Home> Entertainment
Advertisement

Pathaan : ಪಠಾಣ್ ʼಬೇಷರಮ್ ರಂಗ್ʼ ಸಾಂಗ್ ಔಟ್.. ಸಖತ್ತಾಗಿದೆ ಕಿಂಗ್‌ ಖಾನ್‌, ದೀಪ್ಸ್‌ ಲುಕ್‌

Besharam Rang Song out : ಬಾಲಿವುಡ್‌ ಕಿಂಗ್‌ ಶಾರುಖ್ ಖಾನ್ ಅಭಿನಿಯದ ಪಠಾಣ್‌ ಸಿನಿಮಾ ಸಖತ್‌ ಸದ್ದು ಮಾಡುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಪಠಾಣ್‌ ಟೀಸರ್‌ ಸಿನಿಮಾದ ಮೇಲಿನ ನಿರೀಕ್ಷೆಗೆ ಕಾರಣವಾಗಿದೆ. ಇದೀಗ ಶಾರುಖ್‌ ಮತ್ತು ದೀಪಿಕಾ ಜೋಡಿಯ ಬೇಷರಾಮ್‌ ರಂಗ್‌ ವಿಡಿಯೋ ಸಾಂಗ್‌ ಬಿಡುಗಡೆಯಾಗಿದ್ದು, ಯೂಟ್ಯೂಬ್‌ನಲ್ಲಿ ಟ್ರೇಂಡ್‌ ಕ್ರಿಯೆಟ್‌ ಮಾಡುತ್ತಿದೆ.

Pathaan : ಪಠಾಣ್ ʼಬೇಷರಮ್ ರಂಗ್ʼ ಸಾಂಗ್ ಔಟ್.. ಸಖತ್ತಾಗಿದೆ ಕಿಂಗ್‌ ಖಾನ್‌, ದೀಪ್ಸ್‌ ಲುಕ್‌

Pathaan Besharam Rang song : ಬಾಲಿವುಡ್‌ ಕಿಂಗ್‌ ಶಾರುಖ್ ಖಾನ್ ಅಭಿನಿಯದ ಪಠಾಣ್‌ ಸಿನಿಮಾ ಸಖತ್‌ ಸದ್ದು ಮಾಡುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಪಠಾಣ್‌ ಟೀಸರ್‌ ಸಿನಿಮಾದ ಮೇಲಿನ ನಿರೀಕ್ಷೆಗೆ ಕಾರಣವಾಗಿದೆ. ಇದೀಗ ಶಾರುಖ್‌ ಮತ್ತು ದೀಪಿಕಾ ಜೋಡಿಯ ಬೇಷರಾಮ್‌ ರಂಗ್‌ ವಿಡಿಯೋ ಸಾಂಗ್‌ ಬಿಡುಗಡೆಯಾಗಿದ್ದು, ಯೂಟ್ಯೂಬ್‌ನಲ್ಲಿ ಟ್ರೇಂಡ್‌ ಕ್ರಿಯೆಟ್‌ ಮಾಡುತ್ತಿದೆ.

ಶಾರುಖ್ ಅವರನ್ನು ತೆರೆ ಮೇಲೆ ನೋಡ್ಬೇಕು ಅಂತ ಬಹಳ ದಿನಗಳಿಂದ ಕಾಯುತ್ತಿದ್ದ ಅವರ ಅಭಿಮಾನಿಗಳ ಆಸೆ ಬಹು ಬೇಗದಲ್ಲಿ ಈಡೇರಲಿದೆ. ಕಿಂಗ್‌ ಖಾನ್‌ ಚಿತ್ರ 'ಪಠಾಣ್' ಜನವರಿ 2023 ರಲ್ಲಿ ಬಿಡುಗಡೆಯಾಗಲಿದೆ. ಪಠಾಣ್ ಚಿತ್ರದಲ್ಲಿ ಶಾರುಖ್ ಖಾನ್ ಜೊತೆಗೆ ಜಾನ್ ಅಬ್ರಹಾಂ ಮತ್ತು ದೀಪಿಕಾ ಪಡುಕೋಣೆ  ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ದೀಪಿಕಾ ಮತ್ತು ಶಾರುಖ್ ಅಭಿನಯದ 'ಬೇಷರಂ ರಂಗ್' ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದ್ದು, ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

