Home> Entertainment
Advertisement

Mekedatu Hiking : 'ಮೇಕ ದಾಟು ನಮ್ಮ ಹಕ್ಕು ಉಳಿಸಿಕೊಳ್ಳೋದಕ್ಕೋಸ್ಕರ ಬೆಂಬಲ ಕೊಡ್ತಿವಿ'

ಮೇಕ ದಾಟು ನಮ್ಮ ಹಕ್ಕು ಉಳಿಸಿಕೊಳ್ಳೋದಕ್ಕೋಸ್ಕರ ಬೆಂಬಲ ಕೊಡ್ತಿವಿ ಎಂದು ಫಿಲಂ ಚೇಂಬರ್ ಅಧ್ಯಕ್ಷ ಜಯರಾಜ್ ಹೇಳಿದ್ದಾರೆ.

Mekedatu Hiking : 'ಮೇಕ ದಾಟು ನಮ್ಮ ಹಕ್ಕು ಉಳಿಸಿಕೊಳ್ಳೋದಕ್ಕೋಸ್ಕರ ಬೆಂಬಲ ಕೊಡ್ತಿವಿ'

ಬೆಂಗಳೂರು : ಮೇಕೆ ದಾಟು ಪಾದಯಾತ್ರೆ ಹೋರಾಟಕ್ಕೆ ಯಾವತ್ತಿದ್ರೂ ನಮ್ಮ ಬಂಬಲ‌ ಇರುತ್ತೆ. ಕಲಾವಿದರು ಈಗ ಒಟ್ಟಾಗಿ ಭಾಗಿಯಾಗೋಕೆ ಸಾಧ್ಯತೆ ಕಡಿಮೆ ಇದೆ. ಅವಕಾಶ ಸಿಕ್ಕಾಗ ಚಿತ್ರೋದ್ಯಮದ ಸದಸ್ಯರು ಭಾಗಿಯಾಗಬಹುದು. ಮೇಕ ದಾಟು ನಮ್ಮ ಹಕ್ಕು ಉಳಿಸಿಕೊಳ್ಳೋದಕ್ಕೋಸ್ಕರ ಬೆಂಬಲ ಕೊಡ್ತಿವಿ ಎಂದು ಫಿಲಂ ಚೇಂಬರ್ ಅಧ್ಯಕ್ಷ ಜಯರಾಜ್ ಹೇಳಿದ್ದಾರೆ.  

ಸಿನಿ ಕಲಾವಿದರ ಸಭೆ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅಧ್ಯಕ್ಷ ಜಯರಾಜ್(Jayaraj), ಮೇಕೆದಾಟು ನಮ್ಮ ಹಕ್ಕು ಹೀಗಾಗಿ ಅದರ ಹೋರಾಟಕ್ಕೆ ಬೆಂಬಲ ಕೊಡೋದು ನಮ್ಮ ಹಕ್ಕು.. ಡಿಕೆ ಶಿವಕುಮಾರ್ ಬೆಂಬಲ ಕೊಡಿ ಎಂದು ಕೇಳಿಕೊಂಡಿದ್ರು. ಈ ಹೋರಾಟ ಪಕ್ಷಾತೀತವಾಗಿರೋದ್ರಿಂದ ನಾವು ಭಾಗಿ ಆಗಬೇಕು. ಆದರೆ ಕೊರೋನಾ ಹೆಚ್ಚಾಗ್ತಿದೆ. ಹೀಗಾಗಿ ಈ ಸಮಯದಲ್ಲಿ ಬೆಂಬಲಕ್ಕೆ ಹೋಗೋದು ಕಷ್ಟವಾಗಿದೆ. ಅಲ್ಲದೆ, ಭಾನುವಾರ ಕರ್ಫ್ಯೂ ಇರೋದ್ರಿಂದ ಹೋಗೋದು ಕಷ್ಟ. ಅವರವರ ಅನುಕೂಲಕ್ಕೆ ತಕ್ಕಂತೆ ಪಾದ ಯಾತ್ರೆ ಗೆ ಹೋಗಿ ಪಾದಯಾತ್ರೆಗೆ ಬೆಂಬಲ ಕೊಡಬಹುದು. ನಾವು ಯಾವಾಗ್ಲು ಮೇಕೆ ದಾಟು ಪರವಾಗಿರುತ್ತೇವೆ ಎಂದು ಹೇಳಿದ್ದಾರೆ. 

fallbacks

ಇದನ್ನೂ ಓದಿ : Film Chamber : ಫಿಲಂ ಚೇಂಬರ್ ನಲ್ಲಿ ಇಂದು ಮಹತ್ವದ ಸಭೆ..!

