Home> Entertainment
Advertisement

ಗೋವಾದಲ್ಲಿ ಸದ್ದಿಲ್ಲದೇ ಶುರುವಾದ ಯಶ್‌ ಸಿನಿಮಾ ಶೂಟಿಂಗ್‌..! 60ರ ಕಾಲಘಟ್ಟದ ರಷ್ಯನ್‌ ಡ್ರಗ್ಸ್‌ ಮಾಫಿಯಾ ವಿರುದ್ಧ ಟಕ್ಕರ್‌

Rocking Star Yash New Movie Updates : ರಾಕಿಂಗ್‌ ಸ್ಟಾರ್‌ ಯಶ್‌ ಅವರ ಸಿನಿಮಾ ಬಗ್ಗೆ ಇನ್ನೂ ಅಧಿಕೃತವಾಗಿ ಘೋಷಣೆಯಾಗಿಲ್ಲ. ಆದರೆ ಸದ್ಯ ಅವರ ಮುಂದಿನ ಚಿತ್ರದ ಬಗ್ಗೆ ಸದ್ಯ ಬಿಗ್‌ ಅಪ್‌ಡೇಟ್‌ ಒಂದು ಹೊರಬಿದ್ದಿದೆ. 
 

ಗೋವಾದಲ್ಲಿ ಸದ್ದಿಲ್ಲದೇ ಶುರುವಾದ ಯಶ್‌ ಸಿನಿಮಾ ಶೂಟಿಂಗ್‌..! 60ರ ಕಾಲಘಟ್ಟದ ರಷ್ಯನ್‌ ಡ್ರಗ್ಸ್‌ ಮಾಫಿಯಾ ವಿರುದ್ಧ ಟಕ್ಕರ್‌

Rocking Star Yash : ಕೆಜಿಎಫ್‌ ಸಿನಿಮಾ ಸರಣಿಯ ಗೆಲುವಿನ ಬಳಿಕ ಯಶ್‌ ಮುಂದಿನ ಸಿನಿಮಾ ಬಗೆಗಿನ ಅಪ್‌ಡೇಟ್ಸ್‌ಗಾಗಿ ಸಿನಿಪ್ರಿಯರು ಕಾತುರದಿಂದ ಕಾಯುತ್ತಿದ್ದಾರೆ. ಇವರ ಮೇಲೆ ಸದ್ಯ ಇಡೀ ಭಾರತ ಕಣ್ಣಿಟ್ಟಿದೆ. ಸದ್ಯ ಇವರ ಸಿನಿಮಾ ಬಗ್ಗೆ ಸುದ್ದಿಯೊಂದು ಹರಿದಾಡುತ್ತಿದೆ. 

ಹೌದು ಯಶ್‌ ಸಿನಿಮಾ ಶೂಟಿಂಗ್‌ ಸದ್ಯ ಗೋವಾದಲ್ಲಿ ಭರ್ಜರಿಯಾಗಿ ನಡೆಯುತ್ತಿದ್ದು, ರಷ್ಯನ್‌ ಡ್ರಗ್ಸ್‌ ಮಾಫಿಯಾ ಜತೆಗೆ ಸೆಣಸಾಟದ ಕಥಾಹಂದರವನ್ನು ಈ ಚಿತ್ರ ಒಳಗೊಂಡಿದೆ ಎನ್ನಲಾಗುತ್ತಿದೆ. ಇನ್ನು ಈ ಸಿನಿಮಾಗೆ ನಿರ್ಮಾಣದಲ್ಲಿ ಸ್ವತಃ ಯಶ್‌ ಕೈಜೋಡಿಸಿದ್ದಾರೆ ಎನ್ನಲಾಗುತ್ತಿದೆ. 

ಇದನ್ನೂ ಓದಿ-ಜೈಲರ್ ಬ್ಲಾಕ್ ಬಸ್ಟರ್ ಹಿಟ್, ಚಿತ್ರತಂಡಕ್ಕೆ ಸಿಕ್ತು ಭರ್ಜರಿ ಉಡುಗೊರೆ

ಅಲ್ಲದೇ ಈ ಸಿನಿಮಾ ಕೆಜಿಎಫ್‌ನಂತೆಯೇ ಆಕ್ಷನ್ ಥ್ರಿಲ್ಲರ್ ಶೈಲಿಯಲ್ಲಿ ಮೂಡಿಬರಲಿದ್ದು, ಕೆಲವು ಮೂಲಗಳ ಪ್ರಕಾರ ಯಶ್‌ ಸಹ ನಿರ್ಮಾಪಕರಲ್ಲಿ ಒಬ್ಬರಾಗಿದ್ದಾರಂತೆ. ಇನ್ನು ಒಟ್ಟು 100 ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಲಿದೆ ಮತ್ತು ಈ ಚಿತ್ರದಲ್ಲಿ ಯಶ್‌ಗೆ ನಾಯಕಿಯಾಗಿ ಸಂಯುಕ್ತ ಮೆನನ್‌ ನಟಿಸಲಿದ್ದಾರೆ ಎನ್ನಲಾಗುತ್ತಿದೆ. 

ಇದೆಲ್ಲವನ್ನು ಹೊರತುಪಡಿಸಿ ಯಶ್‌ ಮಲಯಾಳಂ ಸಿನಿಮಾ ನಿರ್ದೇಶಕಿ ಗೀತು ಮೋಹನ್‌ದಾಸ್‌ ಅವರ ಜೊತೆ ಕೈ ಜೋಡಿಸಿದ್ದಾರೆ ಎನ್ನುವ ವದಂತಿ ಜೋರಾಗಿಯೇ ಹರಿದಾಡುತ್ತಿದೆ. 

ಇದನ್ನೂ ಓದಿ-ಜವಾನ್‌ 4ನೇ ದಿನ : ವಾರಾಂತ್ಯದಲ್ಲಿ ಹೇಗಿತ್ತು ಬಾಕ್ಸ್‌ ಆಫೀಸ್‌ ಕಲೆಕ್ಷನ್‌

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More