Home> Entertainment
Advertisement

ಗಾಯಕಿ ಮಂಗ್ಲಿ ಕಾರ್‌ ಮೇಲೆ ಕಲ್ಲು ಎಸೆತಕ್ಕೆ ಕಾರಣವಾಯ್ತಾ ʼಕನ್ನಡʼದ ಬಗ್ಗೆ ಅಸಡ್ಡೆ..!

ಟಾಲಿವುಡ್‌ ಸ್ಟಾರ್‌ ಸಿಂಗರ್‌ ಸತ್ಯವತಿ ಮಂಗ್ಲಿ ಅವರ ಕಾರ್‌ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿರುವ ಘಟನೆ ಬಳ್ಳಾರಿಯಲ್ಲಿ ಜರುಗಿದೆ. ಮೊದಲ ಬಾರಿಗೆ ನಡೆದ ಗಣಿ ನಾಡು ʼಬಳ್ಳಾರಿ ಉತ್ಸವʼ ಅದ್ಧೂರಿಯಾಗಿ ಜರುಗಿತ್ತು. ಈ ವೇಳೆ ಮಂಗ್ಲಿ ಸಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಾಡು ಹಾಡಿದ್ದರು. ಆದ್ರೆ ಉತ್ಸವದ ಕೊನೆಗೆ ಮಂಗ್ಲಿ ತೆರಳುತ್ತಿದ್ದ ಕಾರ್‌ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ.

ಗಾಯಕಿ ಮಂಗ್ಲಿ ಕಾರ್‌ ಮೇಲೆ ಕಲ್ಲು ಎಸೆತಕ್ಕೆ ಕಾರಣವಾಯ್ತಾ ʼಕನ್ನಡʼದ ಬಗ್ಗೆ ಅಸಡ್ಡೆ..!

Singer Mangli : ಟಾಲಿವುಡ್‌ ಸ್ಟಾರ್‌ ಸಿಂಗರ್‌ ಸತ್ಯವತಿ ಮಂಗ್ಲಿ ಅವರ ಕಾರ್‌ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿರುವ ಘಟನೆ ಬಳ್ಳಾರಿಯಲ್ಲಿ ಜರುಗಿದೆ. ಮೊದಲ ಬಾರಿಗೆ ನಡೆದ ಗಣಿ ನಾಡು ʼಬಳ್ಳಾರಿ ಉತ್ಸವʼ ಅದ್ಧೂರಿಯಾಗಿ ಜರುಗಿತ್ತು. ಈ ವೇಳೆ ಮಂಗ್ಲಿ ಸಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಾಡು ಹಾಡಿದ್ದರು. ಆದ್ರೆ ಉತ್ಸವದ ಕೊನೆಗೆ ಮಂಗ್ಲಿ ತೆರಳುತ್ತಿದ್ದ ಕಾರ್‌ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ.

ಮೊದಲ ಬಾರಿಗೆ ನಡೆದ ಎರಡು ದಿನದ ಬಳ್ಳಾರಿ ಉತ್ಸವಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ನಟ ರಾಘವೇಂದ್ರ ರಾಜ್​ಕುಮಾರ್, ಅಶ್ವಿನಿ ಪುನೀತ್​ ರಾಜ್​ಕುಮಾರ್​ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಮೊದಲ ದಿನದ ಉತ್ಸವದಲ್ಲಿ ಗಾಯಕಿಯರಾದ ಮಂಗ್ಲಿ, ಎಂಡಿ ಪಲ್ಲವಿ ಕಾರ್ಯಕ್ರಮ ಇತ್ತು. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ತಂಡ ಕೂಡಾ ಈ ಕಾರ್ಯಕ್ರಮದಲ್ಲಿ ಭಾಗವಹಿಸಿತ್ತು.

ಇದನ್ನೂ ಓದಿ: Puneeth statue: ಬಳ್ಳಾರಿಯಲ್ಲಿ 23 ಅಡಿ ಎತ್ತರದ ಪುನೀತ್ ರಾಜಕುಮಾರ್ ಪುತ್ಥಳಿ ಅನಾವರಣ

ಶನಿವಾರ (ಜ.21) ಬಳ್ಳಾರಿಯ ಮುನಿಸಿಪಲ್ ಕಾಲೇಜು ಮೈದಾನದಲ್ಲಿ ನಡೆದ ಕಾರ್ಯಕ್ರಮಕ್ಕೆ ಸಿಂಗರ್ ಮಂಗ್ಲಿ ಬಂದಿದ್ದರು. ವೇದಿಕೆ ಮೇಲೆ ಹಾಡುಗಳನ್ನು ಹೇಳಿ ವಾಪಸ್ ತೆರಳುವಾಗ ಅವರನ್ನು ನೋಡಲು ಯುವಕರ ದಂಡು ಮುಗಿಬಿದ್ದಿದ್ದರು. ಅಲ್ಲದೆ, ವೇದಿಕೆ ಹಿಂಭಾಗದಲ್ಲಿದ್ದ ಅವರ ಮೇಕಪ್ ಟೆಂಟ್​ಗೆ ನುಗ್ಗಿದರು. ಪೋಲಿಸರು ಲಘು ಲಾಟಿ ಪ್ರಹಾರ ನಡೆಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದರು. ಆದ್ರೆ ಮಂಗ್ಲಿ ತೆರಳುತ್ತಿದ್ದ ಕಾರ್‌ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದರು.

ಇದಿಗ ಈ ಕುರಿತ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ. ಅಲ್ಲದೆ, ನೆಟ್ಟಿಗರು ಕಲ್ಲು ತೂರಾಟವನ್ನು ಸಮರ್ಥಿಸಿಕೊಂಡು ಮಾತನಾಡುತ್ತಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ನಡೆದ ಚಿಕ್ಕಬಳ್ಳಾಪುರ ಉತ್ಸವ ಕಾರ್ಯಕ್ರಮದಲ್ಲಿ ಮಂಗ್ಲಿ ಕನ್ನಡದ ಬಗ್ಗೆ ಅಸಡ್ಡೆ ತೋರಿಸಿದ್ದೇ ಇದಕ್ಕೆ ಕಾರಣ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More