Home> Entertainment
Advertisement

Tamannaah Bhatia : ಬಾಯ್‌ ಫ್ರೇಂಡ್‌ಗೆ ಲಿಪ್‌ ಕಿಸ್‌ ಕೊಟ್ಟ ತಮನ್ನಾ.. ಯಾರು ಆ ಅದೃಷ್ಟವಂತ..?

ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಮತ್ತು ವಿಜಯ್ ವರ್ಮಾ ಗೋವಾದಲ್ಲಿ ಹೊಸ ವರ್ಷದ ಪಾರ್ಟಿಯಲ್ಲಿ ಪರಸ್ಪರ ಚುಂಬಿಸಿರುವ ಅಸ್ಪಷ್ಟ ವೀಡಿಯೊ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದೆ. ತಮನ್ನಾ ಅಥವಾ ವಿಜಯ್ ತಮ್ಮ ಲವ್‌ ಬಗ್ಗೆ ಗುಟ್ಟು ಬಿಟ್ಟು ಕೊಡದಿದ್ದರೂ ಸಹ ಇಬ್ಬರು ಲಿಪ್‌ಕಿಸ್‌ ಮಾಡಿರುವ ವಿಡಿಯೋ ಸಿಕ್ರಿಯೆ ರಿವೀಲ್‌ ಮಾಡಿದೆ. 

Tamannaah Bhatia : ಬಾಯ್‌ ಫ್ರೇಂಡ್‌ಗೆ ಲಿಪ್‌ ಕಿಸ್‌ ಕೊಟ್ಟ ತಮನ್ನಾ.. ಯಾರು ಆ ಅದೃಷ್ಟವಂತ..?

Tamannaah Bhatia : ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಮತ್ತು ವಿಜಯ್ ವರ್ಮಾ ಗೋವಾದಲ್ಲಿ ಹೊಸ ವರ್ಷದ ಪಾರ್ಟಿಯಲ್ಲಿ ಪರಸ್ಪರ ಚುಂಬಿಸಿರುವ ಅಸ್ಪಷ್ಟ ವೀಡಿಯೊ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದೆ. ತಮನ್ನಾ ಅಥವಾ ವಿಜಯ್ ತಮ್ಮ ಲವ್‌ ಬಗ್ಗೆ ಗುಟ್ಟು ಬಿಟ್ಟು ಕೊಡದಿದ್ದರೂ ಸಹ ಇಬ್ಬರು ಲಿಪ್‌ಕಿಸ್‌ ಮಾಡಿರುವ ವಿಡಿಯೋ ಸಿಕ್ರಿಯೆ ರಿವೀಲ್‌ ಮಾಡಿದೆ. 

ಹೊಸ ವರ್ಷದ ಮೊದಲ ದಿನವನ್ನು ಪರಸ್ಪರ ಚುಂಬಿಸುವ ಮೂಲಕ ತಮನ್ನಾ ಮತ್ತು ವಿಜಯ್ ಸ್ವಾಗತಿಸಿದ್ದಾರೆ. ಈ ಕುರಿತ ವೀಡಿಯೊ ಒಂದು ವೈರಲ್‌ ಆಗುತ್ತಿದೆ. ಕೆಲವು ಸ್ಟಾರ್‌ ನಟ, ನಟಿಯರು ಅಪ್ಪ ಅಮ್ಮನ ಜೊತೆ ನ್ಯೂ ಇಯರ್‌ ಸೆಲೆಬ್ರೇಟ್‌ ಮಾಡಿದ್ರೆ, ಇನ್ನೂ ಕೆಲವರು ತಮ್ಮ ಗುಪ್ತ ಪ್ರೇಮಿಗಳ ಜೊತೆ ಸಿಕ್ರೇಟ್‌ ಸ್ಥಳಕ್ಕೆ ಹೋಗಿ ಹೊಸ ವರ್ಷವನ್ನು ಅದ್ಧೂರಿಯಾಗಿ ಬರಮಾಡಿಕೊಂಡಿದ್ದಾರೆ. ಇದೀಗ ಗೋವಾಗೆ ತೆರಳಿದ್ದ ತಮನ್ನಾ ಲವ್‌ ಮ್ಯಾಟರ್‌ನ್ನು ವೈರಲ್‌ ವಿಡಿಯೋ ರಿವಿಲ್‌ ಮಾಡಿದೆ.

