Home> Entertainment
Advertisement

Sushmita Sen Viral Instagram Post: ತನ್ನ ತಪ್ಪುಗಳನ್ನು ಒಪ್ಪಿಕೊಂಡ Sushmita Sen ಹೇಳಿದ್ದೇನು ಗೊತ್ತಾ?

Sushmita Sen Viral Instagram Post: ತನ್ನ ಸಾಮಾಜಿಕ ಮಾಧ್ಯಮ ಖಾತೆಯ ಮೂಲಕ ಸುಶ್ಮಿತಾ ಸೆನ್ ಜೀವನದಲ್ಲಿ ತಾವು ಮಾಡಿರುವ ತಪ್ಪುಗಳನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಈ ಕುರಿತು ಹೇಳುವ ಅವರು 45ನೇ ವಯಸ್ಸಿನಲ್ಲಿಯೂ ಕೂಡ ತಾವು ತಪ್ಪುಗಳನ್ನು ಮಾಡುತ್ತಿರುವುದಾಗಿ ಒಪ್ಪಿಕೊಂಡಿದ್ದಾಳೆ.

Sushmita Sen Viral Instagram Post: ತನ್ನ ತಪ್ಪುಗಳನ್ನು ಒಪ್ಪಿಕೊಂಡ Sushmita Sen ಹೇಳಿದ್ದೇನು ಗೊತ್ತಾ?

ನವದೆಹಲಿ: Sushmita Sen Viral Instagram Post - ಬಾಲಿವುಡ್ (Bollywood) ನಟಿ ಸುಷ್ಮಿತಾ ಸೇನ್ (Sushmita Sen) ತನ್ನ ಅಭಿನಯ ಮತ್ತು ಜೀವನಶೈಲಿಯಿಂದ ಖ್ಯಾತರಾಗಿದ್ದಾರೆ. ತನ್ನ ಅಭಿಮಾನಿಗಳೊಂದಿಗೆ ನಿರಂತರವಾಗಿ ಸಂಪರ್ಕ ಹೊಂದಲು ಅವಳು ತನ್ನ ಆಲೋಚನೆಗಳು, ಫೋಟೋಗಳು ಮತ್ತು ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ (Sushmita Sen Instagram) ಹಂಚಿಕೊಳ್ಳುತ್ತಾಳೆ. ಇಂತಹ ಪರಿಸ್ಥಿತಿಯಲ್ಲಿ, ಅವರು ಈಗ ತಮ್ಮ ತಪ್ಪುಗಳ ಬಗ್ಗೆ ಒಂದು ಪೋಸ್ಟ್ (Sushmita Sen New Post) ಬರೆದಿದ್ದಾರೆ ಮತ್ತು ಅದು ಇದೀಗ ಭಾರಿ ವೈರಲ್ ಆಗುತ್ತಿದೆ.

ಯಾವಾಗಲು ಸಕಾರಾತ್ಮವಾಗಿರಲು ನನ್ನಿಂದ ಆಗುವುದಿಲ್ಲ (Arya 2)

ವಾಸ್ತವದಲ್ಲಿ ಸುಷ್ಮಿತಾ ಸೇನ್ ತನ್ನ ಒಂದು ಫೋಟೋವನ್ನು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದರ ಜೊತೆಗೆ 45 ನೇ ವಯಸ್ಸಿನಲ್ಲಿಯೂ ನಾನು ತಪ್ಪುಗಳನ್ನು ಮಾಡುತ್ತೇನೆ ಎಂದು ಸುಷ್ಮಿತಾ ಹೇಳಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಚಿತ್ರವನ್ನು ಹಂಚಿಕೊಂಡ ಸುಷ್ಮಿತಾ ಸೇನ್,ಅದಕ್ಕೆ ಸುದೀರ್ಘ ಶೀರ್ಷಿಕೆಯನ್ನು ಬರೆದಿದ್ದಾರೆ.  ತನ್ನ ಶೀರ್ಷಿಕೆಯಲ್ಲಿ ಸುಶ್ಮಿತಾ, ' ನೀವೂ ರಜೆಗಳನ್ನು ತೆಗೆದುಕೊಳ್ಳುತ್ತೀರಾ ಎಂದು ನೀವು ಪ್ರಶ್ನಿಸುತ್ತಿರಿ, ಹೌದು, ನಾನು ರಜೆಗಳನ್ನು ತೆಗೆದುಕೊಳ್ಳುತ್ತೇನೆ. ನೀವು ಯಾವಾಗಲು ಸಕಾರಾತ್ಮವಾಗಿರುತ್ತೀರಾ? ಎಂದು ಪ್ರಶ್ನಿಸುತ್ತೀರಾ... ಇಲ್ಲ ನನಗೆ ಯಾವಾಗಲು ಸಕಾರಾತ್ಮಕವಾಗಿರಲು ಬರಲ್ಲ' ಎಂದು ಬರೆದಿದ್ದಾರೆ.

