Home> Entertainment
Advertisement

ʼಜವಾನ್ʼಗೆ ಶಾಕ್..! ಇಂಟರ್‌ನೆಟ್‌ನಲ್ಲಿ ಶಾರುಖ್ ನ್ಯೂ ಸಿನಿಮಾದ ಕ್ಲಿಪ್ಸ್ ಲೀಕ್‌..!

Jawan Clips leaked in online : ಶಾರುಖ್‌ ಖಾನ್‌ ಅಭಿನಯದ ಬಹುನಿರೀಕ್ಷಿತ 'ಜವಾನ್' ಸಿನಿಮಾ ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಿಸುತ್ತಿದೆ. ಈ ನಡುವೆ ಈ ಚಿತ್ರದ ವಿಡಿಯೋ ತುಣುಕುಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗಿದ್ದು, ಆ ಕ್ಲಿಪ್‌ಗಳನ್ನು ಹಂಚಿಕೊಂಡಿರುವರಿಗೆ ಮುಂಬೈ ಪೊಲೀಸರು ಲೀಗಲ್ ನೋಟಿಸ್ ಕಳುಹಿಸಿದ್ದಾರೆ.
 

ʼಜವಾನ್ʼಗೆ ಶಾಕ್..! ಇಂಟರ್‌ನೆಟ್‌ನಲ್ಲಿ ಶಾರುಖ್ ನ್ಯೂ ಸಿನಿಮಾದ ಕ್ಲಿಪ್ಸ್ ಲೀಕ್‌..!

Jawan : ಅಟ್ಲಿ ನಿರ್ದೇಶನದಡಿಯಲ್ಲಿ ಮೂಡಿ ಬರುತ್ತಿರುವ ಜವಾನ್‌ ಸಿನಿಮಾ ಘೋಷಣೆ ಆದಾಗಿನಿಂದಲೂ ಇಲ್ಲಿಯವರೆಗೂ ಯಾವುದೇ ಹಿಂಟ್‌ ಬಿಟ್ಟುಕೊಡದೇ ರೆಡಿಯಾಗುತ್ತಿದೆ. ಅಭಿಮಾನಿಗಳಿಗೆ ಸಖತ್‌ ಕ್ರೇಜ್‌ ಹೆಚ್ಚಿಸುತ್ತಿದೆ. ಪಠಾನ್‌ ನಂತರ ಕಿಂಗ್‌ ಖಾನ್‌ ಅವರನ್ನು ಮತ್ತೇ ದೊಡ್ಡ ಪರದೆ ಮೇಲೆ ನೋಡಲು ಫ್ಯಾನ್ಸ್‌ ಕಾಯುತ್ತಿದ್ದಾರೆ. 

ಜವಾನ್‌ ಚಿತ್ರದ ಕ್ಲಿಪ್ಸ್‌ ಸೋರಿಕೆ

'ಜವಾನ್' ನಿರ್ಮಾಪಕರು ಪೋಸ್ಟರ್‌ಗಳು ಮತ್ತು ಹಾಡುಗಳ ಮೂಲಕ ಕುತೂಹಲವನ್ನು ಕೆರಳಿಸುತ್ತಿದ್ದಂತೆ, ಚಿತ್ರದ ಕೆಲವು ತುಣುಕುಗಳು ಆನ್‌ಲೈನ್‌ನಲ್ಲಿ ಲೀಕ್ ಆಗಿವೆ. ಇದನ್ನು ತಿಳಿದ ಚಿತ್ರತಂಡ ಹಾಗೂ ಅಭಿಮಾನಿಗಳು ಆಘಾತಕ್ಕೊಳಗಾಗಿದ್ದಾರೆ. ಹೌದು ಶಾರುಖ್ ಖಾನ್ ಅವರ ಮುಂಬರುವ ಚಿತ್ರ 'ಜವಾನ್' ಕ್ಲಿಪ್‌ಗಳನ್ನು ಕದ್ದು ಟ್ವಿಟರ್‌ನಲ್ಲಿ ಅಪ್‌ಲೋಡ್ ಮಾಡಲಾಗಿದ್ದು, ಅವುಗಳು ವೈರಲ್ ಆಗಿವೆ.

ಇದನ್ನೂ ಓದಿ-ನಟ ಉಪೇಂದ್ರ ವಿರುದ್ದ 'ಅಟ್ರಾಸಿಟಿ ಕೇಸ್‌' ದಾಖಲು

ಇನ್ನು ಈ ಕುರಿತು ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ ದೂರು ನೀಡಿದ್ದು, ಸಾಂತಾಕ್ರೂಜ್ ಪೊಲೀಸ್ ಠಾಣೆಯು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದೆ. ಚಿತ್ರೀಕರಣದ ಸಮಯದಲ್ಲಿ ಹಾಗೂ ಚಲನಚಿತ್ರವನ್ನು ಚಿತ್ರೀಕರಿಸಿದ ಸ್ಥಳದಲ್ಲಿ ಮೊಬೈಲ್ ಫೋನ್ ಅಥವಾ ಇತರ ಯಾವುದೇ ರೆಕಾರ್ಡಿಂಗ್ ಸಾಧನಗಳನ್ನು ನಿಷೇಧಿಸಲಾಗಿತ್ತು. ಆದರೂ ಕ್ಲಿಪ್‌ಗಳು ಲೀಕ್‌ ಆಗಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ. 

ಸದ್ಯ ಚಿತ್ರದ ಕ್ಲಿಪ್‌ಗಳನ್ನು ಹಂಚಿಕೊಂಡಿರುವ ಐದು ಟ್ವಿಟರ್ ಹ್ಯಾಂಡಲ್‌ಗಳಿಗೆ ಲೀಗಲ್ ನೋಟಿಸ್ ಕಳುಹಿಸಲಾಗಿದ್ದು, ಐಪಿಸಿ ಸೆಕ್ಷನ್‌ (379) ಕಳ್ಳತನ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ 43 (ಬಿ) ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. 

ಇದನ್ನೂ ಓದಿ-Jailer: ನಿಲ್ಲದ ಜೈಲರ್‌ ಆರ್ಭಟ, ಪಾರ್ಟ್‌ 2ಕ್ಕೆ ಶಿವಣ್ಣನೇ ಬೇಕೆಂದ ತಮಿಳು ಮಂದಿ; ಕನ್ನಡಿಗರಿಗೆ ಇದೇ ಸಾರ್ಥಕಕ್ಷಣವೆಂದ ಫ್ಯಾನ್ಸ್‌

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Read More