Home> Entertainment
Advertisement

Sidharth-Kiara Affair: ಮದುವೆಗೂ ಮುನ್ನ ಕಿಯಾರಾ ಜೊತೆಗೆ ಈ ಕೆಲಸ ಮಾಡಲಿದ್ದಾರಂತೆ ಸಿದ್ಧಾರ್ಥ್!

Sidharth Kiara Affair: ಕಾಫಿ ವಿಥ್ ಕರಣ್ ಕಾರ್ಯಕ್ರಮದ ಹೊಸ ಪ್ರೊಮೊದಲ್ಲಿ ಖ್ಯಾತ ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೊತ್ರಾ ಹೊಸ ಮಾಹಿತಿಯೊಂದನ್ನು ಬಹಿರಂಗಪಡಿಸಿದ್ದಾರೆ. ತಾವು ಕಿಯಾರಾ ಜೊತೆಗೆ ಡೇಟ್ ನಡೆಸುತ್ತಿರುವುದಾಗಿ ಅವರು ಒಪ್ಪಿಕೊಂಡಿದ್ದಾರೆ. ಈ ಪ್ರೊಮೊ ಬಿಡುಗಡೆಯಾದ ಕೆಲವೇ ಸಮಯದ ಬಳಿಕ ಕಿಯಾರಾ ಹಾಗೂ ಸಿದ್ಧಾರ್ಥ್ ಸಂಬಂಧಕ್ಕೆ ಸಂಬಂಧಿಸಿದಂತೆ ಗುಡ್ ನ್ಯೂಸ್ ವೊಂದು ಪ್ರಕಟಗೊಂಡಿದೆ.
 

Sidharth-Kiara Affair: ಮದುವೆಗೂ ಮುನ್ನ ಕಿಯಾರಾ ಜೊತೆಗೆ ಈ ಕೆಲಸ ಮಾಡಲಿದ್ದಾರಂತೆ ಸಿದ್ಧಾರ್ಥ್!

Sidharth Kiara New Romantic Film Before Marriage: 'ಷೇರ್ ಶಾಹ್' ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಸಿದ್ಧಾರ್ಥ್ ಮಲ್ಹೊತ್ರಾ ಹಾಗೂ ಕಿಯಾರಾ ಅಡ್ವಾಣಿ ತಮ್ಮದೇ ಆದ ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ವರದಿಗಳನ್ನು ನಂಬುವುದಾದರೆ ಉಭಯ ತಾರೆಯರು ಪರಸ್ಪರ ಡೇಟ್ ಕೂಡ ನಡೆಸುತ್ತಿದ್ದಾರೆ ಎನ್ನಲಾಗಿದೆ. ಕೆಲ ದಿನಗಳ ಹಿಂದೆಯೇ ಸಿದ್ಧಾರ್ಥ್, ಕಿಯಾರಾ ಜೊತೆಗಿನ ತಮ್ಮ ಸಂಬಂಧವನ್ನು ಬಹಿರಂಗಪಡಿಸಿದ್ದಾರೆ. ಆದರೆ, ಇದೀಗ ಈ ಜೋಡಿಗೆ ಸಂಬಂಧಿಸಿದ ಗುಡ್ ನ್ಯೂಸ್ ವೊಂದು ಮುನ್ನೆಲೆಗೆ ಬಂದಿದೆ. ಮದುವೆಗೂ ಮುನ್ನ ಸಿದ್ಧಾರ್ಥ್, ಕಿಯಾರಾ ಜೊತೆಗೆ ಕೆಲಸವೊಂದನ್ನು ಮಾಡಲು ಬಯಸಿದ್ದು, ಇದರಿಂದ ಅವರ ಅಭಿಮಾನಿ ಬಳಗ ಕೂಡ ಸಾಕಷ್ಟು ಸಂತಸ ವ್ಯಕ್ತಪಡಿಸುತ್ತಿದೆ. ಬನ್ನಿ ಈ ಕುರಿತು ವಿಸ್ತೃತವಾಗಿ ತಿಳಿದುಕೊಳ್ಳೋಣ,

