Home> Entertainment
Advertisement

Rashmika Mandanna: ಪುಷ್ಪ 2 ಶ್ರೀವಲ್ಲಿ ಫಸ್ಟ್ ಲುಕ್ ಲೀಕ್.. ಕೆಂಪು ಸೀರೆಯುಟ್ಟು ನಡು ರಸ್ತೆಯಲ್ಲಿ ಕಾಣಿಸಿಕೊಂಡ ರಶ್ಮಿಕಾ!! ವಿಡಿಯೋ ವೈರಲ್

Rashmika Mandanna Pushpa 2 Srivalli first look: ಅನಿಮಲ್‌ ಚಿತ್ರದ ಯಶಸ್ಸಿನ ನಂತರ ರಶ್ಮಿಕಾ ಮಂದಣ್ಣ ಅಲ್ಲು ಅರ್ಜುನ್ ಜೊತೆ ಪುಷ್ಪ 2 ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.. ಇದೀಗ ಈ ಚಿತ್ರದಲ್ಲಿನ ಶ್ರೀವಲ್ಲಿ ಫಸ್ಟ್ ಲುಕ್ ಲೀಕ್‌ ಆಗಿದ್ದು.. ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.. 

Rashmika Mandanna: ಪುಷ್ಪ 2 ಶ್ರೀವಲ್ಲಿ ಫಸ್ಟ್ ಲುಕ್ ಲೀಕ್.. ಕೆಂಪು ಸೀರೆಯುಟ್ಟು ನಡು ರಸ್ತೆಯಲ್ಲಿ ಕಾಣಿಸಿಕೊಂಡ ರಶ್ಮಿಕಾ!! ವಿಡಿಯೋ ವೈರಲ್

Rashmika Mandanna: ಅನಿಮಲ್‌ ಚಿತ್ರದ ಯಶಸ್ಸಿನ ನಂತರ ರಶ್ಮಿಕಾ ಮಂದಣ್ಣ ಈಗ ಅಲ್ಲು ಅರ್ಜುನ್ ಜೊತೆ ಪುಷ್ಪ 2 ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.. ನ್ಯಾಷನಲ್‌ ಕ್ರಷ್‌ ಅಭಿಮಾನಿಗಳು ಈ ಚಿತ್ರಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ.. ಇತ್ತೀಚೆಗೆ, ಚಿತ್ರದ ಸೆಟ್‌ನಿಂದ ವಿಡಿಯೋವೊಂದು ಸೋರಿಕೆಯಾಗಿದ್ದು, ಇದರಲ್ಲಿ ನಟಿ ರಶ್ಮಿಕಾ ಫುಲ್‌ ಟ್ರೆಡಿಷನಲ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ... ಶ್ರೀವಲ್ಲಿ ಪಾತ್ರ ಮೊದಲಿಗಿಂತ ಸ್ವಲ್ಪ ವಿಭಿನ್ನವಾಗಿರಲಿದೆ ಎಂಬುವುದು ಲೀಕ್‌ ಆಗಿರುವ ವಿಡಿಯೋದಿಂದ ತಿಳಿದುಬರುತ್ತಿದೆ.. 

'ಪುಷ್ಪ 2' ಸೆಟ್‌ಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಸೋರಿಕೆಯಾದ ಫೋಟೋಗಳು ಮತ್ತು ವೀಡಿಯೊಗಳು ಸಾಕಷ್ಟಿವೆ.. ಆದರೆ ಸದ್ಯ ಲೀಕ್‌ ಆಗಿರುವ ದೃಶ್ಯದಲ್ಲಿ ನಟಿ ರಶ್ಮಿಕಾ ಮಂದಣ್ಣ ಕೆಂಪು ಸೀರೆಯಲ್ಲಿ ಮೈತುಂಬ ಚಿನ್ನಾಭರಣಗಳನ್ನು ಹಾಕಿಕೊಂಡು ನಡುರಸ್ತೆಯಲ್ಲಿ ಓಡಾಡಿದ್ದಾರೆ.. ಇದನ್ನು ನೋಡಿದ ಅಭಿಮಾನಿಗಳು ಫುಲ್‌ ಖುಷ್‌ ಆಗಿದ್ದಾರೆ.. 

ಇದನ್ನೂ ಓದಿ-ಸಿಲ್ಕ್ ಸ್ಮಿತಾ ಸಾವಿಗೆ ʻಈ ವ್ಯಕ್ತಿʼಯೇ ಕಾರಣ.. ಖ್ಯಾತ ನಟಿಯಿಂದ ಬಟಾಬಯಲಾಯ್ತು ಇಷ್ಟು ವರ್ಷ ಬಚ್ಚಿಟ್ಟ ಸತ್ಯ!!

ಇನ್ನು ನಿರ್ದೇಶಕ ಸುಕುಮಾರ್ ಕಳೆದ ಕೆಲವು ತಿಂಗಳುಗಳಿಂದ 'ಪುಷ್ಪ 2' ಚಿತ್ರೀಕರಣದಲ್ಲಿ ತೊಡಗಿದ್ದರು. ವರದಿಗಳ ಪ್ರಕಾರ, ನಿರ್ಮಾಪಕರು ಈಗ ಚಿತ್ರವನ್ನು ಶೀಘ್ರದಲ್ಲೇ ಮುಗಿಸುವ ಆತುರದಲ್ಲಿದ್ದಾರೆ. 'ಪುಷ್ಪ 2' ಬಹು ಭಾಷೆಗಳಲ್ಲಿ 15 ಆಗಸ್ಟ್ 2024 ರಂದು ಥಿಯೇಟರ್‌ಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. 

ಅಲ್ಲು ಅರ್ಜುನ್ ಮತ್ತೊಮ್ಮೆ ಪುಷ್ಪರಾಜ್ ಆಗಿ ದೊಡ್ಡ ಪರದೆಯ ಮೇಲೆ ಕಾಣಿಸಿಕೊಳ್ಳುವುದನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಮೊದಲ ಭಾಗವಾದ 'ಪುಷ್ಪ: ದಿ ರೈಸ್' ನಲ್ಲಿ ಅಲ್ಲು ಅರ್ಜುನ್, ಫಹದ್ ಫಾಸಿಲ್ ಮತ್ತು ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಡಿಸೆಂಬರ್ 2021 ರಲ್ಲಿ ಬಿಡುಗಡೆಯಾದ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹಲವು ದಾಖಲೆಗಳನ್ನು ‌ಬ್ರೇಕ್‌ ಮಾಡಿತ್ತು.. 

ಇದನ್ನೂ ಓದಿ-Toxic: ಯಶ್‌ ಟಾಕ್ಸಿಕ್‌ ಸಿನಿತಂಡಕ್ಕೆ ಮತ್ತೊರ್ವ ಸೌತ್‌ ತಾರೆಯ ಸೇರ್ಪಡೆ: ಹಾಗಾದ್ರೇ ನಟಿ ಯಾರು?

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Read More