Home> Entertainment
Advertisement

SONG VIDEO: ಮತ್ತೊಮ್ಮೆ ಸಾಮಾಜಿಕ ಮಾಧ್ಯಮಗಳಲ್ಲಿ ಅಬ್ಬರಿಸಿದ ಪ್ರಭುದೇವಾ ಡಾನ್ಸ್ ವಿಡಿಯೋ

ವರುಣ್ ಧವನ್, ಶೃದ್ಧಾ ಕಪೂರ್ ಅಭಿನಯದ ಅವರ ಮುಂಬರುವ ಚಿತ್ರ 'ಸ್ಟ್ರೀಟ್ ಡ್ಯಾನ್ಸರ್ 3ಡಿ' ಚಿತ್ರದ 'ಮುಕಾಬಲಾ' ಹಾಡು ರಿಲೀಸ್ ಆಗಿದೆ. ಇದರಲ್ಲಿ ಮತ್ತೊಮ್ಮೆ ಪ್ರಭುದೇವಾ ಅವರ ಅಲ್ಟಿಮೇಟ್ ಡಾನ್ಸ್ ಅವರ ಅಭಿಮಾನಿಗಳನ್ನು ನಿಬ್ಬೇರಗಾಗಿಸಿದೆ.

SONG VIDEO: ಮತ್ತೊಮ್ಮೆ ಸಾಮಾಜಿಕ ಮಾಧ್ಯಮಗಳಲ್ಲಿ ಅಬ್ಬರಿಸಿದ ಪ್ರಭುದೇವಾ ಡಾನ್ಸ್ ವಿಡಿಯೋ

ನವದೆಹಲಿ: ಭಾರತೀಯ ಮೈಕಲ್ ಜಾಕ್ಸನ್ ಎಂದೇ ಖ್ಯಾತರಾಗಿರುವ ಪ್ರಭುದೇವಾ ಅವರ ಡಾನ್ಸ್ ನ ಒಂದೊಂದು ನಡೆ ಯುವ ಡಾನ್ಸರ್ ಗಳ ಪಾಲಿಗೆ ಐಡಲ್ ಎಂದೇ ಹೇಳಲಾಗುತ್ತದೆ. ಹಲವಾರು ವರ್ಷಗಳ ಬಳಿಕವೂ ಅವರ 'ಮುಕಾಬಲಾ' ಈ ಹಾಡು ಪಾರ್ಟಿಗಳಲ್ಲಿ ಜೀವ ತುಂಬುತ್ತದೆ. ಹೀಗಿರುವಾಗ ಇದೀಗ ಮತ್ತೊಮ್ಮೆ ಪ್ರಭುದೇವಾ ತಮ್ಮ ಹಳೆ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹೌದು, ಅವರ ಮುಂಬರುವ ಚಿತ್ರ 'ಸ್ಟ್ರೀಟ್ ಡ್ಯಾನ್ಸರ್ 3ಡಿ'ನ ಅದ್ದೂರಿಯಾಗಿ ಚಿತ್ರಿಸಲ್ಪಟ್ಟ 'ಮುಕಾಬಲಾ' ಹಾಡು ಸದ್ಯ ಬಿಡುಗಡೆಯಾಗಿದೆ. ಇದರಲ್ಲಿ ನಿಮಗೆ ಮತ್ತೊಮ್ಮೆ ತಮ್ಮ ಅಲ್ಟಿಮೇಟ್ ಡಾನ್ಸ್ ಪ್ರದರ್ಶಿಸಿರುವ ಪ್ರಭುದೇವಾ, ತನ್ನ ಅಭಿಮಾನಿಗಳನ್ನು ನಿಬ್ಬೇರಗಾಗಿ ನೋಡುವಂತೆ ಮಾಡಿದ್ದಾರೆ.

ಇತ್ತೀಚೆಗಷ್ಟೇ ಈ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ನೆಟ್ಟಿಗರ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ. ಇದೀಗ 'ಮುಕಾಬಲಾ' ಡಾನ್ಸ್ ವಿಡಿಯೋ ಬಿಡುಗಡೆಯಾಗಿದ್ದು, ಎಲ್ಲರನ್ನು ಆಶ್ಚರ್ಯಕ್ಕೆ ಈಡು ಮಾಡಿದೆ. ಈ ಹಾಡು ಈ ಚಿತ್ರದಲ್ಲಿ ಮುಖ್ಯಬೂಮಿಕೆಯಲ್ಲಿರುವ ವರುಣ್ ಧವನ್ ಅವರ ಮೇಲೆ ಚಿತ್ರೀಕರಿಸಲಾಗಿಲ್ಲ. ಈ ಹಾಡಿನ ಒರಿಜಿನಲ್ ಸ್ಟಾರ್ ಪ್ರಭುದೇವಾ ಅವರ ಮೇಲೆ ಇದನ್ನು ಪುನಃ ಚಿತ್ರೀಕರಿಸಲಾಗಿರುವುದು ಇಲ್ಲಿ ವಿಶೇಷ. ಈ ಹಾಡಿನಲ್ಲಿ ಪ್ರಭುದೇವಾ ಅವರ ಅಸಿಸ್ಟೆಂಟ್ ಆಗಿ ವರುಣ್ ಹೆಜ್ಜೆ ಹಾಕಿದ್ದಾರೆ.

ಈ ಹಾಡು 1994ರಲ್ಲಿ ಬಿಡುಗಡೆಗೊಂಡ ತಮಿಳ್ ಚಿತ್ರ 'ಕಾದಲನ್' ಚಿತ್ರದ್ದಾಗಿದ್ದು, ಈ ಚಿತ್ರವನ್ನು ಹಿಂದಿಯಲ್ಲಿ 'ಹಮ್ ಸೆ ಹೈ ಮುಕಾಬಲಾ' ಶೀರ್ಷಿಕೆ ಅಡಿ ಬಿಡುಗಡೆಗೊಳಿಸಲಾಗಿತ್ತು. ಈ ಚಿತ್ರದ ಬಹುತೇಕ ಹಾಡುಗಳಿಗೆ ಅಭಿಮಾನಿಗಳಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಈ ಚಿತ್ರದಲ್ಲಿ ಪ್ರಭುದೇವಾ ಪ್ರಮುಖ ಭೂಮಿಕೆಯಲ್ಲಿದ್ದರು. ಹಾಗೂ ಇದೇ ಚಿತ್ರದ ಮೂಲಕ ಪ್ರಭುದೇವಾ ಅವರಿಗೆ ಬಾಲಿವುಡ್ ನಲ್ಲಿ ಭಾರೀ ಮನ್ನಣೆ ದೊರೆತಿತ್ತು.

ಖ್ಯಾತ ಕೊರಿಯೋಗ್ರಾಫಾರ್ ಹಾಗೂ ನೃತ್ಯ ನಿರ್ದೇಶಕ ರೆಮೋ ಡಿಸೋಜಾ 'ಸ್ಟ್ರೀಟ್ ಡ್ಯಾನ್ಸರ್ 3 ಡಿ' ನಿರ್ದೇಶಿಸಿದ್ದು, ಟಿ-ಸೀರೀಜ್ ಬ್ಯಾನರ್ ಅಡಿ ನಿರ್ಮಾಣಗೊಳ್ಳುತ್ತಿರುವ ಈ ಚಿತ್ರ ಜನವರಿ 24, 2020ಕ್ಕೆ ಬಿಡುಗಡೆಯಾಗುತ್ತಿದೆ.

Read More