Home> Entertainment
Advertisement

Sridevi : ಈ ಚಿತ್ರಕ್ಕಾಗಿ ಶ್ರೀದೇವಿ ರಜನಿಕಾಂತ್‌ಗಿಂತ ಹೆಚ್ಚು ಸಂಭಾವಣೆ ಪಡೆದಿದ್ದರಂತೆ!

Sridevi Remuneration : ಭಾರತೀಯ ಮನರಂಜನಾ ಕ್ಷೇತ್ರದ ಅಚ್ಚುಮೆಚ್ಚಿನ ರತ್ನ, ಯಾವುದೇ ಅಂತೆ ಕಂತೆ, ಲವ್‌, ಅಫೇರ್‌ ಇಲ್ಲದೇ ಯಶಸ್ಸು ಗಳಿಸಿದ ದಕ್ಷಿಣಭಾರತದ ನಟಿ ಶ್ರೀದೇವಿ. ತನ್ನ ನಟನೆಯಿಂದಲೇ ಮೋಡಿಮಾಡಿದ ನಟಿ ನಿರ್ದಿಷ್ಟ ಚಿತ್ರಕ್ಕಾಗಿ ಸೂಪರ್‌ಸ್ಟಾರ್‌ಗಿಂತ ರಜನಿಕಾಂತ್‌ಗಿಂತಲೂ ಹೆಚ್ಚು ಸಂಭಾವಣೆ ಪಡೆದಿದ್ದರಂತೆ. ಹಾಗಾದ್ರೆ ಆ ಚಿತ್ರ ಯಾವುದು..ಯಾವಾಗ ತೆರೆಗೆ ಬಂದಿತ್ತು...ಎನ್ನುವುದರ ಮಾಹಿತಿ ಇಲ್ಲಿದೆ. 

Sridevi : ಈ ಚಿತ್ರಕ್ಕಾಗಿ ಶ್ರೀದೇವಿ ರಜನಿಕಾಂತ್‌ಗಿಂತ ಹೆಚ್ಚು ಸಂಭಾವಣೆ ಪಡೆದಿದ್ದರಂತೆ!

Moondru Mudichu : ಟೈಮ್‌ಲೆಸ್ ಚಲನಚಿತ್ರಗಳ ಮೂಲಕ ಎಲ್ಲರ ಹೃದಯದಲ್ಲಿ ಚಾಪು ಮೂಡಿಸಿದ ನಟಿ ಶ್ರೀದೇವಿ 1976 ರಲ್ಲಿ ಕೆ ಬಾಲಚಂದರ್ ಅವರ ಮೂರು ಮುಡಿಚು ಚಿತ್ರದ ಮೂಲಕ ಗಮನ ಸೆಳೆದಿದ್ದರು. ನಂತರ ದಕ್ಷಿಣ ಚಿತ್ರರಂಗದ ಸೂಪರ್‌ಸ್ಟಾರ್ ರಜನಿಕಾಂತ್ ಅವರೊಂದಿಗೆ ಪ್ರಮುಖ ಪಾತ್ರಗಳಲ್ಲಿ ತೆರೆಹಂಚಿಕೊಳ್ಳುವುದರ ಜೊತೆಗೆ  ಕಮಲ್ ಹಾಸನ್ ಜೊತಯಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದರು. 

ಬಾಲ ಕಲಾವಿದೆಯಾಗಿ ತಮ್ಮ ಕಲಾವೃತ್ತಿಯಯನ್ನು ಆರಂಭಿಸಿದ ಶ್ರೀದೇವಿ ಅವರು ಎಂಜಿ ರಾಮಚಂದ್ರನ್, ಶಿವಾಜಿ ಗಣೇಶನ್, ಎನ್‌ಟಿ ರಾಮರಾವ್ ಮತ್ತು ಜೆ ಜಯಲಲಿತಾ ಅವರಂತಹ ದಂತಕಥೆಗಳಲ್ಲಿ ತೆರೆ ಹಂಚಿಕೊಂಡಿದ್ದರು. 

ಇದನ್ನೂ ಓದಿ-Shiva Rajkumar: ಜೈಲರ್‌ ಯಶಸ್ಸಿನ ಬೆನ್ನಲ್ಲೆ ಶಿವಣ್ಣನ "ಘೋಸ್ಟ್‌" ಚಿತ್ರಕ್ಕೆ ತಮಿಳುನಾಡಿನಲ್ಲಿ ರೆಡ್‌ ಕಾರ್ಪೆಟ್‌ ವೆಲ್‌ಕಮ್‌!

ಇನ್ನು ಮೂಂಡ್ರು ಮುಡಿಚು ಚಿತ್ರದಲ್ಲಿನ ಶ್ರೀದೇವಿ ಅವರ ನಟನೆಗೆ ಚಿತ್ರರಂಗಕ್ಕೆ ಬೆರಾಗಾಗಿತ್ತು. ಈ ಸಿನಿಮಾ ಕುರಿತು ಒಂದು ಸಂದರ್ಶನದಲ್ಲಿ ಮಾತನಾಡುವಾಗ ನಟಿ, ತಮ್ಮ ಪಾತ್ರಕ್ಕೆ ಹಾಗೂ ರಜನಿ ಕಾಂತ್‌ ಅವರ ಪಾತ್ರಕ್ಕೆ ಸಿಕ್ಕ ಸಂಭಾವನೆ ಬಗ್ಗೆ ಹೇಳಿಕೊಂಡಿದ್ದರು. 

ಮೂಂಡ್ರು ಮುಡಿಚು ಚಿತ್ರದಲ್ಲಿ ಶ್ರೀದೇವಿ ಅವರು 5000, ರಜನಿಕಾಂತ್ ಮತ್ತು ಕಮಲ್ ಹಾಸನ್ ರೂ. 2000 ಗಳಷ್ಟು ಸಂಭಾವಣೆ ಪಡೆದಿದ್ದರಂತೆ. ಶ್ರೀದೇವಿ ಅವರು ಈ ಚಿತ್ರದಲ್ಲಿ ನಟರಿಂತಲೂ ಹೆಚ್ಚಿನ ಸಂಭಾವಣೆಯನ್ನು ಪಡೆದಿರುವ ಅನುಭವವನ್ನು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. 

ಇದನ್ನೂ ಓದಿ-ನಟಿ ಜಯಪ್ರದಾಗೆ 6 ತಿಂಗಳು ಜೈಲು ಶಿಕ್ಷೆ, 5 ಸಾವಿರ ದಂಡ ವಿಧಿಸಿದ ಕೋರ್ಟ್‌

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Read More