Home> Entertainment
Advertisement

Shah Rukh Khan : ಶಾರುಖ್ ಖಾನ್ ಖರೀಸಿದ್ರು 10 ಕೋಟಿ ಮೌಲ್ಯದ Rolls-Royce ಕಾರು.. ಇಲ್ಲಿದೆ ನೋಡಿ ವಿಡಿಯೋ

Rolls-Royce Cullinan Black Badge: ಐಷಾರಾಮಿ ಕಾರು ಕಂಪನಿಗಳ ಅನೇಕ ಉನ್ನತ-ಮಟ್ಟದ ಕಾರುಗಳನ್ನು ಶಾರುಖ್ ಖಾನ್‌ ಹೊಂದಿದ್ದಾರೆ. ಈಗ ಅವರ ಸಂಗ್ರಹಕ್ಕೆ ಮತ್ತೊಂದು ಹೊಸ ಕಾರು ಸೇರ್ಪಡೆಯಾಗಿದೆ.

Shah Rukh Khan : ಶಾರುಖ್ ಖಾನ್ ಖರೀಸಿದ್ರು 10 ಕೋಟಿ ಮೌಲ್ಯದ Rolls-Royce ಕಾರು.. ಇಲ್ಲಿದೆ ನೋಡಿ ವಿಡಿಯೋ

Rolls-Royce Cullinan Black Badge: ಬಾಲಿವುಡ್‌ನ ಕಿಂಗ್ ಎಂದು ಕರೆಯಲ್ಪಡುವ ಶಾರುಖ್ ಖಾನ್‌ಗೆ ಐಷಾರಾಮಿ ಕಾರುಗಳೆಂದರೆ ತುಂಬಾ ಇಷ್ಟ. ಅವರು ಆಡಿ, BMW, Mercedes-Benz, Rolls Royce ನಂತಹ ಐಷಾರಾಮಿ ಕಾರು ಕಂಪನಿಗಳ ಅನೇಕ ಉನ್ನತ-ಮಟ್ಟದ ಕಾರುಗಳನ್ನು ಹೊಂದಿದ್ದಾರೆ. ಈಗ ಅವರ ಸಂಗ್ರಹಕ್ಕೆ ಮತ್ತೊಂದು ಹೊಸ ಕಾರು ಸೇರ್ಪಡೆಯಾಗಿದೆ, ಅದು ರೋಲ್ಸ್ ರಾಯ್ಸ್ ಕಲಿನನ್ ಬ್ಲಾಕ್ ಬ್ಯಾಡ್ಜ್ ಎಸ್‌ಯುವಿ. ಅದರ ಬೆಲೆ 10 ಕೋಟಿ ರೂ.

ಶಾರುಖ್ ಖಾನ್ ಅವರು ರೋಲ್ಸ್ ರಾಯ್ಸ್ ಕಲಿನನ್‌ನ ಹೊಸ ವಿಶೇಷ ಆವೃತ್ತಿಯ ಬ್ಲ್ಯಾಕ್ ಬ್ಯಾಡ್ಜ್ ಆವೃತ್ತಿಯನ್ನು ಮನೆಗೆ ತಂದಿದ್ದಾರೆ. ಭಾರತದಲ್ಲಿ ಮಾರಾಟಕ್ಕೆ ಲಭ್ಯವಿರುವ ಅತ್ಯಂತ ದುಬಾರಿ SUV ಕಲಿನನ್ ಬ್ಲಾಕ್ ಬ್ಯಾಡ್ಜ್ ಆಗಿದೆ, ಇದರ ಎಕ್ಸ್ ಶೋ ರೂಂ ಬೆಲೆ ರೂ 8.20 ಕೋಟಿ. ಆದಾಗ್ಯೂ, ವಿವಿಧ ಗ್ರಾಹಕರ ಆಯ್ಕೆಯ ಪ್ರಕಾರ ಸಾಕಷ್ಟು ಕಸ್ಟಮೈಸೇಶನ್ ಮಾಡಬಹುದಾಗಿದೆ, ಇದರಿಂದಾಗಿ ಇದು ರೂ 10 ಲಕ್ಷವನ್ನು ದಾಟಬಹುದು.

ಇದನ್ನೂ ಓದಿ : Yala Kunni: ಕೋಮಲ್ ನಟನೆಯ "ಯಲಾಕುನ್ನಿ" ಚಿತ್ರಕ್ಕೆ ಮುಹೂರ್ತ.. ವಜ್ರಮುನಿ ಮೊಮ್ಮಗ ಸಿನಿರಂಗಕ್ಕೆ ಗ್ರ್ಯಾಂಡ್ ಎಂಟ್ರಿ..!

ಶಾರುಖ್ ಖಾನ್ ಇತ್ತೀಚೆಗೆ ಮುಂಬೈನ ಬೀದಿಗಳಲ್ಲಿ ರಾತ್ರಿಯ ಸಮಯದಲ್ಲಿ ತಮ್ಮ ಹೊಸ ರೋಲ್ಸ್ ರಾಯ್ಸ್ ಕಲ್ಲಿನನ್ ಬ್ಲ್ಯಾಕ್ ಬ್ಯಾಡ್ಜ್ ಅನ್ನು ಚಾಲನೆ ಮಾಡುತ್ತಿದ್ದರು. ಅವರ ಅಲ್ಟ್ರಾ-ಐಷಾರಾಮಿ SUV ಆರ್ಕ್ಟಿಕ್ ವೈಟ್ ಪೇಂಟ್ ಸ್ಕೀಮ್ ಅನ್ನು ಹೊಂದಿದೆ. ಪಠಾಣ್‌ನ ಬೃಹತ್ ಯಶಸ್ಸಿನ ನಂತರ, ಶಾರುಖ್ ಖಾನ್ ಹೊಸ ರೋಲ್ಸ್ ರಾಯ್ಸ್ ಕಲ್ಲಿನನ್ ಬ್ಲ್ಯಾಕ್ ಬ್ಯಾಡ್ಜ್‌ನೊಂದಿಗೆ ಕಾಣಿಸಿಕೊಂಡಿದ್ದಾರೆ.

 

 

Rolls-Royce Cullinan ಬ್ಲಾಕ್ ಬ್ಯಾಡ್ಜ್ 6.75-ಲೀಟರ್ ಟ್ವಿನ್-ಟರ್ಬೋಚಾರ್ಜ್ಡ್ V12 ಪೆಟ್ರೋಲ್ ಎಂಜಿನ್‌ನೊಂದಿಗೆ ಬರುತ್ತದೆ. ಇದು 600 Bhp ಪವರ್ ಮತ್ತು 900 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. 

ಇದನ್ನೂ ಓದಿ : ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸನ್ನಿ ಲಿಯೋನ್-ಉರ್ಫಿ ಭೇಟಿ, ನೆಟ್ಟಿಗರು ಅಂದಿದ್ದೇನು ಗೊತ್ತಾ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More