Home> Entertainment
Advertisement

ನಿಖಿಲ್ ಕುಮಾರ್ ಹೊಸ ಸಿನಿಮಾ ಸೆಟ್ ನಲ್ಲಿ ಕಾಣಿಸಿಕೊಂಡ ಶಿವರಾಜ್ ಕುಮಾರ್!!

Shivarajkumar met Nikhil Kumaraswamy: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಯು ಎಸ್ ಪ್ರವಾಸ ಮುಗಿಸಿ ಇತ್ತೀಚಿಗಷ್ಟೇ ಬಂದಿದ್ದು ವಿದೇಶದಿಂದ ಬಂದ ನಂತರ ನಟ ನಿಖಿಲ್ ಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ. ಬೆಂಗಳೂರಿನಲ್ಲಿ ನಟ ನಿಖಿಲ್ ಕುಮಾರ್ ಅವರ ಹೊಸ ಸಿನಿಮಾದ ಚಿತ್ರೀಕರಣ ನೆಡೆಯುತ್ತಿದ್ದು, ಸಿನಿಮಾ ಸೆಟ್ ಗೆ ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಭೇಟಿಕೊಟ್ಟಿದ್ದಾರೆ.
 

ನಿಖಿಲ್ ಕುಮಾರ್ ಹೊಸ ಸಿನಿಮಾ ಸೆಟ್ ನಲ್ಲಿ ಕಾಣಿಸಿಕೊಂಡ ಶಿವರಾಜ್ ಕುಮಾರ್!!

Shivaraj Kumar: ಬಹಳ ದಿನಗಳ ನಂತರ ನಿಖಿಲ್ ಹಾಗೂ ಶಿವಣ್ಣ ಭೇಟಿ ಮಾಡಿದ್ದು ಒಂದಿಷ್ಟು ಸಮಯ ಒಟ್ಟಿಗೆ ಕಾಲ ಕಳೆದಿದ್ದಾರೆ..ಸಿನಿಮಾ ವಿಚಾರ ಹೊರೆತು ಪಡಿಸಿ ಒಂದಿಷ್ಟು ವಯಕ್ತಿಕ ವಿಚಾರವಾಗಿಯೂ ಶಿವಣ್ಣ ಹಾಗೂ ನಿಖಿಲ್ ಚರ್ಚೆ ಮಾಡಿದ್ದಾರೆ...ಇದೇ ಸಮಯದಲ್ಲಿ ಲೈಕಾ ಸಂಸ್ಥೆ ನಿರ್ಮಾಣ ಮಾಡುತ್ತಿರೋ ಸಿನಿಮಾ ಬಗ್ಗೆಯೂ ಶಿವಣ್ಣ ಮಾಹಿತಿ ಪಡೆದುಕೊಂಡರು. 

ನಿಖಿಲ್ ಅವರ ಸಿನಿಮಾದ ಚಿತ್ರೀಕರಣ ಹಳೆ ಕಟ್ಟಡ ಒಂದರ ಮೂರನೇ ಮಹಡಿಯಲ್ಲಿ ನಡೆಯುತ್ತಿತ್ತು ಲಿಫ್ಟ್ ಇಲ್ಲದ ಕಾರಣ ನಿಖೀಲ್ ಭೇಟಿ ಮಾಡಲು ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಮೆಟ್ಟಿಲು ಹತ್ತಿಕೊಂಡೇ ಹೋಗಿ ನಿಖಿಲ್ ಅವರನ್ನು ಭೇಟಿ ಮಾಡಿ ಹೊಸ ಸಿನಿಮಾಗೆ ಶುಭಕೋರಿದ್ದಾರೆ.. ಪ್ರೀತಿಯಿಂದ ತಮ್ಮನ್ನ ನೋಡಲು ಬಂದ ಶಿವಣ್ಣ ಹಾಗೂ ಗೀತಾ ಶಿವರಾಜ್ ಕುಮಾರ್ ಅವರನ್ನು ನಿಖಿಲ್ ಕೊನೆಯಲ್ಲಿ ಕಾರ್ ವರೆಗೂ ಹೋಗಿ ಬಿಟ್ಟುಬಂದಿದ್ದಾರೆ. 

ಇದನ್ನೂ ಓದಿ-"ಅಟ್ಲಿ ನನಗೆ ಮೋಸ ಮಾಡಿದ್ದಾರೆ.." ಜವಾನ್ ನಾಯಕಿಯ ಶಾಕಿಂಗ್ ಹೇಳಿಕೆ!!

ಅಣ್ಣಾವ್ರ ಕುಟುಂಬ ಹಾಗೂ ದೊಡ್ಡ ಗೌಡರ ಕುಟುಂಬ ಈಗಿನಿಂದ ಮಾತ್ರವಲ್ಲ ಹಿಂದಿನಿಂದಲೂ ಅನ್ಯೂನ್ಯವಾಗಿದ್ದಾರೆ...ಅದರಲ್ಲೂ ಪುನೀತ್ ರಾಜ್ ಕುಮಾರ್ ಅವ್ರಿಗೆ ನಿಖಿಲ್ ಡೆಡಿಕೇಷನ್ ಬಗ್ಗೆ ತುಂಬಾ ಪ್ರೀತಿ ಇತ್ತು...ಈಗ ಶಿವಣ್ಣ ಹಾಗೂ ನಿಖಿಲ್ ಭೇಟಿ ಎರಡೂ ಕುಟುಂಬದ ಬಾಂದವ್ಯವನ್ನ ನೆನಪಿಸುತ್ತಿದೆ. 

ಇನ್ನು ನಿಖಿಲ್ ಅಭಿನಯ ಮಾಡುತ್ತಿರೋ ಲೈಕಾ ಸಂಸ್ಥೆ ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ಇನ್ನು ಟೈಟಲ್ ಫಿಕ್ಸ್ ಆಗಬೇಕಿದೆ. ಇನ್ನೂ ಈ ಚಿತ್ರವನ್ನ ಲಕ್ಷ್ಮಣ್ ನಿರ್ದೇಶನ ಮಾಡುತ್ತಿದ್ದು ಚಿತ್ರೀಕರಣದ ಮೊದಲ ಶೆಡ್ಯೂಲ್ ಇತ್ತೀಚಿಗಷ್ಟೇ ಶುರುವಾಗಿದೆ..ಚಿತ್ರಕ್ಕೆ ಯುಕ್ತಿ ತರೇಜಾ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ...ಈ ಚಿತ್ರದ ಮೂಲಕ ಲೈಕಾ ಸಂಸ್ಥೆ ಮೊದಲ ಬಾರಿಗೆ ಕನ್ನಡ ಇಂಡಸ್ಟ್ರಿಯಲ್ಲಿ ಮೊದಲ ಸಿನಿಮಾ ನಿರ್ಮಾಣ ಮಾಡುತ್ತಿದೆ.

ಇದನ್ನೂ ಓದಿ-ಜವಾನ್ ಚಿತ್ರಕ್ಕೆ ದೀಪಿಕಾ ಒಂದೇ ಒಂದು ರೂಪಾಯಿ ಸಂಭಾವನೆ ಪಡೆದಿಲ್ಲ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 
 

Read More