ಇದನ್ನೂ ಓದಿ: Priya Anand : ಪ್ರಿಯಾ.. ನಿನ್ನ ಅದ್ಭುತ ಸೌಂದರ್ಯ ರಾಶಿಗೆ ನಾ ಕಾವಲುಗಾರನಾಗಲೇʼ..!

ಇದೀಗ ತಮನ್ನಾ ವಿಜಯ್ ವರ್ಮಾಗೆ ಕಿಸ್‌ ನೀಡಿರುವ ಸುದ್ದಿ ಅವರ ಫ್ಯಾನ್ಸ್‌ಗಳಿಗೆ ಆಶ್ಚರ್ಯವನ್ನುಂಟು ಮಾಡಿದೆ. ಇವರಿಬ್ಬರು ಹೇಗೆ... ಎಲ್ಲಿ..? ಭೇಟಿಯಾದ್ರು.. ಅಂತ ನೆಟ್ಟಿಗರು ಆಶ್ಚರ್ಯ ಪಡುತ್ತಿದ್ದಾರೆ. ವರದಿಯ ಪ್ರಕಾರ, ಇಬ್ಬರೂ ಈ ಹಿಂದೆ ಸಿನಿಮಾ ಶೋ ಒಂದರಲ್ಲಿ ಭೇಟಿಯಾಗಿದ್ದರು. ಅದಾದ ನಂತರ ಸಮಾರಂಭದಲ್ಲಿ ಮೀಟ್‌ ಆಗಿದ್ದರು ಎನ್ನಲಾಗಿದೆ. ಪರಸ್ಪರ ಮಾತುಕತೆ ವಿನಿಮಯ ನಂತರ ಇಬ್ಬರು ಕ್ಲೋಸ್‌ ಆಗಿದ್ದಾರೆ ಎಂದು ತಿಳಿದು ಬಂದಿದೆ.

ಅಲ್ಲದೆ ಸುಜೋಯ್ ಘೋಷ್ ಅವರ ʼಲಸ್ಟ್ ಸ್ಟೋರೀಸ್ 2ʼ ಸಿನಿಮಾದಲ್ಲಿ ತಮನ್ನಾ ಮತ್ತು ವಿಜಯ್ ನಟಿಸಿದ್ದಾರೆ ಎನ್ನುವುದು ವಿಶೇಷವಾಗಿದೆ. ಆದ್ರೂ ಇಷ್ಟು ಕಡಿಮೆ ಸಮಯದಲ್ಲಿ ತಮ್ಮ ಸ್ನೇಹವನ್ನು ಮುಂದಿನ ಹಂತಕ್ಕೆ ಹೇಗೆ ಕೊಂಡೊಯ್ಯದರು ಎನ್ನುವುದೇ ಆಶ್ಚರ್ಯವಾಗಿದೆ. ಅದು ಕಿಸ್‌ ಕೊಡುವ ಮಟ್ಟಿಗೆ ಹೇಗೆ ಸಾಧ್ಯ ಎನ್ನುವುದೇ ತಮನ್ನಾ ಅಭಿಮಾನಿಗಳಿಗೆ ಯಕ್ಷ ಪ್ರಶ್ನೆಯಾಗಿದೆ. ಒಟ್ಟಾರೆಯಾಗಿ ತಮನ್ನಾ ಮತ್ತು ವಿಜಯ್ ನಿಜವಾಗಿಯೂ ಡೇಟಿಂಗ್ ಮಾಡುತ್ತಿದ್ದರೆ ಅದನ್ನು ಶೀಘ್ರದಲ್ಲೇ ಅಧಿಕೃತಗೊಳಿಸಬೇಕೆಂದು ಅವರ ಅಭಿಮಾನಿಗಳು ಬಯಸುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More