Home> Entertainment
Advertisement

ದಳಪತಿ ʼಲಿಯೋʼ ಟ್ರೇಲರ್‌ ಔಟ್‌ : ʼವಿಜಯ್‌ʼ ಇಲ್ಲಿ ಒಬ್ಬರೇ ಇಲ್ಲ

Thalapathy Vijay : ಟ್ರೇಲರ್‌ ನೋಡಿದ್ರೆ ‘ಲಿಯೋ’ ಲೋಕೇಶ್ ಕನಕರಾಜ್ ಅವರ ಆಕ್ಷನ್ ಥ್ರಿಲ್ಲರ್ ಬ್ರಾಂಡ್ ಎಂದು ಅರ್ಥವಾಗುತ್ತದೆ. ಒಂದೆಡೆ ಆ್ಯಕ್ಷನ್ ಹೈಲೈಟ್ ಆದ್ರೆ ಇನ್ನೊಂದೆಡೆ ಚಿತ್ರದ ಕಥೆ ಏನು? ಎಂಬ ಕುತೂಹಲ ಕೆರಳಿಸುತ್ತಿದೆ.

ದಳಪತಿ ʼಲಿಯೋʼ ಟ್ರೇಲರ್‌ ಔಟ್‌ : ʼವಿಜಯ್‌ʼ ಇಲ್ಲಿ ಒಬ್ಬರೇ ಇಲ್ಲ

Leo Trailer : ಕಾಲಿವುಡ್ ಸ್ಟಾರ್ ನಟ ವಿಜಯ್ ಮತ್ತು ನಿರ್ದೇಶಕ ಲೋಕೇಶ್ ಕನಕರಾಜ್ ಕಾಂಬಿನೇಷನ್‌ನ ಬಹುನಿರೀಕ್ಷಿತ 'ಲಿಯೋ' ಚಿತ್ರದ ಟ್ರೈಲರ್‌ ಬಿಡುಗಡೆಯಾಗಿದ್ದು, ಕ್ಯೂರಿಯಾಸಿಟಿ ಹೆಚ್ಚಿಸಿದೆ. ಚಿತ್ರದಲ್ಲಿ ದಳಪತಿಗೆ ಜೊತೆಯಾಗಿ ತ್ರಿಶಾ ಕೃಷ್ಣನ್ ನಾಯಕಿಯಾಗಿ ನಟಿಸಿದ್ದರೆ, ಸಂಜಯ್ ದತ್ ಮತ್ತು ಅರ್ಜುನ್ ಸರ್ಜಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 

ಚಿತ್ರದ ಟ್ರೇಲರ್‌ ನೋಡಿದ್ರೆ ‘ಲಿಯೋ’ ಲೋಕೇಶ್ ಕನಕರಾಜ್ ಅವರ ಆಕ್ಷನ್ ಥ್ರಿಲ್ಲರ್ ಬ್ರಾಂಡ್ ಎಂದು ಅರ್ಥವಾಗುತ್ತದೆ. ಒಂದೆಡೆ ಆ್ಯಕ್ಷನ್ ಹೈಲೈಟ್ ಆದ್ರೆ ಇನ್ನೊಂದೆಡೆ ಚಿತ್ರದ ಕಥೆ ಏನು? ಎಂಬ ಕುತೂಹಲ ಕೆರಳಿಸುತ್ತಿದೆ. ಅಲ್ಲದೆ ಈ ಚಿತ್ರದಲ್ಲಿ ವಿಜಯ್ ಡ್ಯುಯಲ್ ರೋಲ್‌ನಲ್ಲಿ ಕಾಣಿಸಿಕೊಳ್ಳುತ್ತಾರಾ? ಎಂಬ ಅನುಮಾನ ಮೂಡಿಸಿದೆ.

