ. ಚಿತ್ರ ವೀಕ್ಷಿಸಲು ಜನ ಥಿಯೇಟರ್‌ಗಳತ್ತ ಮುಗಿ ಬೀಳುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಮೂರನೇ ಶನಿವಾರವೂ ಚಿತ್ರದ ಗಳಿಕೆಯಲ್ಲಿ ಏರಿಕೆ ಕಂಡುಬಂದಿದೆ. 
 

The Kerala Story Collection: ಬಾಕ್ಸಾಫೀಸ್‌ನಲ್ಲಿ 'ದಿ ಕೇರಳ ಸ್ಟೋರಿ' ಮತ್ತೊಂದು ದಾಖಲೆ!

The Kerala Story BO Collection: 'ದಿ ಕೇರಳ ಸ್ಟೋರಿ' ಗಳಿಕೆಯ ವೇಗವು ನಿಲ್ಲುವ ಹೆಸರನ್ನು ತೆಗೆದುಕೊಳ್ಳುತ್ತಿಲ್ಲ. ಇಂದು ಚಿತ್ರ ಬಿಡುಗಡೆಯಾಗಿ 17ನೇ ದಿನ. ಆದರೆ ಈ ಚಿತ್ರದ ಚರ್ಚೆ ಮುಂದುವರೆದಿದೆ. ಮೇ 5 ರಂದು ಥಿಯೇಟರ್‌ಗಳಲ್ಲಿ ‘ದಿ ಕೇರಳ ಸ್ಟೋರಿ’ ರಿಲೀಸ್‌ ಆಗಿದೆ. 'ದಿ ಕೇರಳ ಸ್ಟೋರಿ' ಸಂಪೂರ್ಣವಾಗಿ ನಿರ್ಮಾಪಕರ ನಿರೀಕ್ಷೆಗಳನ್ನು ಪೂರೈಸಿದೆ. ಬಾಕ್ಸಾಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್‌ ಮುಂದುವರೆಸಿದೆ. 

ಇದನ್ನೂ ಓದಿ:ಮನ ಸೆಳೆಯುತಿದೆ ಬೆವರಿದ ಸುಂದರಿಯ ನೈಜ ಸೌಂದರ್ಯ..! ಮೇಘಾ ಶೆಟ್ಟಿ ಫೋಟೋಸ್‌ ವೈರಲ್‌

ಈ ಚಿತ್ರ ಗಳಿಕೆಯಲ್ಲಿ ದೊಡ್ಡ ದೊಡ್ಡ ಸಿನಿಮಾಗಳನ್ನು ಹಿಂದಿಕ್ಕಿದೆ. ಇದು ಅದಾ ಶರ್ಮಾ ಅವರ ವೃತ್ತಿಜೀವನದಲ್ಲಿ ಇದುವರೆಗಿನ ಅತಿ ಹೆಚ್ಚು ಹಣ ಗಳಿಸಿದ ಚಿತ್ರವಾಗಿದೆ. ನಡೆಯುತ್ತಿರುವ ವಿವಾದದಿಂದ 'ದಿ ಕೇರಳ ಸ್ಟೋರಿ'ಗೂ ಸಾಕಷ್ಟು ಲಾಭ ಸಿಕ್ಕಿದೆ. ಈಗ ಈ ಚಿತ್ರ ಮನೆಮನೆಯಲ್ಲಿ ಚರ್ಚೆಯಾಗುತ್ತಿದೆ. ಕುಟುಂಬ ಸಮೇತ ಹೋಗಿ ಜನರು ಇದನ್ನು ವೀಕ್ಷಿಸುತ್ತಿದ್ದಾರೆ. ಇದು ಕೇವಲ ಚಿತ್ರವಾಗಿ ಉಳಿದಿಲ್ಲ. ಅದರ ಹಿಂದಿನ ಕಾರಣ ಮತ್ತು ಈ ಕಥೆಯನ್ನು ಥಿಯೇಟರ್‌ಗಳಿಂದ ಅವರ ಮನೆಗಳಿಗೆ ತಂದು ನಿರಂತರವಾಗಿ ಅದರ ಬಗ್ಗೆ ಮಾತನಾಡುತ್ತಿದ್ದಾರೆ.