ವೀಕೆಂಡ್ ಕರ್ಪ್ಯೂ ಬಗ್ಗೆ ಮಾತನಾಡಿದ ಫಿಲಂ ಚೇಂಬರ್ ಅಧ್ಯಕ್ಷ ಜಯರಾಜ್, ವೀಕೆಂಡ್ ಕರ್ಪ್ಯೂ(weekend curfew) ಸಡಿಲ ಗೊಳಿಸಿ ಅಂತ ಕೇಳೋದು ಸೂಕ್ತ ಅಲ್ಲ. 650 ಚಿತ್ರಂಮದಿರಗಳು ಸಿನಿಮಾ ಇಲ್ಲ ಅಂದ್ರೆ ಬಂದ್ ಆಗುತ್ತವೆ. ಸದ್ಯ ಮನವಿ ಕೊಡಬೇಕು ಅಂತ ನಿರ್ಧಾರ ಮಾಡಿದ್ದಿವಿ. ಸಿಎಂ ಬಸವರಾಜ ಬೊಮ್ಮಾಯಿ ಬೇಟಿ ಯಾವಾಗಾ ಅನ್ನೋದು ಇನ್ನೂ ನಿರ್ಧಾರ ಆಗಿಲ್ಲ. ಬೇರೆ ಉದ್ಯಮಕ್ಕೂ ನಮಗೂ ವ್ಯತ್ಯಾಸ ಇದೆ. ಚಿತ್ರಮಂದಿರ ನಡೀಬೇಕಾದ್ರೆ  ಸಿನಿಮಾಗಳು ರಿಲೀಸ್ ಆಗಬೇಕಾಗುತ್ತೆ. ನಮ್ಮ ಕಷ್ಟ ಹೇಳ್ಕೋಳ್ಳೋದಕ್ಕೆ ಹೋಗಬೇಕು. ಸರ್ಕಾರಕ್ಕೆ ಒತ್ತಾಯ ಮಾಡಲ್ಲ ಮನವಿ ಕೊಡ್ತಿವಿ. ಸೋಮವಾರ ಬೇಟಿ ಮಾಡಿ ಮಾತಾಡ್ತಿವಿ. ಹಿಂದೆ ಲಾಕ್ ಡೌನ್ ಆದ ಮೇಲೆ ಎಷ್ಟು ಕಷ್ಟ ಆಯ್ತು ಅನ್ನೋದು ಎಲ್ಲರಿಗೂ ಗೊತ್ತಿದೆ ಎಂದು ಹೇಳಿದ್ದಾರೆ.

ನಂತರ ಮಾತನಾಡಿದ ಹಿರಿಯ ಕಲಾವಿದ, ಫಿಲಂ ಚೇಂಬರ್ ಸಾಂಸ್ಕೃತಿಕ ಸಮೀತಿ ಅಧ್ಯಕ್ಷರಾಗಿರೋ ಮುಖ್ಯಮಂತ್ರಿ ಚಂದ್ರು(Mukhyamantri Chandru), ಈ ಹೋರಟ ಪಕ್ಷಬೇದ ಇಲ್ಲ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸರಿಯಾದ ನಿರ್ಧಾರ ಮಾಡಿದ್ದಾರೆ. ನಾವೆಲ್ಲಾ ಈ ಹೋರಾಟಕ್ಕೆ ಬೆಂಬಲ ಕೊಡುತ್ತೇವೆ. ಸರ್ಕಾರದ ರೂಲ್ಸ್ ಗಳನ್ನ ಫಾಲೋ ಮಾಡಿಕೊಂಡು ನಾವು ಬೆಂಬಲ ಕೊಡುತ್ತೇವೆ. ಅಲ್ಲಿಗೆ ಬರುವವರಿಗೆ ವ್ಯವಸ್ಥೆ ಮಾಡಿಕೊಡುತ್ತೇವೆ. ಅದರ ಜವಾಬ್ಧಾರಿಯನ್ನ ನಾನು ನೋಡಿಕೊಳ್ಳುತ್ತೇನೆ. ನಮ್ಮ ಹೋರಾಟ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರದ ವಿರುದ್ಧ ಅಲ್ಲ.  ನಮ್ಮ ನೀರಿಗಾಗಿ ಹೋರಾಟ ಅಷ್ಟೆ. ಸಾಮೂಹಿಕವಾಗಿ ಬಂದು ಈ ಹೋರಾಟದಲ್ಲಿ ಬಂದು ಭಾಗವಹಿಸೋಕೆ ಆಗುತ್ತಿಲ್ಲ. ನೀರಿಗಾಗಿ ಹೋರಾಡುತ್ತಿರೋ ಬೆಂಬಲಕ್ಕೆ ನಮ್ಮ ಇಡೀ ಚಿತ್ರರಂಗ ಬೆಂಬಲ ಕೊಡುತ್ತೆ ಎಂದು ತಿಳಿಸಿದ್ದಾರೆ. 