ಕಿಯಾರಾ ಜೊತೆಗಿನ ತಮ್ಮ ಸಂಬಂಧ ಒಪ್ಪಿಕೊಂಡ ಸಿದ್ಧಾರ್ಥ್

ಇತ್ತೀಚೆಗಷ್ಟೇ 'ಕಾಫಿ ವಿಥ್ ಕರಣ್‌' ಕಾರ್ಯಕ್ರಮದ ಹೊಸ ಸಂಚಿಕೆಯ ಪ್ರೋಮೋ ಬಿಡುಗಡೆಯಾಗಿದೆ. ಈ ಪ್ರೋಮೋದಲ್ಲಿ, ಕರಣ್, ಪ್ರಸ್ತುತ ನೀವು ಕಿಯಾರಾ ಜೊತೆಗೆ ಡೇಟ್ ಮಾಡುತ್ತಿರುವಿರಿ. ಮದುವೆಯ ಕುರಿತು ಯಾವ ಸಿದ್ಧತೆಗಳು ನಡೆದಿವೆ? ಎಂದು ಪ್ರಶ್ನಿಸಿದ್ದಾರೆ. ಆಗ,  ಸಿದ್ಧಾರ್ಥ್ ಅದನ್ನು ನೇರವಾಗಿ ಅಲ್ಲಗಳೆದಿಲ್ಲ ಮತ್ತು ಕಾರ್ಯಕ್ರಮದ ಮಂಚದ ಮೇಲೆ ಈ ವಿಷಯವನ್ನು ನಾನು 'ಮ್ಯಾನಿಫೆಸ್ಟ್' ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ. ಬಳಿಕ ಕರಣ್ ನೀವು ಮದುವೆಯನ್ನು 'ಮ್ಯಾನಿಫೆಸ್ಟ್' ಮಾಡುತ್ತಿರುವಿರಾ? ಎಂದು ಮರುಪ್ರಶ್ನಿಸಿದ್ದಾರೆ. ಈ ಸಂದರ್ಭದಲ್ಲಿ ಮುಗುಳುನಗೆಯನ್ನು ಬೀರಿ ತನಗೆ ಏನೂ ಕೇಳಿಸಿಯೇ ಇಲ್ಲ ಎಂಬಂತೆ ಸಿದ್ಧಾರ್ಥ್ ನಟಿಸಿದ್ದಾರೆ.

ಇದನ್ನೂ ಓದಿ-ಪವನ್ ಒಡೆಯರ್ ನಿರ್ಮಾಣದ ‘ಡೊಳ್ಳು’ ಸಿನಿಮಾದ ಮೊದಲ ಹಾಡು ಅನಾವರಣ…

ಸಿದ್ಧಾರ್ಥ್ ಮಲ್ಹೊತ್ರಾ ಹಾಗೂ ಕಿಯಾರಾ ಕುರಿತು ಮುನ್ನೆಲೆಗೆ ಬಂದಿರುವ ಗುಡ್ ನ್ಯೂಸ್ ಇದು
ಈ ಪ್ರೊಮೊ ಬಿಡುಗಡೆಯಾದ ಕೆಲ ಸಮಯದ ಬಳಿಕ ಕೆಲ ವರದಿಗಳು ಕೇಳಿಬಂದಿದ್ದು, 'ಷೇರಶಾಹ್' ಚಿತ್ರದ ಬಳಿಕ ಇದೀಗ ಕಿಯಾರಾ ಅಡ್ವಾಣಿ ಹಾಗೂ ಸಿದ್ಧಾರ್ಥ್ ಮಲ್ಹೊತ್ರಾ ಹೊಸ ಚಿತ್ರವೊಂದರಲ್ಲಿ ಮತ್ತೆ ತೆರೆ ಹಂಚಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ವರದಿಗಳ ಪ್ರಕಾರ, ಕಿಯಾರಾ ಹಾಗೂ ಸಿದ್ಧಾರ್ಥ್ 'ಅದಲ್ ಬದಲ್' ಹೆಸರಿನ ಬಾಲಿವುಡ್ ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಈ ಚಿತ್ರದಲ್ಲಿ ಕಿಯಾರಾ ಹಾಗೂ ಸಿದ್ಧಾರ್ಥ್ ಆತ್ಮಗಳು ಪರಸ್ಪರ ದೇಹಬದಲಿಸುತ್ತವೆ ಎನ್ನಲಾಗುತ್ತಿದೆ. ಸುನೀಲ್ ಖೆತರ್ ಪಾಲ್ ಅವರು ಈ ಚಿತ್ರದ ನಿರ್ಮಾಣದ ಹೊಣೆಯನ್ನು ಹೊರಲಿದ್ದಾರೆ ಎನ್ನಲಾಗಿದೆ. 

ಇದನ್ನೂ ಓದಿ-‘ಕೋದಂಡರಾಮ’ನಿಗಾಗಿ ಒಟ್ಟಾಗುತ್ತಿದೆ ಸಿನಿರಂಗ: ಶಿವಣ್ಣ-ರವಿಮಾಮ ಬರ್ತ್ ಡೇಗೆ ನಡೀತಿದೆ ಸಿದ್ಧತೆ

ಇತ್ತೀಚೆಗಷ್ಟೇ 'ಷೇರ್ ಶಾಹ್' ಚಿತ್ರ ಬಿಡುಗಡೆಯಾಗಿ ಒಂದು ವರ್ಷ ಪೂರ್ಣಗೊಂಡಿದೆ. ಇನ್ಸ್ಟಾಗ್ರಾಮ್ ನಲ್ಲಿ ಲೈವ್ ಬರುವ ಮೂಲಕ ಉಭಯ ತಾರೆಯರು ಅದನ್ನು ಆಚರಿಸಿದ್ದರು. ಕಿಯಾರ ಹುಟ್ಟುಹಬ್ಬವನ್ನು ಕೂಡ ಇಬ್ಬರು ದುಬೈ ತೆರಳಿ ಆಚರಿಸಿರುವುದು ಇಲ್ಲಿ ಉಲ್ಲೇಖನೀಯ.

 
 
 
 

 
 
 
 
 
 
 
 
 
 
 

A post shared by Karan Johar (@karanjohar)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More