ಇದನ್ನೂ ಓದಿ: ಪದವಿ ಪೂರ್ವ ಪ್ರೇಮಿಗಳ ʼಯಾಕೆ ಸಿಕ್ಕೆʼ ಸಾಂಗ್‌ ರಿಲೀಸ್‌ ಮಾಡಿದ ಕಿಚ್ಚ..!

ಬೇಷರಂ ರಂಗ್‌ ಹಾಡಿನ ವಿಡಿಯೋದಲ್ಲಿ ದೀಪಿಕಾ ಹಾಟ್ ನೆಸ್ ಸೂಪರ್‌. ಅಲ್ಲದೆ, ಬಾದ್‌ ಶಾ ಶಾರುಖ್‌ ಬಾಡಿ ನೋಡುಗರನ್ನು ಹುಚ್ಚೆದ್ದು ಕುಳಿಸುವಂತೆ ಮಾಡುತ್ತಿದೆ. ಬೇಷರಮ್ ರಂಗ್ ಹಾಡಿನಲ್ಲಿ ದೀಪಿಕಾ ಅಂದವನ್ನು ನೋಡುವುದೇ ಒಂದು ಭಾಗ್ಯ. ಹಾಟ್ ಬ್ರಾಲೆಸ್ ಗೋಲ್ಡ್ ಮೊನೊಕಿನಿ ಲುಕ್‌ನಲ್ಲಿ ದೀಪ್ಸ್‌ ಕಣ್ಣರಳಿಸಿ ನೋಡುವಂತೆ ಮಾಡಿದ್ದಾರೆ. ವಿಡಿಯೋ ಸಾಂಗ್‌ ನೋಡಿದ ನೆಟ್ಟಿಗರು ನಮ್ಮ ನಿದ್ದೆ ಹಾಳು ಮಾಡ್ದೆ ದೀಪಿಕಾ ಅಂತ ಲವ್‌ ಸಿಂಬಲ್‌ ಇಮೋಜಿ ನೀಡುತ್ತಿದ್ದಾರೆ.

ಬರೀ ದೀಪಿಕಾ ಅಲ್ಲದೆ, ಖಡಕ್‌ ಬಾಡಿ ದರ್ಶನ ಮಾಡಿಸಿರುವ ಶಾರುಖ್ ಖಾನ್ ನೋಟ ಸೂಪರ್‌ ಆಗಿದೆ. 57 ವರ್ಷದಲ್ಲಿಯೂ ಸಹ ಅವರ ದೇಹ ಹುರಿಗೊಂಡಿದ್ದು ನೋಡಿದ್ರೆ ಖಾನ್‌ಗೆ ಇನ್ನೂ 25 ವರ್ಷ ಆಗಿರ್ಬೇಕು ಅಂತ ಅನ್ನಿಸದೆ ಇರಲ್ಲ. ಶಾರುಖ್ ಅವರ ಶರ್ಟ್‌ಲೆಸ್ ಲುಕ್ ಅಭಿಮಾನಿಗಳನ್ನು ಬೆಚ್ಚಿಬೀಳಿಸಿದೆ. ಕೊನೆಯಲ್ಲಿ, ದೀಪಿಕಾ ಶಾರುಖ್‌ನ ತೋಳುಗಳಲ್ಲಿ ಬಂಧಿಯಾಗುವ ದೃಶ್ಯವಂತೂ ರೊಮ್ಯಾಂಟಿಕ್‌. ಒಟ್ಟಾರೆಯಾಗಿ ವಿಡಿಯೋ ಒಂದು ಸೆಕೆಂಡ್‌ ಕೂಡ ನೋಡದೆ ಕಣ್ಣು ಮುಚ್ಚದಂತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More