ಇವರ ನಂತರ ಮಾತನಾಡಿದ ಫಿಲಂ ಚೇಂಬರ್ ಮಾಜಿ ಅಧ್ಯಕ್ಷ ಸಾರಾ ಗೋವಿಂದ್, ಪಕ್ಷಾತೀತವಾಗಿ ಹೋರಾಟ ಇದು. ನೀರಿಗಾಗಿ ಹೋರಾಟ, ಹಾಗಾಗಿ ಚಿತ್ರೋದ್ಯಮ ಬೆಂಬಲ‌ ನೀಡುತ್ತೆ ನಾವೂ ಸಾಥ್ ನೀಡ್ತಿವಿ ಎಂದು ಹೇಳಿದ್ದಾರೆ. 

ಇದನ್ನೂ ಓದಿ : ಅಂಬರೀಶ್‌ ಸ್ಮಾರಕ ನಿರ್ಮಾಣಕ್ಕೆ 12 ಕೋಟಿ ಅನುದಾನ ಘೋಷಿಸಿದ ರಾಜ್ಯ ಸರ್ಕಾರ

ಈ ಕುರಿತು ಮಾತನಾಡಿದ ನಟ ಮದನ್ ಪಟೇಲ್(Madan Patel), ನೀರು ಪ್ರತಿಯೊಬ್ಬರ ಹಕ್ಕು, ರಾಜಕೀಯ ಬಣ್ಣ ಈ ಹೋರಾಟ ಇಲ್ಲ. ಈ ಹೋರಾಟಕ್ಕೆ ನಮ್ಮ ಬೆಂಬಲ ಇಡೀ ಕರ್ನಾಟಕದ ಜನತೆಯ ಪರವಾಗಿದೆ. ನಮ್ಮ ನೀರು ನಮ್ಮ ಹಕ್ಕು ಎಂದು ಹೇಳಿದರು.

ನಂತರ ಮಾತನಾಡಿದ ನಟಿ, ರಾಜಕಾರಣಿ ಜಯಮಾಲ(Jayamala), ಇದು ವಿಶಿಷ್ಟ ವಾದ ಹೋರಾಟ. ಎಲ್ಲಾ‌ ಸಮಸ್ಯೆಗಳು ಇಥ್ಯರ್ಥ ಆಗಿದೆ. ಕುಡಿಯೋ ನೀರಿಗೆ ಯಾವುದೇ ನಿರ್ಭಂಧ ಇಲ್ಲ ಅಂತ ಸುಪ್ರಿಂ ಕೋರ್ಟ್ ಹೇಳಿದ. ಈ ಹೋರಾಟಕ್ಕೆ ಎಲ್ಲರ ಬೆಂಬಲ ಇದೆ. ಕನ್ನಡ ಚಿತ್ರರಂಗಕ್ಕೆ ಒಂದು ಪರಂಪರೆ ಇದೆ. ಅದನ್ನ ರಾಜ್ ಕುಮಾರ್ ಹೇಳಿಕೊಟ್ಟಿದ್ದಾರೆ. ಇವತ್ತು ಕೂಡ ಒಂದು ಐತಿಹಾಸಿಕ ಹೋರಾಟವನ್ನ ಡಿಕೆ  ಶಿವಕುಮಾರ್, ಹಾಗು ಸಿದ್ದರಾಮಯ್ಯ ನಿರ್ಧಾರ ಮಾಡಿದ್ದಾರೆ. ಯಾರು ಬರಲಿಲ್ಲ ಅಂದ್ರೆ ಜನ ಬರ್ತಾರೆ ಅನ್ನೋ ನಂಬಿಕೆ ಇದೆ ಎಂದರು.