ಇದನ್ನೂ ಓದಿ: ಮನಸ್ಸಲ್ಲಿ ಒಂದು ಇಟ್ಕೊಂಡು ಹೊರಗಡೆ ನಾಟಕವಾಡುವುದು ನನಗೆ ಇಷ್ಟವಿಲ್ಲ : ಧ್ರುವ ಸರ್ಜಾ

ಅಷ್ಟೆ ಅಲ್ಲದೆ, ವಿಜಯ್‌ ಈ ಸಿನಿಮಾದಲ್ಲಿ ನೆಗೆಟಿವ್ ಶೇಡ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರಾ ಎನ್ನುವ ಹಲವು ಪ್ರಶ್ನೆಗಳನ್ನು ಟ್ರೇಲರ್‌ ಹುಟ್ಟುಹಾಕಿದೆ. ವಿಜಯ್ ಅವರನ್ನು ಲಿಯೋಡಾಸ್ ಮತ್ತು ಪಾರ್ತಿ ಎಂಬ ಎರಡು ಪಾತ್ರಗಳಲ್ಲಿ ತೋರಿಸಲಾಗಿದೆ. ಆದರೆ ಇಬ್ಬರಿಗೂ ಒಂದೇ ಸಾಮ್ಯತೆ ಇರುವುದರಿಂದ ಶತ್ರುಗಳು ಒಬ್ಬರನ್ನೊಬ್ಬರು ಹಿಂಬಾಲಿಸುತ್ತಿರುವುದು ಟ್ರೇಲರ್‌ನಲ್ಲಿದೆ. 

 

ತನ್ನ ಕುಟುಂಬವನ್ನು ರೌಡಿಗಳಿಂದ ರಕ್ಷಿಸಲು ಓಡಿಹೋಗುವ ಪಾರ್ತಿ ಅಂತಿಮವಾಗಿ ಅವರ ವಿರುದ್ಧ ತಿರುಗಿ ಬೀಳುವುದನ್ನು ಟ್ರೇಲರ್‌ನಲ್ಲಿ ನೋಡಬಹುದು. ವಿಜಯ್ ಪತ್ನಿ ಪಾತ್ರದಲ್ಲಿ ತ್ರಿಷಾ ನಟಿಸಿದ್ದಾರೆ. ಅವರ ಪಾತ್ರಕ್ಕೆ ಒಳ್ಳೆಯ ಸ್ಕೋಪ್ ಇದೆಯಂತೆ. ಸಂಜಯ್ ದತ್, ಅರ್ಜುನ್, ನಿರ್ದೇಶಕ ಮಿಸ್ಕಿನ್ ಖಳನಾಯಕರಾಗಿ ಕಾಣಿಸಿಕೊಂಡಿದ್ದರೆ, ಗೌತಮ್ ಮೆನನ್ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದಾರೆ.

ಇದನ್ನೂ ಓದಿ: Photos: ಅಮೆರಿಕದಲ್ಲಿನ ಶೂಟಿಂಗ್ ಫೋಟೋ ಹಂಚಿಕೊಂಡ ಶಾನ್ವಿ ಶ್ರೀವಾಸ್ತವ

ಒಟ್ಟಿನಲ್ಲಿ ನಿಜವಾದ ಸೀರಿಯಲ್ ಕಿಲ್ಲರ್ ಯಾರು..? ಲಿಯೋ ಮತ್ತು ಪಾರ್ಥಿ ಒಂದೇನಾ ಅಥವಾ ಬೇರೆ ಬೇರೆನಾ..? ಹೀಗೆ ಹಲವಾರು ಪ್ರಶ್ನೆಗಳನ್ನು ಟ್ರೇಲರ್‌ ಹುಟ್ಟು ಹಾಕಿದೆ. ಇದರ ಬಗ್ಗೆ ಕ್ಲಾರೀಟಿ ಬೇಕು ಅಂದ್ರೆ ಸಿನಿಮಾ ರಿಲೀಸ್‌ ಆಗುವವರೆಗೂ ಕಾಯಬೇಕು. ಅಂದಹಾಗೆ ಈ ಸಿನಿಮಾ ತೆಲುಗು, ತಮಿಳು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಅಕ್ಟೋಬರ್ 19 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Read More