Home> Entertainment
Advertisement

ಎಲ್ಲಿದ್ದಾರೆ ಮನಸಾರೆ ಜೋಡಿ ಐಂದ್ರಿತಾ - ದಿಗಂತ್ ? ಕೇರಳದಲ್ಲೋ? ಬೆಂಗಳೂರಿನ ರಹಸ್ಯ ಸ್ಥಳದಲ್ಲೋ?

ಸಿನಿ ಜೋಡಿ ಐಂದ್ರಿತಾ ಮತ್ತು ದಿಗಂತ್ (Diganth) ಗೆ ಸೆಂಟ್ರಲ್ ಕ್ರೈಂ ಬ್ರಾಂಚ್ ಪೊಲೀಸರು (CCB) ವಿಚಾರಣೆಗೆ ಬರುವಂತೆ ನೊಟೀಸ್ ನೀಡಿದ್ದು ಈ ಕ್ಷಣದವರೆಗೂ ಇವರಿಬ್ಬರು ಎಲ್ಲಿದ್ದಾರೆ ಎಂಬುದೇ ತಿಳಿದುಬಂದಿಲ್ಲ.

ಎಲ್ಲಿದ್ದಾರೆ ಮನಸಾರೆ ಜೋಡಿ ಐಂದ್ರಿತಾ - ದಿಗಂತ್ ? ಕೇರಳದಲ್ಲೋ? ಬೆಂಗಳೂರಿನ ರಹಸ್ಯ ಸ್ಥಳದಲ್ಲೋ?

ಬೆಂಗಳೂರು: ರಾಜ್ಯದಲ್ಲಿ ಸಂಚಲನ ಮೂಡಿಸಿರುವ ಡ್ರಗ್ಸ್ ಮಾಫಿಯಾ (Drugs Mafia)ಕ್ಕೆ ಸಂಬಂಧಿಸಿದಂತೆ ನಿನ್ನೆ ಸಿನಿ ಜೋಡಿ ಐಂದ್ರಿತಾ ಮತ್ತು ದಿಗಂತ್ (Diganth) ಗೆ ಸೆಂಟ್ರಲ್ ಕ್ರೈಂ ಬ್ರಾಂಚ್ ಪೊಲೀಸರು (CCB) ವಿಚಾರಣೆಗೆ ಬರುವಂತೆ ನೊಟೀಸ್ ನೀಡಿದ್ದು ಈ ಕ್ಷಣದವರೆಗೂ ಇವರಿಬ್ಬರು ಎಲ್ಲಿದ್ದಾರೆ ಎಂಬುದೇ ತಿಳಿದುಬಂದಿಲ್ಲ.

ಐಂದ್ರಿತಾ ರೇ (Aindrita Ray) ಮತ್ತು ದಿಗಂತ್ ಸೆಂಟ್ರಲ್ ಕ್ರೈಂ ಬ್ರಾಂಚ್ ಪೊಲೀಸರು (CCB) ವಿಚಾರಣೆಗೆ ಬರುವಂತೆ ನೊಟೀಸ್ ನೀಡುತ್ತಿದ್ದಂತೆ ಟ್ವೀಟರ್ ಮೂಲಕ 'ನೊಟೀಸ್ ಬಂದಿರುವುದನ್ನು' ಮತ್ತು 'ವಿಚಾರಣೆಗೆ ಹಾಜರಾಗುವುದನ್ನು' ಖಚಿತಪಡಿಸಿದ್ದಾರೆ. ಆದರೆ ತಾವು ಎಲ್ಲಿದ್ದೇವೆ ಎಂಬ ಸುಳಿವು ಬಿಟ್ಟುಕೊಟ್ಟಿಲ್ಲ.

ಅವರ ಕುಟುಂಬ ವರ್ಗದವರು 'ಈ ಜೋಡಿ ಕೇರಳಕ್ಕೆ ಜಾಲಿ ಟ್ರಿಪ್ ಹೋಗಿದೆ' ಎಂದು ಮಾಹಿತಿ ನೀಡಿದ್ದಾರೆ. ಆದರೆ ಇಂದು ಬೆಳಿಗ್ಗೆ ವಿಚಾರಣೆಗಾಗಿ ಸಿಸಿಬಿ ಕಚೇರಿಗೆ ಆಗಮಿಸುವುದಾಗಿ ಐಂದ್ರಿತಾ ಮತ್ತು ದಿಗಂತ್ ಹೇಳುತ್ತಿರುವುದರಿಂದ ಅವರು ಬೆಂಗಳೂರಿನಲ್ಲೇ ರಹಸ್ಯ ಸ್ಥಳದಲ್ಲಿದ್ದಾರೆ. ರಹಸ್ಯ ಸ್ಥಳದಿಂದಲೇ ನೇರವಾಗಿ ಸಿಸಿಬಿ ಕಚೇರಿಗೆ ಬರಲಿದ್ದಾರೆ ಎನ್ನಲಾಗುತ್ತಿದೆ.

ಸದ್ಯ ಐಂದ್ರಿತಾ ಮತ್ತು ದಿಗಂತ್ ಜೋಡಿ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ವಾಸ ಮಾಡುತ್ತಿದ್ದಾರೆ. ಆದರೆ ಇಂದು ಅವರಿಬ್ಬರೂ ಆ ನಿವಾಸದಲ್ಲಿಲ್ಲ. ಐಂದ್ರಿತಾ ಮತ್ತು ದಿಗಂತ್ ಇವರಿಬ್ಬರ ವಿಚಾರಣೆ ಬಳಿಕ ಮತ್ಯಾವ ಸ್ಫೋಟ ಮಾಹಿತಿ ಹೊರಬೀಳುತ್ತೋ ಎಂಬುದರ ಜೊತೆಗೆ ಇವರು ಈಗ ಎಲ್ಲಿದ್ದಾರೆ ಎಂಬ ಕುತೂಹಲವೂ ಮನೆ ಮಾಡಿದೆ.

Read More