9 ಜಿಲ್ಲೆಗಳಿಗೆ ನೀರು ಸಿಗುತ್ತೆ. ಈ ಹೋರಾಟಕ್ಕೆ ಎಲ್ಲರೂ ಬೆಂಬಲ ಕೊಡಬೇಕು. ಯಾಕಂದ್ರೆ ಇದು ನೀರಿನ ಹೋರಾಟ. ಕೋಲಾರಕ್ಕೆ ಟ್ರೀಟೆಡ್ ನೀರನ್ನ ನಾವು ಕೊಡುತ್ತಿದ್ದೇವೆ. ಮೆಕೆದಾಟು ಯೋಜನೆಯಿಂದ ನೀರು ಬಂದ್ರೆ ಆ ನೀರನ್ನ ನಾವು ಕೊಡಬಹುದಲ್ಲಾ. ಈ ಹೋರಾಟಕ್ಕೆ ಕಲಾವಿಧರೆಲ್ಲಾ ಬರುತ್ತೇವೆ ಎಂದಿದ್ರು. ಮುಂದಿನ ದಿನಗಳಲ್ಲಿ ಈ ಹೋರಾಟಕ್ಕೆ ನಾವೆಲ್ಲಾ ಕಂಡಿತ ಬೆಂಬಲ ಕೊಡಬೇಕು. ಕೊಡುತ್ತೇವೆ ಎಂದು ತಿಳಿಸಿದ್ದಾರೆ. 

ಇದನ್ನೂ ಓದಿ : Kangana Ranaut : ಪಂಜಾಬ್ ಭಯೋತ್ಪಾದಕ ಚಟುವಟಿಕೆಗಳ ಕೇಂದ್ರವಾಗುತ್ತಿದೆ : ಕಂಗನಾ ರಣಾವತ್

ಈ ಕುರಿತು ಮಾತನಾಡಿದ ಹಿರಿಯ ನಟಿ, ಮಾಜಿ ಸಚಿವೆ, ಉಮಾಶ್ರೀ(Umashree), ಮೇಕೆ ದಾಟು ಹೋರಾಟದ ಬಗ್ಗೆ ನಿಮಗೆಲ್ಲಾ ಗೊತ್ತಿದೆ. ಒಂದು ವಾರದಿಂದ ಈ ಹೋರಾಟಕ್ಕೆ ತಯಾರಿ ನಡೆದಿದೆ. ಇಂತಹ ಸಂಧರ್ಭದಲ್ಲಿ ನಾವು ಜನರ ಋಣ ಸಂದಾಯ ಮಾಡಬೇಕು. ಈಗ ಅವರಿಗೋಸ್ಕರ ನಮ್ಮ ಹೋರಾಟ ಇರಬೇಕು. ಹೇಗೆಲ್ಲಾ ಸಾಧ್ಯವಾಗುತ್ತೋ ಹಾಗೆ ನಮ್ಮ ಹೋರಾಟ ನೀಡಬೇಕು. ನಟಿಯರು ನಟರು, ಹಿರಿಯ ಕಲಾವಿಧರು ಎಲ್ಲರೂ ಸಾಧ್ಯವಾದಷ್ಟು ಬೆಂಬಲ ಕೊಡಿ. ಪಾದಯಾತ್ರೆಗೆ ಬರಲು ಆಗಿಲ್ಲವಂದರೆ ಮುಂದಿನ‌ ವಾರ ಹೋರಾಟಕ್ಕೆ ಬರಲೇ ಬೇಕು. ಎರಡು‌ ದಿನ ಕರ್ಫ್ಯೂ ಇರುತ್ತೆ ಅದು ಮುಗಿದ ಬಳಿಕ ಬೆಂಬಲ ಕೊಡಿ ಎಂದು ಸಿನಿ ಕಲಾವಿದರಲ್ಲಿ ಮನವಿ ಮಾಡಿಕೊಂಡರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More