ಇದನ್ನೂ ಓದಿ -ಹಾಲಿವುಡ್ ಗೆ ಎಂಟ್ರಿ ಕೊಟ್ಟ ಬಾಹುಬಲಿ..! 'Mission Impossible 7' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಪ್ರಭಾಸ್ ?

ಸುಶ್ಮಿತಾ ನೋವಿಗೆ ಕಾರಣ ಏನು? (Arya)
ಈ ಕುರಿತು ಮುಂದೆ ಬರದಿರುವ ಸುಶ್ಮಿತಾ ತಮಗೆ ದುಃಖ ಯಾಕಾಗುತ್ತದೆ ಎಂಬುದನ್ನು ಹೇಳಿದ್ದಾರೆ. '45ನೇ ವಯಸ್ಸಿನಲ್ಲಿಯೂ ಕೂಡ ನಾನು ನನ್ನ ಕೆಲ ವಸ್ತುಗಳ ಆಯ್ಕೆಯಲ್ಲಿ ದೊಡ್ಡ ತಪ್ಪು ಮಾಡುತ್ತೇನೆ. ಇದರಿಂದ ನನಗೆ ನೋವಾಗುತ್ತದೆ. ಸುಳ್ಳು ಹೇಳುವ ನಿರಾಶೆ ನನಗೆ ಗೊತ್ತಿದೆಯೇ? ಇಲ್ಲ...ಈ ವಿಷಯದಲ್ಲಿ ನನ್ನಿಂದ ಯಾರೂ ಪಾರಾಗಲ್ಲ. ಎಂದಿದ್ದಾಳೆ.

ಇದನ್ನೂ ಓದಿ-Priyanka Chopra: ಯಶಸ್ವೀ ವಿವಾಹದ ರಹಸ್ಯ ಬಹಿರಂಗಪಡಿಸಿದ ದೇಸಿ ಗರ್ಲ್

ಕರ್ಮದ ಕುರಿತು ಸುಶ್ ಗಂಭೀರ ಹೇಳಿಕೆ
 'ನಾನು ಕಲಿತದ್ದು ಎಷ್ಟೇ ಕಷ್ಟವಾದರೂ. ನಾನು ಅದನ್ನು ಕರ್ಮದ ಸಾಲದ ರೂಪದಲ್ಲಿ  ನೋಡಬೇಕು. ಪೂರ್ಣವಾಗಿ ಮರುಪಾವತಿ ಮಾಡುವೆ  ಎಂದು ಭಾವಿಸುತ್ತೇವೆ. ಇದಕ್ಕೆ ಕಾರಣಗಳು ಹೇಳುವುದಾದರೆ ನನ್ನ ಕರ್ಮಗಳು ಇದೀಗ ಆರಂಭಗೊಂಡಿವೆ' ಎಂದು ಸುಶ್ ಹೇಳಿದ್ದಾಳೆ. 

ಇದನ್ನೂ ಓದಿ-Shruti Haasan On Parents Devorce: ತಂದೆ-ತಾಯಿಯ ವಿಚ್ಛೇದನೆಯಿಂದ ಖುಷಿಯಾಗಿದ್ದೆ, ಬೆಚ್ಚಿಬೀಳಿಸುವ ಹೇಳಿಕೆ ನೀಡಿದ Shruti Haasan

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More