Home> Entertainment
Advertisement

ಹನಿಮೂನ್‌ನಿಂದ ಬಂದ ಕಿಯಾರಾ ನೋಡಿ ಬೇಜಾರಾದ ಪ್ಯಾನ್ಸ್‌..! ಏಕೆ ಗೊತ್ತಾ..?

ಬಿಟೌನ್‌ ನವ ಜೋಡಿ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ತಮ್ಮ ಹನಿಮೂನ್‌ನಿಂದ ಹಿಂತಿರುಗಿದ್ದಾರೆ. ನಿನ್ನೆ ಸಂಜೆ ಶೇರ್ಷಾ ದಂಪತಿಗಳು ವಿಮಾನ ನಿಲ್ದಾಣದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇನ್ನು ಕಿಯಾರಾ ನೋಡಿದ ಅವರ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಮದುವೆಯ ನಂತರವೂ ಕಿಯಾರಾ ಹಣೆಯಲ್ಲಿ ಕುಂಕುಮ, ಕೊರಳಲ್ಲಿ ತಾಳಿ ಇಲ್ಲದ್ದನ್ನು ಕಂಡ ಅವರ ಅಭಿಮಾನಿಗಳು ಬೇಜಾರಾಗಿದ್ದಾರೆ.

ಹನಿಮೂನ್‌ನಿಂದ ಬಂದ ಕಿಯಾರಾ ನೋಡಿ ಬೇಜಾರಾದ ಪ್ಯಾನ್ಸ್‌..! ಏಕೆ ಗೊತ್ತಾ..?

Kiara Advani Sidharth Malhotra : ಬಿಟೌನ್‌ ನವ ಜೋಡಿ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ತಮ್ಮ ಹನಿಮೂನ್‌ನಿಂದ ಹಿಂತಿರುಗಿದ್ದಾರೆ. ನಿನ್ನೆ ಸಂಜೆ ಶೇರ್ಷಾ ದಂಪತಿಗಳು ವಿಮಾನ ನಿಲ್ದಾಣದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇನ್ನು ಕಿಯಾರಾ ನೋಡಿದ ಅವರ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಮದುವೆಯ ನಂತರವೂ ಕಿಯಾರಾ ಹಣೆಯಲ್ಲಿ ಕುಂಕುಮ, ಕೊರಳಲ್ಲಿ ತಾಳಿ ಇಲ್ಲದ್ದನ್ನು ಕಂಡ ಅವರ ಅಭಿಮಾನಿಗಳು ಬೇಜಾರಾಗಿದ್ದಾರೆ.

ಇನ್ನು ಕಿಯಾರಾ ಗೋಲ್ಡನ್ ಸ್ಲಿಂಗ್ ಬ್ಯಾಗ್‌ ಹಿಡಿದುಕೊಂಡು ಬಿಳಿ ಪ್ಯಾಂಟ್‌ ಧರಿಸಿ ಸಿದ್ಧಾರ್ಥ ಕೈ ಹಿಡಿದು ವಿಮಾನ ನಿಲ್ದಾಣದಿಂದ ಹೊರ ಬರುವಾಗ ಫುಲ್‌ ಜೋಷ್‌ನಲ್ಲಿದ್ದರು. ಪಾಪಾಜಿಗಳ ಕ್ಯಾಮಾರಾದ ಕಣ್ಣುಗಳಲ್ಲಿ ಕಿಯಾರಾ ಸಖತ್‌ ಹಾಟ್‌ ಆಗಿ ಕಾಣಿಸಿಕೊಂಡಿದ್ದಾರೆ. ಈ ಕುರಿತ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ವಿಡಿಯೋ ನೋಡಿದ ನೆಟ್ಟಿಗರು ಹಣೆಯಲ್ಲಿ ಸಿಂಧೂರ, ಕೊರಳಲ್ಲಿ ತಾಳಿ ಇಲ್ಲದ್ದನ್ನು ಕಂಡು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ʼತಪ್ಪು ತಿಳಿಬೇಡಿ..ʼ ರಿಷಬ್‌ಗೆ ಸಿಕ್ಕಿದ್ದು, ಅಣ್ಣಾವ್ರಿಗೆ ಸಿಕ್ಕ ʼದಾದಾ ಸಾಹೇಬ್‌ ಪಾಲ್ಕೆʼ ಅಲ್ಲ..!

ಅಲ್ಲದೆ, ಈ ಕುರಿತು ಸಾಲು ಸಾಲು ಕಾಮೆಂಟ್‌ ಮಾಡಿರುವ ನೆಟ್ಟಿಗರು ಕನಿಷ್ಠ ಒಂದು ತಿಂಗಳಾದರೂ ಸಂಪ್ರದಾಯ ಪಾಲನೆ ಮಾಡುವ ನಿರೀಕ್ಷೆ ಇತ್ತು ಅಂತ ಕಾಮೆಂಟ್‌ ಮಾಡಿದ್ದಾರೆ. ಅಲ್ಲದೆ, ನಟಿ ತನ್ನ ನಿಶ್ಚಿತಾರ್ಥದ ಉಂಗುರವನ್ನು ಸಹ ಧರಿಸಿಲ್ಲ ಅಂತ ಕೆಲವರು ಟೀಕೆ ಮಾಡಿದ್ದಾರೆ. ಒಬ್ಬ ನೆಟ್ಟಿಗರು, ಮದುವೆಯ ನಂತರ ಬಿಳಿ ಬಟ್ಟೆ ಹಾಗೂ ಭಾರತೀಯ ಸಂಸ್ಕೃತಿಯ ಉಡುಪು ಧರಿಸುವುದು ಒಂದು ರೀತಿಯ ಆಫ್ ಆಗಿದೆ. ಕ್ರಿಶ್ಚಿಯನ್ನರು ಸಹ ತಮ್ಮ ಮದುವೆಯ ಉಂಗುರಗಳನ್ನು ಶಾಶ್ವತವಾಗಿ ಧರಿಸುತ್ತಾರೆ. ಭಾರತೀಯರು ಪಾಶ್ಚಿಮಾತ್ಯ ಸಂಪ್ರದಾಯ ಪಾಲನೆ ಮಾಡುತ್ತಿದ್ದಾರೆ ಅಂತ ಕುಟುಕಿದ್ದಾರೆ.

ಸಿದ್ಧಾರ್ಥ್ ಮಲ್ಹೋತ್ರಾ ನೇರಳೆ ಬಣ್ಣದ ಟೀ-ಶರ್ಟ್ ಮತ್ತು ಬಿಳಿ ಪ್ಯಾಂಟ್‌ನಲ್ಲಿ ಮಿಂಚುತ್ತಿದ್ದರು. ಕಿಯಾರಾ ಫುಲ್‌ ವೈಟ್‌ ಕಲರ್‌ ಬಟ್ಟೆ ತೊಟ್ಟಿದ್ದು, ಒಂದು ಗೋಲ್ಡನ್‌ ಕಲರ್‌ ಬ್ಯಾಗ್‌ ಧರಿಸಿದ್ದರು. ಪಾಪರಾಜಿಗಳ ಕ್ಯಾಮರಾದಲ್ಲಿ ಈ ನಜ ಜೋಡಿಗಳ ಸುಂದರ ಫೋಟೋಗಳು ಸೆರೆಯಾಗಿವೆ. ಸಿದ್ಧಾರ್ಥ್ ಮತ್ತು ಕಿಯಾರಾ ಮಾಧ್ಯಮದ ಧನ್ಯವಾದ ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More