 

 
 
 
 

 
 
 
 
 
 
 
 
 
 
 

A post shared by Adah Sharma (@adah_ki_adah)

 

ಇದೀಗ ಈ ಚಿತ್ರದ 16ನೇ ದಿನದ ಅಂಕಿ ಅಂಶಗಳು ಮತ್ತೊಮ್ಮೆ ನಿರ್ಮಾಪಕರ ಮನದಲ್ಲಿ ಸಂತಸ ಮೂಡಿಸಿದೆ. ಮೂರನೇ ಶನಿವಾರದಂದು ಮತ್ತೊಮ್ಮೆ 'ದಿ ಕೇರಳ ಸ್ಟೋರಿ' ಗಳಿಕೆಯಲ್ಲಿ ಜಿಗಿತ ಕಂಡುಬಂದಿದೆ. ವರದಿಯ ಪ್ರಕಾರ 'ದಿ ಕೇರಳ ಸ್ಟೋರಿ' 16ನೇ ದಿನಕ್ಕೆ 9 ಕೋಟಿ ಬ್ಯುಸಿನೆಸ್ ಮಾಡಿದೆ. ಇದು ಸ್ವತಃ ದೊಡ್ಡ ಸಂಗ್ರಹವೆಂದು ಪರಿಗಣಿಸಲಾಗಿದೆ. ಕೇವಲ 40 ಕೋಟಿಯಲ್ಲಿ ತಯಾರಾದ ಈ ಚಿತ್ರವು ಚಿತ್ರದ ಬಜೆಟ್‌ಗಿಂತ ಮೂರು ಪಟ್ಟು ಲಾಭ ಗಳಿಸಿದೆ.

ಇದನ್ನೂ ಓದಿ:ಟ್ರಾನ್ಸ್‌ಜೆಂಡರ್ ಆಗಿ ನಟಿಸಿದ ಅನುಭವ ಬಿಚ್ಚಿಟ್ಟ ನವಾಜುದ್ದೀನ್ ಸಿದ್ದಿಕಿ

ಮತ್ತೊಂದೆಡೆ, ಈಗ ಈ ಚಿತ್ರದ ಕಲೆಕ್ಷನ್ ಬಗ್ಗೆ ಹೇಳುವುದಾದರೆ, ಅದು 187.32 ಕೋಟಿ ತಲುಪಿದೆ. ಈಗ ಇಂತಹ ಪರಿಸ್ಥಿತಿಯಲ್ಲಿ ಭಾನುವಾರದ ಕಲೆಕ್ಷನ್ ಮೇಲೆ ಜನರ ಕಣ್ಣು ನೆಟ್ಟಿದ್ದು, ಭಾನುವಾರವೂ ಭರ್ಜರಿ ವ್ಯಾಪಾರ ಮಾಡಬಹುದೆಂಬ ನಂಬಿಕೆ ಇದೆ. ರಜೆಯ ಸಂದರ್ಭದಲ್ಲಿ ಜನರು ಖಂಡಿತವಾಗಿಯೂ 'ದಿ ಕೇರಳ ಸ್ಟೋರಿ' ನೋಡಲು ಹೋಗುತ್ತಾರೆ. ಈ ಚಿತ್ರ ಇದೇ ರೀತಿ ಗಳಿಕೆ ಕಂಡರೆ, ಇನ್ನೆರಡು ದಿನಗಳಲ್ಲಿ 'ದಿ ಕೇರಳ ಸ್ಟೋರಿ' 200 ಕೋಟಿಯ ಗಡಿ ಮುಟ್ಟಲಿದೆ. 

ಇದನ್ನೂ ಓದಿ: ರಿಲೀಸ್‌ ಆದ 24 ಗಂಟೆಯಲ್ಲಿ ಹೊಸ ದಾಖಲೆ ಬರೆದ ಆದಿಪುರುಷ 'ಜೈ ಶ್ರೀ ರಾಮ್' ಹಾಡು

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Read More